ಸಣ್ಣ ರೈತರ ಆದಾಯ ಹೆಚ್ಚಿಸುವ ಬಹುಪದರ ಬೆಳೆ ಪದ್ಧತಿ Multilayer Farming System
ಬಹು ಪದರ ಬೆಳೆ ಪದ್ಧತಿ ಎಂದರೆ ವಿವಿಧ ಬಗೆಯ ಬೆಳೆಗಳನ್ನು ಒಂದೇ ಕ್ಷೇತ್ರದಲ್ಲಿ ಒಂದೇ ಸಮಯದಲ್ಲಿ ಒಂದಕ್ಕೊಂದು ಪೂರಕವಾದ ಬೆಳೆಗಳನ್ನು ಬೆಳೆಯುವುದು ಎಂದರ್ಥ. ಸಾಮಾನ್ಯವಾಗಿ ಈ ಪದ್ಧತಿಯನ್ನು ಹೆಚ್ಚು ಆದಾಯ ಗಳಿಸಬಹುದಾದ ತೋಟಗಾರಿಕಾ ಬೆಳೆಗಳಲ್ಲಿ ಸೌರಶಕ್ತಿಯ ಸದ್ಭಳಕೆಗಾಗಿ ಅನುಸರಿಸಲಾಗುತ್ತದೆ...
WhatsApp - 1 | WhatsApp - 2 | WhatsApp - 3 | Join Telegram |
Kannada Mitra - News Desk.
ದಿನೇ ದಿನೇ ಕ್ಷೀಣಿಸುತ್ತಿರುವ ಕೃಷಿ ಭೂಮಿ, ಕೀಟ ರೋಗ ಸಮಸ್ಯೆ, ನೀರಿನ ಕೊರತೆ ಹಾಗೂ ಕುಸಿಯುತ್ತಿರುವ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಬಹು ಪದರ ಬೆಳೆ ಪದ್ಧತಿ (Multilayer Farming System) ಸಣ್ಣ ರೈತರಿಗೆ ವರದಾನವಾಗಿದೆ.
ಬಹು ಪದರ ಬೆಳೆ ಪದ್ಧತಿ ಎಂದರೆ ವಿವಿಧ ಬಗೆಯ ಬೆಳೆಗಳನ್ನು ಒಂದೇ ಕ್ಷೇತ್ರದಲ್ಲಿ ಒಂದೇ ಸಮಯದಲ್ಲಿ ಒಂದಕ್ಕೊಂದು ಪೂರಕವಾದ ಬೆಳೆಗಳನ್ನು ಬೆಳೆಯುವುದು ಎಂದರ್ಥ. ಸಾಮಾನ್ಯವಾಗಿ ಈ ಪದ್ಧತಿಯನ್ನು ಹೆಚ್ಚು ಆದಾಯ ಗಳಿಸಬಹುದಾದ ತೋಟಗಾರಿಕಾ ಬೆಳೆಗಳಲ್ಲಿ ಸೌರಶಕ್ತಿಯ ಸದ್ಭಳಕೆಗಾಗಿ ಅನುಸರಿಸಲಾಗುತ್ತದೆ.
ವಿಶೇಷ ಅಂತರ ಬೆಳೆ ಪದ್ಧತಿ
ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಜೊತೆ ಜೊತೆಯಾಗಿ ಒಂದೇ ಕ್ಷೇತ್ರದಲ್ಲಿ ವಿವಿಧ ಎತ್ತರಗಳಲ್ಲಿ ಬೆಳೆಯಲಾಗುತ್ತದೆ. ಲಂಬ ಜಾಗವನ್ನು ಹೆಚ್ಚು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವುದು ಇದರ ಉದ್ದೇಶ. ಬಹು ಪದರ ಬೆಳೆ ಪದ್ಧತಿಯನ್ನು ಮಲ್ಟಿಸ್ಟೋರೀಡ್ ಕ್ರಾಪಿಂಗ್ (Multistoried cropping) ಮತ್ತು ಮಲ್ಟಿಟೈರ್ ಫರ‍್ಮಿಂಗ್ (multitier farming) ಎಂದೂ ಕರೆಯುತ್ತಾರೆ. ಇದು ಒಂದು ರೀತಿಯ ಅಂತರ ಬೆಳೆ.
ಒಂದೇ ಹೊಲದಲ್ಲಿ ಒಂದೇ ಸಮಯದಲ್ಲಿ ವಿವಿಧ ಎತ್ತರದ ಸಸ್ಯಗಳನ್ನು ಬೆಳೆಯುವುದನ್ನು ಮಲ್ಟಿ ಲೇಯರ್ ಕ್ರಾಪಿಂಗ್ (Multi-layer Cropping) ಎಂದು ಕರೆಯಲಾಗುತ್ತದೆ. ಕೃಷಿ ಭೂಮಿಯ ಲಭ್ಯತೆ ಕಡಿಮೆ ಇರುವುದರಿಂದ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸುವ ಸಮಸ್ಯೆಯನ್ನು ಪರಿಹರಿಸಬಹುದು.
ಇದನ್ನೂ ಓದಿ: ಈ ಲಕ್ಷಣಗಳು ಇದ್ದರೆ ಮಾತ್ರ ಅದು ಶುದ್ಧ ಬಂಡೂರು ಕುರಿ Pure Bandur Sheep Characteristics
ಅತಿ ಸಣ್ಣ ರೈತರಿಗೆ ವರದಾನ
ಭಾರತದಲ್ಲಿ ಸುಮಾರು ಶೇ. 62% ಸಣ್ಣ, 19% ಅತಿ ಸಣ್ಣ ಹಾಗೂ 12% ಮದ್ಯಮ ವರ್ಗದ ರೈತರಿದ್ದಾರೆ. ದೇಶದ ಜನಸಂಖ್ಯೆಯ ಬಹುಪಾಲು ರೈತರು ಅತೀ ಕಡಿಮೆ ಉಳುವ ಭೂಮಿಯನ್ನು ಹೊಂದಿದ್ದು ಬಹಪದರ ಕೃಷಿ ಅಳವಡಿಸಿಕೊಳ್ಳುವುದರಿಂದ ಇರುವ ಭೂಮಿಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದಲ್ಲದೇ ಹೆಚ್ಚು ವೈವಿಧ್ಯಮಯ ಬೆಳೆಗಳನ್ನು ಅಂದರೇ ಹಣ್ಣು, ತರಕಾರಿ, ಹೂವು, ಔಷಧೀಯ ಬೆಳೆ ಹಾಗೂ ಕೃಷಿ ಬೆಳೆ ಬೆಳೆದು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬಹುದು.
ಬಹು ಪದರ ವ್ಯವಸ್ಥೆಯ ಪ್ರಯೋಜನಗಳು
ಬಹುಪದರ ಕೃಷಿಯು ಸುಸ್ಥಿರ ರೀತಿಯ ಕೃಷಿಗೆ ಬದಲಾಗಲು ಪ್ರೇರೆಪಿಸುತ್ತದೆ ಮತ್ತು ಏಕಕಾಲದಲ್ಲಿ ಇಡೀ ಮನೆಯ ಆಹಾರ ಮತ್ತು ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಪೂರೈಸುತ್ತದೆ. ಆದರೆ ನಗದು ಬೆಳೆ ಉತ್ಪಾದನೆಯಿಂದ ಇಂತಹ ಅವಕಾಶಗಳು ಇಲ್ಲ. ಅಲ್ಲಿ ಕೇವಲ ಆದಾಯವನ್ನು ಗಳಿಸುತ್ತೇವೆ.
ಮಣ್ಣು, ನೀರು ಮತ್ತು ಇತರ ಸಂಪನ್ಮೂಲಗಳು ಉತ್ತಮವಾಗಿ ಬಳಕೆಯಾಗುತ್ತದೆ. ಬೆಳೆ ಕ್ಷೇತ್ರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ ಮತ್ತು ಮಣ್ಣಿನ ಗುಣಲಕ್ಷಣ ಸುಧಾರಿಸುತ್ತದೆ. ಪರಿಸರ ಸಮತೋಲನ ಕಾಪಾಡುತ್ತದೆ. ಮಣ್ಣಿನಲ್ಲಿ ನೀರಿನ ಆವಿಯಾಗುವಿಕೆ ತಡೆದು ಶೇ.70ರಷ್ಟು ನೀರನ್ನು ಉಳಿಸಬಹುದು.
ಪ್ರತಿ ಕ್ಷೇತ್ರದ ಆದಾಯವು ಈ ವ್ಯವಸ್ಥೆಯಲ್ಲಿ ಗಣನೀಯವಾಗಿ ಹೆಚ್ಚುತ್ತದೆ. ಹಲವಾರು ಬೆಳೆಗಳನ್ನು ನಿರಂತರವಾಗಿ ಕೊಯ್ಲು ಮಾಡುವುದರಿಂದ ವರ್ಷವಿಡೀ ಆದಾಯ ಮತ್ತು ಉದ್ಯೋಗದ ಸಮನಾದ ಹಂಚಿಕೆ ಖಾತ್ರಿಗೊಳಿಸುತ್ತದೆ.
ಇದನ್ನೂ ಓದಿ: 14,298 ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಐಟಿಐ, ಪದವೀಧರರಿಗೆ ಅವಕಾಶ
ಬೆಳೆ ಇಳುವರಿ ನಷ್ಟದ ಅಪಾಯಗಳನ್ನು ಕಡಿಮೆ ಮಾಡಿ, ವರ್ಷ ಪೂರ್ತಿ ಕೃಷಿ ಉತ್ಪನ್ನಗಳ ಸ್ಥಿರ ಪೂರೈಕೆ ಸಾಧ್ಯವಾಗುತ್ತದೆ. ಉದ್ಯೋಗ ಸೃಷ್ಠಿಯಾಗುತ್ತವೆ ಮತ್ತು ಉತ್ತಮ ಕಾರ್ಮಿಕ ಬಳಕೆಯ ಮಾದರಿ ಒದಗಿಸುತ್ತದೆ.
ಹೆಚ್ಚಿನ ತೀವ್ರತೆಯ ಮಳೆ, ಮಣ್ಣಿನ ಸವೆತ, ಭೂ ಕುಸಿತದಂತಹ ಅಪಾಯಗಳ ಪರಿಣಾಮ ಕಡಿಮೆ ಮಾಡುತ್ತದೆ. ಮಣ್ಣಿನ ತೇವಾಂಶವನ್ನು ವಿವಿಧ ಆಳಗಳಲ್ಲಿ ಚೆನ್ನಾಗಿ ಬಳಸಿಕೊಳ್ಳುತ್ತದೆ ಮತ್ತು ಸೌರಶಕ್ತಿಯನ್ನು ವಿವಿಧ ಎತ್ತರಗಳಲ್ಲಿ ಹಿಡಿಯುತ್ತದೆ.
ಮಣ್ಣಿನ ಗುಣಲಕ್ಷಣ ಸುಧಾರಿಸಿ ಸಾವಯವ ಪದಾರ್ಥವನ್ನು ಮಣ್ಣಿನಲ್ಲಿ ಸೇರಿಸುತ್ತದೆ. ಲೀಚಿಂಗ್ ವಸ್ತುಗಳ ಪರಿಣಾಮಕಾರಿ ಬಳಕೆ ಮತ್ತು ಪರಿಣಾಮಕಾರಿ ಕಳೆ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.
ನೈಸರ್ಗಿಕ ಸಂಪನ್ಮೂಲಗಳ ನಿಖರ ಬಳಕೆ ಮತ್ತು ಜೀವ ವೈವಿದ್ಯತೆಯನ್ನು ಹೆಚ್ಚಿಸುವುದರ ಮೂಲಕ ಕೀಟ ಮತ್ತು ರೋಗದ ಒತ್ತಡವನ್ನು ಕಡಿಮೆಗೊಳಿಸುವುದು.
ತೆಂಗು + ಕಾಫಿ + ಮೆಣಸು, ತೆಂಗು + ಬಾಳೆ + ಕಾಫಿ, ತೊಗರಿ + ಶೇಂಗಾ + ಎಳ್ಳು, ಬೆಂಡಿ + ಮೂಲಂಗಿ + ಚೌಳಿ + ಬೀಟ್ ರೂಟ್ ಹೀಗೆ ಬಹು ಪದರ ಬೆಳೆ ಜೋಡಣೆ ಮಾಡುವುದರಿಂದ ಏಕ ಕಾಲದಲ್ಲಿ ಹೆಚ್ಚಿನ ಆದಾಯವನ್ನು ಕಡಿಮೆ ಸಮಯದಲ್ಲಿ ಪಡೆಯಬಹುದು.
ಬಹು ಪದರ ಬೆಳೆ ಪದ್ದತಿಯು ಮಾರುಕಟ್ಟೆ ದೃಷ್ಠಿಯಿಂದಲೂ ಉತ್ತಮ ಪದ್ಧತಿಯಾಗಿದೆ. ಒಂದು ಪದಾರ್ಥದ ಬೆಲೆ ಕುಸಿದರೂ ಮತ್ತೊಂದು ಬೆಳೆ ರೈತನಿಗೆ ಆದಾಯ ತಂದುಕೊಡುವಲ್ಲಿ ಯಶಸ್ವಿಯಾಗಲಿದೆ.
| ಡಾ. ಪಿ. ಆರ್. ಬದರಿಪ್ರಸಾದ್
ಇದನ್ನೂ ಓದಿ: ಇದು ಜಗತ್ತಿನಲ್ಲಿ ಅತಿ ಹೆಚ್ಚು ಬಲಿ ಪಡೆಯುತ್ತಿರುವ ರೋಗ World Heart Day Cardiovascular Diseases
WhatsApp - 1 | WhatsApp - 2 | WhatsApp - 3 | Join Telegram |