ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ | ಇನ್ಮುಂದೆ ಹೊರಗಿದ್ದರೂ ಮೊಬೈಲ್‌ಗೆ ಮನೆಯ ಹೈಸೀಡ್ ಫೈಬರ್ ಇಂಟರ್‌ನೆಟ್ ಬಳಸಬಹುದು...  BSNL Sarvatra Wifi high speed internet anywhere

ಖಾಸಗಿ ಟೆಲಿಕಾಂ ಕಂಪನಿಗಳ ಅಬ್ಬರದಲ್ಲಿ ಮುಳುಗಡೆಯಾಗಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಹೊಸ ಚೈತನ್ಯದೊಂದಿಗೆ ಪುಟಿದೆದ್ದಿದ್ದು; ಇದೀಗ ತನ್ನ ಗ್ರಾಹಕರಿಗೆ ಹೈಸ್ಪೀಡ್ ಇಂಟರ್‌ನೆಟ್ (high-speed internet) ಸೇವೆ ಒದಗಿಸಲು Sarvatra Wifi ಹೊಸ ಯೋಜನೆ ಜಾರಿಗೆ ತಂದಿದೆ....

Sep 28, 2024 - 17:02
WhatsApp - 1 WhatsApp - 2 WhatsApp - 3 Join Telegram

ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ | ಇನ್ಮುಂದೆ ಹೊರಗಿದ್ದರೂ ಮೊಬೈಲ್‌ಗೆ ಮನೆಯ ಹೈಸೀಡ್ ಫೈಬರ್ ಇಂಟರ್‌ನೆಟ್ ಬಳಸಬಹುದು...  BSNL Sarvatra Wifi high speed internet anywhere

Kannada Mitra - News Desk.

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ ನಿಯಮಿತ (Bharat Sanchar Nigam Pvt Ltd - BSNL) ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಖಾಸಗಿ ಟೆಲಿಕಾಂ ಕಂಪನಿಗಳ ಅಬ್ಬರದಲ್ಲಿ ಮುಳುಗಡೆಯಾಗಿದ್ದ ಬಿಎಸ್‌ಎನ್‌ಎಲ್ ಹೊಸ ಚೈತನ್ಯದೊಂದಿಗೆ ಪುಟಿದೆದ್ದಿದ್ದು; ಇದೀಗ ತನ್ನ ಗ್ರಾಹಕರಿಗೆ ಹೈಸ್ಪೀಡ್ ಇಂಟರ್‌ನೆಟ್ (high-speed internet) ಸೇವೆ ಒದಗಿಸಲು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ.

ಇನ್ಮುಂದೆ ಎಲ್ಲಿದ್ದರೂ ಕೂಡ ಮನೆಯಲ್ಲಿ ಬಳಸಲಾಗುತ್ತಿದ್ದ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ (Broadband Internet) ಸೇವೆಯನ್ನು ಗ್ರಾಹಕರು ತಮ್ಮ ಮೊಬೈಲ್‌ಗೂ ಪಡೆಯಬಹುದಾಗಿದೆ. ಬಿಎಸ್‌ಎನ್‌ಎಲ್ ಈ ಹೊಸ ತಂತ್ರಜ್ಞಾನವು ಮುಂಬರುವ ದಿನಗಳಲ್ಲಿ ಬಳಕೆದಾರ ಮನೆಯಿಂದ ದೂರವಿದ್ದರೂ ಮನೆಯಲ್ಲಿನ ಫೈಬರ್ ಸಂಪರ್ಕದ ಮೂಲಕ ಹೈಸೀಡ್ ಇಂಟರ್‌ನೆಟ್ ಸೇವೆ ಪಡೆಯಬಹುದು. 

‘ಸರ್ವತ್ರ’ (BSNL Sarvatra technology) ಹೆಸರಿನ ಈ ನೂತನ ಯೋಜನೆ ಟೆಲಿಕಾಂ ವಲಯದಲ್ಲಿ ಕ್ರಾಂತಿ ತರುವ ನಿರೀಕ್ಷೆಯಿದೆ. ಬಿಎಸ್‌ಎನ್‌ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಬರ್ಟ್ ಜೆ. ರವಿ ಸರ್ವತ್ರ ಯೋಜನೆಯನ್ನು ಪರಿಚಯಿಸಿದ್ದು;  ಈ ಯೋಜನೆಯ ಪ್ರಾಯೋಗಿಕ ಹಂತವು ಈಗಾಗಲೇ ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ಕೇರಳದಲ್ಲಿ ಈ ಸೇವೆ ಪ್ರಾರಂಭವಾಗಲಿದ್ದು; ಕ್ರಮೇಣ ಭಾರತದಾದ್ಯಂತ ವಿಸ್ತರಿಸಲಿದೆ.

ಇದನ್ನೂ ಓದಿ: ನೀವೂ ವಿದೇಶಕ್ಕೆ ಹೋಗಬೇಕಾ? ಹಾಗಾದರೆ ಪಾಸ್‌ಪೋರ್ಟ್'ಗೆ ಅರ್ಜಿ ಹಾಕೋದೆಲ್ಲಿ? ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ...

ಏನಿದು ಸರ್ವತ್ರ ಯೋಜನೆ?

ಬಿಎಸ್‌ಎನ್‌ಎಲ್ ಈಗಾಗಲೇ ದೇಶಾದ್ಯಂತ ಫೈಬರ್ ಟು ದಿ ಹೋಮ್ (Fiber to the Home - FTTH) ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಸಂಪರ್ಕ ತಂತ್ರಜ್ಞಾನದ ಜಾಲವನ್ನು ಹೊಂದಿದೆ. ಸಂಸ್ಥೆಯ ಹೊಸ ಸರ್ವತ್ರ ಯೋಜನೆಗೆ ಎಫ್‌ಟಿಟಿಎಚ್ ತಂತ್ರಜ್ಞಾನವೇ ಮೂಲಾಧರವಾಗಿದೆ. ಆಸ್ತಿತ್ವದಲ್ಲಿರುವ ಫೈಬರ್ ಟು ದಿ ಹೋಮ್ ಜಾಲ ಬಳಸಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿರುವ ಬಳಕೆದಾರರಿಗೆ ಹೈಸ್ಪೀಡ್ ಇಂಟರ್‌ನೆಟ್ ಸೇವೆ ಕಲ್ಪಿಸಲು ಬಿಎಸ್‌ಎನ್‌ಎಲ್ ಸನ್ನದ್ಧವಾಗಿದೆ.

ಸದರಿ ಯೋಜನೆಯು ಸದ್ಯಕ್ಕೆ ಕೇರಳದಲ್ಲಿ ಪ್ರಾಯೋಗಿಕ ಹಂತದಲ್ಲಿದ್ದು; ಈ ತಂತ್ರಜ್ಞಾನವು ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಹಕರಿಗೆ ಹೈಸ್ಪೀಡ್ ಇಂಟರ್‌ನೆಟ್ ಸೇವೆ ವಿಸ್ತರಿಸಲು ನೆರವಾಗಲಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ನೋಂದಣಿ ಮಾಡಿಕೊಳ್ಳಬೇಕಿದೆ. ಸರ್ವತ್ರ ಯೋಜನೆಯು ಸುರಕ್ಷೆ ಮತ್ತು ಭದ್ರತೆಯಿಂದ ಕೂಡಿದೆ ಎಂದು ಬಿಎಸ್‌ಎನ್‌ಎಲ್ ಭರವಸೆ ನೀಡಿದೆ.

ಇತ್ತೀಚೆಗಷ್ಟೇ ಬಿಎಸ್‌ಎನ್‌ಎಲ್ ಕೇರಳದಲ್ಲಿ 4G ಯ 1,000 ಟವರ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. ಅದರಂತೆ ಕೇರಳದಲ್ಲಿ ಆದಷ್ಟು ಬೇಗ 4G ಸೇವೆ ಆರಂಭಿಸಲು ಮುಂದಾಗಿದೆ. ಇದಕ್ಕಾಗಿ ಸಂಸ್ಥೆ ಕೇರಳ ಸೇರಿ ದೇಶಾದ್ಯಂತ ಸ್ಥಳೀಯ 4G ಜಾಲ ಸ್ಥಾಪಿಸಲಾಗಿದೆ. 

ಇದನ್ನೂ ಓದಿ: ಕಾನೂನು ಶಿಕ್ಷಣಕ್ಕೆ ಕಠಿಣ ನಿಯಮಗಳು ಜಾರಿ | ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿಗಳು Strict rule for legal education BCI New Guidelines

ಪ್ರತಿಯೊಬ್ಬರಿಗೂ ವೇಗದ ಇಂಟರ್‌ನೆಟ್

ಭಾರತವಾದ್ಯಂತ ಗ್ರಾಮಗಳಿಗೆ ಹೈಸ್ಪೀಡ್ ಇಂಟರ್‌ಟ್ ಒದಗಿಸುವುದು Sarvatra Wifi ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯ ಮುಖ್ಯ ಅನಕೂಲವೆಂದರೆ ಬಳಕೆದಾರರು ಮೊಬೈಲ್ ಡೇಟಾಗಾಗಿ ಕಡಿಮೆ ಹಣವನ್ನು ಖರ್ಚು ಮಾಡಬಹುದು. ಬಳಕೆದಾರ ಮೊಬೈಲ್ ಡೇಟಾ ಮೇಲೆ ಅವಲಂಬಿತನಾಗುವುದನ್ನು ಕಡಿಮೆ ಮಾಡಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ. 

ಪ್ರತಿಯೊಬ್ಬರಿಗೂ ವೇಗದ ಇಂಟರ್‌ನೆಟ್ ಸೇವೆ ಒದಗಿಸುವ ಉದ್ದೇಶದಿಂದ ಸರ್ವತ್ರ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಅದರಲ್ಲಿಯೂ ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿನ ಜನರಿಗೆ, ಶಿಕ್ಷಣ ಸಂಸ್ಥೆಗಳು, ಉದ್ಯಮಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ದೇಶದ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲು ಇದು ನೆರವಾಗಲಿದೆ.

Sarvatra Wifi ನೋಂದಣಿ ಹೇಗೆ?

ಬಿಎಸ್‌ಎನ್‌ಎಲ್‌ನ ಈ ಸೇವೆ ಪಡೆಯಲು ಗ್ರಾಹಕರು ಸರ್ವತ್ರ ಯೋಜನೆಯಲ್ಲಿ ನೋಂದಾಯಿ ಕೊಳ್ಳುವುದು ಅಗತ್ಯ. ಬಿಎಸ್‌ಎನ್‌ಎಲ್ ಸಾಧ್ಯವಾದ್ಟು ಈ ವಿಶೇಷ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಜನರನ್ನು ಪ್ರೋತ್ಸಾಹಿಸುತ್ತಿದೆ. ಆಸಕ್ತಿಯುಳ್ಳ ಗ್ರಾಹಕರು ಬಿಎಸ್‌ಎನ್‌ಎಲ್ ಅಧಿಕೃತ ವೆಬ್‌ಸೈಟ್ ಅಥವಾ ಹತ್ತಿರದ ಬಿಎಸ್‌ಎನ್‌ಎಲ್ ಕಚೇರಿಗೆ ತೆರಳಿ ನೋಂದಾಯಿಸಿಕೊಳ್ಳಬಹುದು.

ಒಮ್ಮೆ ನೋಂದಾಯಿಸಿದ ನಂತರ ಎಫ್‌ಟಿಟಿಎಚ್ ಸಂಪರ್ಕದ ಮೂಲಕ ಸರ್ವತ್ರ ಸಕ್ರಿಯಗೊಳ್ಳುತ್ತದೆ. ಇದು ಬಳಕೆದಾರ ಮತ್ತೊಂದು ಸ್ಥಳದಲ್ಲಿ ವೈ-ಫೈ ಪಾಸ್‌ವರ್ಡ್ (Wi-Fi password) ಅಥವಾ ಯೂಸರ್ ಐಡಿಯ ಅಗತ್ಯತೆ ಬೇಕಿರುವುದಿಲ್ಲ. ಸರ್ವತ್ರ ಪೋರ್ಟಲ್ ಮರ್ಚುವಲ್ ಟನರ್‌ನಂತೆ ಕಾರ್ಯ ನಿರ್ವಹಿಸುವುದರೊಂದಿಗೆ ಇಂಟರ್‌ನೆಟ್ ಸಂಪರ್ಕವನ್ನು ಖಾತ್ರಿಗೊಳಿಸುತ್ತದೆ. ಜತೆಗೆ ಈ ವ್ಯವಸ್ಥೆಯು ಎಲ್ಲೆಡೆ ಸುರಕ್ಷಿತೆಗೆ ಒತ್ತು ನೀಡಲಾಗಿದೆ. 

ಇದನ್ನೂ ಓದಿ: ಈ ಲಕ್ಷಣಗಳು ಇದ್ದರೆ ಮಾತ್ರ ಅದು ಶುದ್ಧ ಬಂಡೂರು ಕುರಿ Pure Bandur Sheep Characteristics

WhatsApp - 1 WhatsApp - 2 WhatsApp - 3 Join Telegram