ದಾಖಲೆಯ ಬೆಲೆ ಕಂಡ ಚಿನ್ನ ಬೆಳ್ಳಿ | ಲಕ್ಷ ರೂಪಾಯಿ ಗಡಿ ದಾಟಲಿರುವ ಉಭಯ ಲೋಹಗಳು Gold and Silver Price Uptrend
ಚಿನ್ನ ಮತ್ತು ಬೆಳ್ಳಿಯ ಬೆಲೆ ದಿನೇ ದಿನೆ ಏರುಗತಿಯಾಗುತ್ತಿದೆ. ಇದೇ ರೀತಿಯ ಬೆಲೆ ಏರಿಕೆ ಭರಾಟೆ ಮುಂದುವರೆದರೆ ಬಹುಶಃ ಹತ್ತು ಗ್ರಾಮ್ ಚಿನ್ನದ ಬೆಲೆ ಹಾಗೂ ಕೆ.ಜಿಗೆ ಬೆಳ್ಳಿಯ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಾಟುವ ಲಕ್ಷಣಗಳಿವೆ ಎಂದು ಆಭರಣ ವ್ಯಾಪಾರಿಗಳು ಅಂದಾಜಿಸಿದ್ದಾರೆ...
WhatsApp - 1 | WhatsApp - 2 | WhatsApp - 3 | Join Telegram |
Kannada Mitra - News Desk.
ಚಿನ್ನ ಮತ್ತು ಬೆಳ್ಳಿಯ ಬೆಲೆ (Gold and silver price) ದಿನೇ ದಿನೆ ಏರುಗತಿಯಾಗುತ್ತಿದೆ. ಈ ಹಣಕಾಸು ವರ್ಷದ ಆರಂಭದಲ್ಲಿ 10 ಗ್ರಾಂ ಆಭರಣ ಚಿನ್ನದ ದರ 68,700 ರೂಪಾಯಿ ಇತ್ತು. ಆದರೆ ಇದೀಗ (ಸೆಪ್ಟೆಂಬರ್ 28) ಈ ಬೆಲೆ 72,220 ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಅಂದರೆ ಬರೋಬ್ಬರಿ 3,520 ರೂಪಾಯಿ ಏರಿಕೆ ಕಂಡಿದೆ.
ಇನ್ನು ಬೆಳ್ಳಿ ಬೆಲೆಯ ಏರುಗತಿ ನೋಡುವುದಾದೆ ಈ ಹಣಕಾಸು ವರ್ಷದ ಆರಂಭದಲ್ಲಿ ಒಂದು ಕೆ.ಜಿ ಬೆಳ್ಳಿದರ 75,000 ರೂಪಾಯಿ ಇತ್ತು. ಇದೀಗ ಇದೀಗ ಈ ಬೆಲೆ ಸೆಪ್ಟೆಂಬರ್ 28ಕ್ಕೆ 93,100 ರೂಪಾಯಿಗೆ ಜಿಗಿದಿದೆ. ಅಂದರೆ, 18,100 ರೂಪಾಯಿ ಏರಿಕೆ ಕಂಡಿದೆ.
ಇದೇ ರೀತಿಯ ಬೆಲೆ ಏರಿಕೆ ಭರಾಟೆ ಮುಂದುವರೆದರೆ ಬಹುಶಃ ಹತ್ತು ಗ್ರಾಮ್ ಚಿನ್ನದ ಬೆಲೆ ಹಾಗೂ ಕೆ.ಜಿಗೆ ಬೆಳ್ಳಿಯ ಬೆಲೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ದಾಟುವ ಲಕ್ಷಣಗಳಿವೆ ಎಂದು ಆಭರಣ ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಇದು ಜಗತ್ತಿನಲ್ಲಿ ಅತಿ ಹೆಚ್ಚು ಬಲಿ ಪಡೆಯುತ್ತಿರುವ ರೋಗ World Heart Day Cardiovascular Diseases
ಬೆಲೆ ಏರಿಕೆ ಕಾರಣಗಳು
ಕೇಂದ್ರ ಸರಕಾರವು ಕಳೆದ ಜುಲೈ ತಿಂಗಳಿನಲ್ಲಿ ಅಬಕಾರಿ ಸುಂಕ ಇಳಿಸಿದ ಬಳಿಕ ಖರೀದಿ ಭರಾಟೆ ಜೋರಾಗಿದೆ. ಅದರ ಜತೆಗೆ ಈ ಸಲ ಮುಂಗಾರು ಉತ್ತಮವಾಗಿರುವ ಕಾರಣ ಹಬ್ಬದ ಋತುವಿನಲ್ಲಿ ಆಭರಣ ಖರೀದಿ ಜೋರಾಗುವ ನಿರೀಕ್ಷೆ ಇದೆ.
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾರ್ಷಿಕ ಶೇ.10ರಷ್ಟು ಏರಿಕೆ ಕಾಣುತ್ತಿದ್ದ ಚಿನ್ನದ ದರ ಈ ಬಾರಿ ಅತ್ಯಧಿಕ ಶೇ.40ರಷ್ಟು ಏರಿಕೆ ಕಂಡಿದೆ. ಯುದ್ಧ ಸೇರಿದಂತೆ ಜಾಗತಿಕ ರಾಜಕೀಯ, ಭೌಗೋಳಿಕ ಪರಿಸ್ಥಿತಿಗಳೂ ಇದಕ್ಕೆ ಕಾರಣವಾಗಿದೆ.
ಇದೆಲ್ಲದರ ನಡುವೆ ಅಮೆರಿಕದ ಫೆಡರಲ್ ರಿಸರ್ವ್ ಇತ್ತೀಚೆಗೆ ಬಡ್ಡಿದರ ಇಳಿಸಿರುವುದು ಹಾಗೂ ಈ ದರವನ್ನು ಮತ್ತಷ್ಟು ಇಳಿಕೆ ಮಾಡುವ ನಿರೀಕ್ಷೆಯೂ ಚಿನ್ನದ ದರದ ಏರಿಕೆಗೆ ಮತ್ತೊಂದು ಕಾರಣ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: ನೀವೂ ವಿದೇಶಕ್ಕೆ ಹೋಗಬೇಕಾ? ಹಾಗಾದರೆ ಪಾಸ್‌ಪೋರ್ಟ್'ಗೆ ಅರ್ಜಿ ಹಾಕೋದೆಲ್ಲಿ? ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ...
ಬೆಲೆಯಲ್ಲಿ ಗಮನಾರ್ಹ ಜಿಗಿತ
ಆಮದು ಸುಂಕ ಕಡಿತದ ನಂತರ ಆರಂಭಿಕ ಏರಿಕೆ ಕಂಡ ಚಿನ್ನದ ಬೇಡಿಕೆ ದೃಢವಾಗಿಯೇ ಉಳಿದುಕೊಂಡಿದೆ. ಆಭರಣಗಳು, ಗಟ್ಟಿಗಳು ಮತ್ತು ನಾಣ್ಯಗಳ ಬೇಡಿಕೆ ಸ್ಥಿರವಾಗಿದೆ. ಇಟಿಎಫ್ ಖರೀದಿ, ಕೇಂದ್ರೀಯ ಬ್ಯಾಂಕ್ ಖರೀದಿ ಮತ್ತು ಕೆಲ ದೇಶಗಳ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ಬಂಗಾರದ ಬೆಲೆ ಏರಿಕೆಯಾಗಿದೆ.
ಎಲೆಕ್ಟಿçಕ್ ವಾಹನಗಳು ಮತ್ತು ಸೌರ ಫಲಕಗಳಂತಹ ಉತ್ಪನ್ನಗಳ ತಯಾರಿಕೆಯಲ್ಲಿ ಬೆಳ್ಳಿ ಬಳಕೆ ಹೆಚ್ಚುತ್ತಿದೆ. ಕೆಲವೊಂದು ದೇಶಗಳಲ್ಲಿ ಆರ್ಥಿಕ ಹಿಂಜರಿಕೆ ಭೀತಿಯಿಂದ ಕೆಲ ತಿಂಗಳು ಬೆಳ್ಳಿ ಬೆಲೆಯಲ್ಲಿ ವೇಗವರ್ಧನೆಯಾಗಲಿಲ್ಲ. ಹಬ್ಬದ ಋತು ಸಮೀಪಿಸಿದಂತೆ ಜನ ಬೆಳ್ಳಿ ಪದಾರ್ಥಗಳ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ ಕೆಲ ತಿಂಗಳಿನಿಂದ ಅದರ ಬೆಲೆಯಲ್ಲಿ ಜಿಗಿತಗಳಾಗುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ | ಇನ್ಮುಂದೆ ಹೊರಗಿದ್ದರೂ ಮೊಬೈಲ್‌ಗೆ ಮನೆಯ ಹೈಸೀಡ್ ಫೈಬರ್ ಇಂಟರ್‌ನೆಟ್ ಬಳಸಬಹುದು...
WhatsApp - 1 | WhatsApp - 2 | WhatsApp - 3 | Join Telegram |