ನೀವು ವಿದೇಶಕ್ಕೆ ಹೋಗಬೇಕಾ? ಹಾಗಾದರೆ ಪಾಸ್‌ಪೋರ್ಟ್ ಪಡೆಯುವುದು ಹೇಗೆ? ಎಲ್ಲಿ ಅರ್ಜಿ ಹಾಕಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ... Passport Application passportindia
ವಿದೇಶಕ್ಕೆ ತೆರಳು ಬೇಕಾಗುವ ಕಡ್ಡಾಯ ದಾಖಲೆಯಾದ ಪಾಸ್‌ಪೋರ್ಟ್ ಪಡೆಯುವುದು ಹೇಗೆ? ಎಲ್ಲಿ-ಹೇಗೆ ಅರ್ಜಿ ಹಾಕಬೇಕು? ಕೋರ್ಟ್ ಕೇಸ್ ಇದ್ದರೆ ಪಾಸ್‌ಪೋರ್ಟ್ ಸಿಗುತ್ತಾ? ಪಾಸ್‌ಪೋರ್ಟ್ ಕಳೆದು ಹೋದರೆ ಏನು ಮಾಡಬೇಕು? ಪಾಸ್‌ಪೋರ್ಟ್ ನವೀಕರಣ ಹೇಗೆ? ಇತ್ಯಾದಿ ವಿಷಯಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ...
WhatsApp - 1 | WhatsApp - 2 | WhatsApp - 3 | Join Telegram |
Kannada Mitra - News Desk.
ನೀವು ವ್ಯಾಪಾರ-ವ್ಯವಹಾರ, ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿದಂತೆ ಯಾವುದೇ ಕೆಲಸ ಕಾರ್ಯದ ನಿಮಿತ್ತ ದೇಶದ ಗಡಿ ದಾಟಿ ವಿದೇಶಕ್ಕೆ ಹೋಗಬೇಕಾದರೆ ಕಡ್ಡಾಯವಾಗಿ ಪಾಸ್‌ಪೋರ್ಟ್ (Passport) ಬೇಕು. ಅದರ ಜೊತೆಗೆ ನೀವು ತೆರಳಲಿರುವ ದೇಶದ ವೀಸಾ ಕೂಡ ಅನಿವಾರ್ಯ. ಕೆಲವೊಂದು ದೇಶಗಳಿಗೆ ಭಾರತದ ಪಾಸ್‌ಪೋರ್ಟ್ ಇದ್ದರೆ ಸಾಕು ವೀಸಾ ಬೇಕಾಗಿಲ್ಲ.
ಹಾಗಾದರೆ ವಿದೇಶಕ್ಕೆ ತೆರಳು ಬೇಕಾಗುವ ಕಡ್ಡಾಯ ದಾಖಲೆಯಾದ ಪಾಸ್‌ಪೋರ್ಟ್ ಪಡೆಯುವುದು ಹೇಗೆ? ಎಲ್ಲಿ-ಹೇಗೆ ಅರ್ಜಿ ಹಾಕಬೇಕು? (Passport Application) ಕೋರ್ಟ್ ಕೇಸ್ ಇದ್ದರೆ ಪಾಸ್‌ಪೋರ್ಟ್ ಸಿಗುತ್ತಾ? ಪಾಸ್‌ಪೋರ್ಟ್ ಕಳೆದು ಹೋದರೆ ಏನು ಮಾಡಬೇಕು? ಪಾಸ್‌ಪೋರ್ಟ್ ನವೀಕರಣ ಹೇಗೆ? ಇತ್ಯಾದಿ ವಿಷಯಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ...
ಇದನ್ನೂ ಓದಿ: ಕಾನೂನು ಶಿಕ್ಷಣಕ್ಕೆ ಕಠಿಣ ನಿಯಮಗಳು ಜಾರಿ | ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿಗಳು
ಪಾಸ್‌ಪೋರ್ಟ್ ವಿಧಗಳು
ಪಾಸ್‌ಪೋರ್ಟ್'ನ ಸಿಂಧುತ್ವ ಹತ್ತು ವರ್ಷಗಳಾಗಿದ್ದು; ಅಪ್ರಾಪ್ತರಿಗೆ ಐದು ವರ್ಷ ಅಥವಾ 18 ವರ್ಷಗಳ ವರೆಗಿನ ಎರಡರಲ್ಲಿ ಯಾವುದು ಸನಿಹವೋ ಆ ಅವಧಿಯ ವರೆಗೆ ಮಾನ್ಯತೆ ಇರುತ್ತದೆ. ಇನ್ನು 60 ವರ್ಷ ಅಥವಾ ಅದಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಾಸ್‌ಪೋರ್ಟ್ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿಯನ್ನು ಸರಕಾರ ಘೋಷಿಸಿದೆ.
ಭಾರತ ಸರಕಾರದ ವಿದೇಶಾಂಗ ಇಲಾಖೆಯ ಮೂಲಕ ಪಾಸ್‌ಪೋರ್ಟ್ ಸೇವೆಯನ್ನು ಒದಗಿಸಲಾಗುತ್ತಿದ್ದು; ಪಾಸ್‌ಪೋರ್ಟ್'ನಲ್ಲಿ ಸಾಮಾನ್ಯ (ನಾರ್ಮಲ್) ಪಾಸ್‌ಪೋರ್ಟ್, ರಾಜತಾಂತ್ರಿಕ ಪಾಸ್‌ಪೋರ್ಟ್, ಅಧಿಕಾರಿಗಳ ಪಾಸ್‌ಪೋರ್ಟ್, ತುರ್ತು ಪ್ರಮಾಣ ಪತ್ರ ಮತ್ತು ಗುರುತಿನ ಪ್ರಮಾಣ ಪತ್ರ ಎಂಬ ವಿಧಗಳಿವೆ.
ಇವುಗಳಲ್ಲಿ ನಾಗರಿಕರು ಸಾಮಾನ್ಯ ಪಾಸ್‌ಪೋರ್ಟ್ ಪಡೆಯಬಹುದು. ಯಾವ ವಿಧದ ಪಾಸ್‌ಪೋರ್ಟ್ಗೆ ಅರ್ಜಿ ಹಾಕುತ್ತೇವೋ ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ. ದಾಖಲೆಗಳು ಸಮರ್ಪಕವಾಗಿದ್ದಲ್ಲಿ ಮೂರು ವಾರಗಳೊಳಗೆ ಪಾಸ್‌ಪೋರ್ಟ್ ಅನ್ನು ಪಡೆಯಬಹುದು.
ಪಾಸ್‌ಪೋರ್ಟ್ ಪಡೆಯಲು ಬೇಕಾದ ದಾಖಲೆಗಳು
- ಈ ಹುಟ್ಟಿದ ದಿನಾಂಕದ ಪುರಾವೆ (ಉದಾ : ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಎಸ್ಸೆಸೆಲ್ಸಿ ಅಂಕಪಟ್ಟಿ)
- ಭಾವಚಿತ್ರದೊಂದಿಗೆ ಗುರುತಿನ ಪುರಾವೆ (ಉದಾ: ಮತದಾರರ ಗುರುತು ಚೀಟಿ, ಆಧಾರ್ ಕಾರ್ಡ್)
- ವಾಸಸ್ಥಳದ ಪುರಾವೆಗಾಗಿ ದಾಖಲೆ (ಪೂರ್ಣ ವಿಳಾಸವಿರುವ ದಾಖಲೆ)
- ರಾಷ್ಟ್ರೀಯತೆಯ ಪುರಾವೆ (ಉದಾ: ಆಧಾರ್ ಕಾರ್ಡ್, ಮತದಾರರ ಗುರುತು ಚೀಟಿ ಇತ್ಯಾದಿ)
ಪಾಸ್‌ಪೋರ್ಟ್ ಅರ್ಜಿ ಹಾಕುವುದೆಲ್ಲಿ?
ಕೇಂದ್ರ ಸರಕಾರದ ‘ಪಾಸ್‌ಪೋರ್ಟ್ ಸೇವಾ’ (Passport Seva) ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ನಿಮ್ಮ ಹತ್ತಿರದ ಯಾವುದೇ ಸಿಎಸ್‌ಸಿ ಸಾಮಾನ್ಯ ಸೇವಾ ಕೇಂದ್ರಗಳಿಗೆ ಹೋಗಿ ಸುಲಭವಾಗಿ ಕಡಿಮೆ ದರದಲ್ಲಿ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸಬಹುದಾಗಿದೆ.
ಪಾಸ್‌ಪೋರ್ಟ್'ಗಾಗಿ ಕೇಂದ್ರ ಸರಕಾರದ ‘ಪಾಸ್‌ಪೋರ್ಟ್ ಸೇವಾ’ ವೆಬ್‌ಸೈಟ್ ಅನ್ನು ತೆರೆದು New user ಲಿಂಕ್ ಕ್ಲಿಕ್ ಮಾಡಿ ರಿಜಿಸ್ಟರ್ ಮಾಡುವ ಮೂಲಕ ಕೂಡ ನಾವೇ ಸ್ವತಃ ಅರ್ಜಿ ಸಲ್ಲಿಸಬಹುದು.
ಸ್ಮಾರ್ಟ್ ಫೋನ್ ಹೊಂದಿರುವವರು ತಮ್ಮ ಮೊಬೈಲ್‌ನಲ್ಲಿ mPassport Seva ಆ್ಯಪ್ ಡೌನ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ನೋಂದಾಯಿತ ಲಾಗಿನ್ ಐಡಿಯೊಂದಿಗೆ ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ಗೆ ಲಾಗಿನ್ ಆಗಬೇಕು.
ಹೊಸದಾಗಿ ಪಾಸ್‌ಪೋರ್ಟ್, ಪಾಸ್‌ಪೋರ್ಟ್ ಮರುಹಂಚಿಕೆಗಾಗಿ ಇರುವ ಲಿಂಕ್ ಕ್ಲಿಕ್ ಮಾಡಿ. ಇಲ್ಲಿ steps to apply ಪಾಸ್‌ಪೋರ್ಟ್ ವಿಭಾಗದಲ್ಲಿ ಕ್ಲಿಕ್ ಮಾಡಿದಾಗ ನಾರ್ಮಲ್ ಪಾಸ್‌ಪೋರ್ಟ್ ಲಿಂಕ್ ತೆರೆದುಕೊಳ್ಳುತ್ತದೆ. ಆಗತ್ಯ ವಿವರಗಳನ್ನು ನಮೂದಿಸಬೇಕು. ಈ ವಿವರಗಳ ಸಲ್ಲಿಕೆಯ ಬಳಿಕ ದಾಖಲೆಗಳ ಪರಿಶೀಲನೆಗೆ ಪಾಸ್‌ಪೋರ್ಟ್ ಸೇವಾ ಕೇಂದ್ರದ ಅಪಾಯಿಂಟ್‌ಮೆಂಟ್ ಪಡೆಯಬೇಕು.
ಅಪಾಯಿಂಟ್‌ಮೆಂಟ್ ಅನ್ನು ಖಾತರಿಪಡಿಸಲು Appointment ಲಿಂಕ್ ಕ್ಲಿಕ್ ಮಾಡಿ. ಎಲ್ಲ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು, ಪಾಸ್‌ಪೋರ್ಟ್ ಕಚೇರಿಗಳಲ್ಲಿ ಅಪಾಯಿಂಟ್‌ಮೆಂಟ್ ಕಾಯ್ದಿರಿಸಲು ಆನ್‌ಲೈನ್ ಪಾವತಿಯನ್ನು ಕಡ್ಡಾಯಗೊಳಿಸಲಾಗಿದೆ.
ಅರ್ಜಿಯ ಉಲ್ಲೇಖ ಸಂಖ್ಯೆ ಮತ್ತು ಅಪಾಯಿಂಟ್‌ಮೆಂಟ್ ಸಂಖ್ಯೆಯನ್ನು ಹೊಂದಿರುವ ಅರ್ಜಿಯನ್ನು ಪ್ರಿಂಟ್ ಪಡೆಯಿರಿ. ಪಾಸ್‌ಪೋರ್ಟ್ ಕಚೇರಿಗೆ ನಿಮ್ಮ ಭೇಟಿಯ ಸಮಯದಲ್ಲಿ ನಿಮ್ಮ ಅಪಾಯಿಂಟ್‌ಮೆಂಟ್ ವಿವರಗಳೊಂದಿಗೆ ಎಸ್ಸೆಮ್ಮೆಸ್ ಅನ್ನು ಅಪಾಯಿಂಟ್‌ಮೆಂಟ್ ಪುರಾವೆಯಾಗಿ ಪರಿಗಣಿಸಲಾಗುತ್ತದೆ.
ಪಾಸ್‌ಪೋರ್ಟ್ ಸೇವಾ ಕೇಂದ್ರ ಅಥವಾ ಸಮಯವನ್ನು ಮುಂಗಡ ಕಾಯ್ದಿರಿಸಿದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ತೆರಳುವಾಗ ಮೂಲ ದಾಖಲೆಗಳು ಮತ್ತು ಝರಾಕ್ಸ್ ಪ್ರತಿಗಳನ್ನು ಜೊತೆಗಿಟ್ಟುಕೊಳ್ಳಬೇಕು.
ಇದನ್ನೂ ಓದಿ: ಈ ಲಕ್ಷಣಗಳು ಇದ್ದರೆ ಮಾತ್ರ ಅದು ಶುದ್ಧ ಬಂಡೂರು ಕುರಿ Pure Bandur Sheep Characteristics
ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಪ್ರಕ್ರಿಯೆಗಳೇನು?
ಅಪಾಯಿಂಟ್‌ಮೆಂಟ್ ಇರುವ ದಿನ ಸರಿಯಾದ ಸಮಯಕ್ಕೆ ಅಲ್ಲಿ ಹಾಜರಿರಬೇಕು. ನಿತ್ಯ ನೂರಾರು ಮಂದಿ ಸೇವಾ ಕೇಂದ್ರಗಳಿಗೆ ಬರುವುದರಿಂದ ಟೋಕನ್ ಆಧಾರದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ನಾಲ್ಕು ಹಂತಗಳಲ್ಲಿ ದಾಖಲೆಗಳ ಪರಿಶೀಲನೆ ಮತ್ತು ಮಂಜೂರಾತಿ ಪ್ರಕ್ರಿಯೆ ನಡೆಯುತ್ತದೆ.
ಮೊದಲ ಹಂತದಲ್ಲಿ ಎಲ್ಲ ದಾಖಲೆಗಳನ್ನು ಹೆಸರು, ವಿಳಾಸ, ಜನ್ಮದಿನಾಂಕ ಮೊದಲಾದ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಹೆಸರಿನೊಂದಿಗೆ ಬರುವ ಇನಿಶಿಯಲ್ಸ್ಗಳಲ್ಲಿ (ಆರಂಭಿಕ ಅಕ್ಷರ) ತಪ್ಪುಗಳಿದ್ದರೂ ಗಮನಿಸಿ ಸಂಬಂಧಪಟ್ಟ ತಿದ್ದುಪಡಿಗೆ ಸ್ಥಳದಲ್ಲೇ ಪಡೆದು ಆ ಕ್ಷಣದಲ್ಲಿ ನೀಡಲು ಸೂಚಿಸುತ್ತಾರೆ.
ಎರಡನೇ ಹಂತದಲ್ಲಿ ಮೂಲ ದಾಖಲಾತಿಗಳನ್ನು ಗಮನಿಸಿ ಭಾವಚಿತ್ರ ತೆಗೆಯುವ, ಬಯೋಮೆಟ್ರಿಕ್, ಕಣ್ಣುಗಳ ಸ್ಕ್ಯಾನ್ ಮಾಡಿ ನಮ್ಮ ಅರ್ಜಿಗೆ ಪೂರಕವಾಗಿ ದಾಖಲೆಗಳನ್ನು ಸಿದ್ಧಪಡಿಸುತ್ತಾರೆ.
ಮೂರನೇ ಹಂತ ಪರಿಶೀಲನೆಯಲ್ಲಿ ಅರ್ಜಿ ಮತ್ತು ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಲಾಗುತ್ತದೆ. ನಾಲ್ಕನೇ ಹಂತದಲ್ಲಿ ಪಾಸ್‌ಪೋರ್ಟ್ ಅರ್ಜಿ ಮಂಜೂರಾತಿ ನೀಡುತ್ತಾರೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಅರ್ಜಿಯನ್ನು ನೋಡಿ ಮಂಜೂರಾತಿ ನೀಡುತ್ತಾರೆ.
ದಾಖಲಾತಿಗಳೆಲ್ಲ ಸರಿಯಿದ್ದಲ್ಲಿ ಸುಮಾರು 20 ನಿಮಿಷಗಳಲ್ಲಿ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಅರ್ಜಿಯನ್ನು ಪೊಲೀಸ್ ಪರಿಶೀಲನೆಗಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಅಲ್ಲಿಂದ ವ್ಯಕ್ತಿಯ ಖಾಯಂ ವಿಳಾಸವಿರುವ ವ್ಯಾಪ್ತಿಯ ಪೊಲೀಸ್ ಠಾಣೆಗೆ ರವಾನಿಸಲಾಗುತ್ತದೆ.
ಇಲ್ಲಿ ಅರ್ಜಿದಾರರ ಗ್ರಾಮದ ಇಬ್ಬರು ವ್ಯಕ್ತಿಗಳು ಸಾಕ್ಷಿಯಾಗಿ ಅನುಮೋದಿಸಬೇಕಾಗುತ್ತದೆ. ನಂತರ ಈ ಎಲ್ಲಾ ಮಾಹಿತಿ ಪಾಸ್‌ಪೋರ್ಟ್ ಕಚೇರಿಗೆ ಸಲ್ಲಿಕೆಯಾಗುತ್ತದೆ. ಅಲ್ಲಿಂದ ಪಾಸ್‌ಪೋರ್ಟ್ ಅನ್ನು ಮುದ್ರಿಸಿ ಸಂಬಂಧಪಟ್ಟ ವ್ಯಕ್ತಿಗೆ ಅಂಚೆ ಮೂಲಕ ಕಳುಹಿಸಿಕೊಡಲಾಗುತ್ತದೆ.
ಕೋರ್ಟ್ ಕೇಸ್ ಇದ್ದರೆ ಪಾಸ್‌ಪೋರ್ಟ್ ಸಿಗುತ್ತಾ?
ಯಾವುದೇ ನ್ಯಾಯಾಲಯದಲ್ಲಿ ನಿಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಬಾಕಿಯಿದ್ದರೆ, ನೀವು ವಿದೇಶಕ್ಕೆ ಪ್ರಯಾಣಿಸಲು ಅನುಮತಿ ನೀಡಿದ ಸಂಬAಧಪಟ್ಟ ನ್ಯಾಯಾಲಯದ ಲಿಖಿತ ಅನುಮತಿಯನ್ನು ಲಗತ್ತಿಸಬೇಕು. ಇಂತಹ ಸಂದರ್ಭದಲ್ಲಿ ಒಂದು ವರ್ಷಕ್ಕೆ ಮಾನ್ಯವಾಗಿರುವ ಪಾಸ್‌ಪೋರ್ಟ್ ಅನ್ನು ನೀಡಲಾಗುತ್ತದೆ.
ಪಾಸ್‌ಪೋರ್ಟ್ ಕಳೆದು ಹೋದರೆ?
ಪಾಸ್‌ಪೋರ್ಟ್ ಕಳೆದು ಹೋದಲ್ಲಿ ಅಥವಾ ಹಾನಿಯಾದಲ್ಲಿ ಯಥಾ ನಕಲು ಪಾಸ್‌ಪೋರ್ಟ್ ನೀಡಲಾಗುವುದಿಲ್ಲ. ವಿಭಿನ್ನ ಸಂಖ್ಯೆಯ ಹೊಸ ಪಾಸ್‌ಪೋರ್ಟ್ ಅನ್ನು ನೀಡಲಾಗುತ್ತದೆ. ಅರ್ಜಿದಾರರು ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನ Re - issue ವಿಭಾಗದಲ್ಲೆ ಮರು ಅರ್ಜಿ ಸಲ್ಲಿಸಬೇಕು.
ಪಾಸ್‌ಪೋರ್ಟ್ ನವೀಕರಣ ಹೇಗೆ?
ಪಾಸ್‌ಪೋರ್ಟ್ ಮುಕ್ತಾಯಗೊಳ್ಳುವ ಅವಧಿ ಒಂದು ವರ್ಷ ಮೊದಲು ನವೀಕರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಮಧ್ಯೆ ಯಾವುದೇ ಬದಲಾವಣೆಗಳಿದ್ದಲ್ಲಿ ‘Re - issue’ವಿಗೆ ಅರ್ಜಿ ಹಾಕಲು ಅವಕಾಶವಿದೆ.
ಪಾಸ್‌ಪೋರ್ಟ್ ಕುರಿತು ಹೆಚ್ಚಿನ ಮಾಹಿತಿಗೆ passportindia.gov.in
WhatsApp - 1 | WhatsApp - 2 | WhatsApp - 3 | Join Telegram |