ಇಮೈಲ್ ವಿಳಾಸ 
     ಪಾಸ್ವರ್ಡ್  
    : : : : ಮುಖ ಪುಟ : : : :


ಇದು ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಗಳನ್ನು ಒದಗಿಸುವತ್ತ ಒಂದು ಪುಟ್ಟ ಹೆಜ್ಜೆ. ಕನ್ನಡಿಗರು ಇಲ್ಲಿ ನೋಂದಾವಣಿ ಮಾಡಿಕೊಂಡು ಕೆಲಸಕ್ಕಾಗಿ ತಮ್ಮ CV ಗಳನ್ನು ಹಾಕಬಹುದು. ಸಂಸ್ಥೆಗಳಲ್ಲಿ ಇರುವ ಕನ್ನಡಿಗರು ಇಲ್ಲಿಂದ ಕನ್ನಡಿಗರನ್ನು ಕೆಲಸಕ್ಕಾಗಿ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡು ಸಂದರ್ಶನ ನಡೆಸಿ ಅವರನ್ನು ನೇಮಕಮಾಡಿಕೊಳ್ಳಬಹುದು.

ಕನ್ನಡಿಗ ಉದ್ಯೋಗಿಗಳ ಸಂಖ್ಯೆ ಸಂಸ್ಥೆಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿರುವ ಸಂಸ್ಥೆಗಳಲ್ಲಿ ತುಂಬಾ ಕಡಿಮೆ ಇದೆ ಎನ್ನುವುದು ಎಲ್ಲರಿಗೂ ತಿಳಿಯದ ವಿಷಯವೇನಲ್ಲ. ಹಾಗೆಯೇ ಗ್ರಾಮೀಣ ಪ್ರದೇಶಗಳ ಯುವಕರು ಉದ್ಯೋಗಾವಕಾಶಗಳಿಂದ ವಂಚಿತರಾಗಿರುವುದೂ ಕಟು ಸತ್ಯ. ಈ ನಿಟ್ಟಿನಲ್ಲಿ ಅವರ ಸಂಖ್ಯೆಯನ್ನು/ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಅನುಕೂಲವಾಗುವಂತಹ ನಿಟ್ಟಿನಲ್ಲಿ ಈ ತಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಒದಗಿಸಲಾಗಿರುವ ಮುಖ್ಯ ಸೌಲಭ್ಯಗಳು:

  ಎಲ್ಲೆಲ್ಲಿ ಕೆಲಸ ಖಾಲಿ ಇದೆ ಎನ್ನುವ ವಿವರಗಳು
  ಕೆಲಸ ಹುಡುಕುತ್ತಿರುವವರ CV ಗಳ ಅಪ್ಲೋಡ್
  ಕೆಲಸ ಖಾಲಿ ಇರುವ ವಿವರಗಳ ಪ್ರಕಟಣೆ
  ಖಾಲಿ ಇರುವ ಕೆಲಸಕ್ಕಾಗಿ ಉದ್ಯೋಗಾರ್ಥಿಗಳ ಆಯ್ಕೆ
  ಕೆಲವು ಉಪಯುಕ್ತ ಸಂಪನ್ಮೂಲಗಳು

ಈ ತಾಣವನ್ನು www.eShale.org ತಂಡವು ಪ್ರಾಯೋಜಿಸಿ ಅಭಿವೃದ್ಧಿಪಡಿಸಿ ನಿಮ್ಮ ಮುಂದೆ ಇಡುತ್ತಿದೆ. ನಿಮ್ಮ ಸಲಹೆ/ಸೂಚನೆ/ಅಭಿಪ್ರಾಯ/ಟೀಕೆ ಟಿಪ್ಪಣಿಗಳನ್ನು contactkmitra@gmail.com ಗೆ ಕಳಿಸಿ. ಈ ತಾಣದಿಂದ ನಿಮಗೇನಾದರೂ ಪ್ರಯೋಜನವಾಗಿದ್ದರೆ ,ಈ ತಾಣದ ಇರುವಿಕೆಯನ್ನು ಇತರ ಕನ್ನಡಿಗರೊಂದಿಗೆ ಹಂಚಿಕೊಳ್ಳಿ ಹಾಗೂ ಕೆಲ ಕನ್ನಡಿಗರಿಗೆ ಕೆಲಸಕೊಡಿಸಿ.

All rights reserved. Copyright kannadamitra.com This site uses unicode to display characters in Kannada.