14,298 ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಐಟಿಐ, ಪದವೀಧರರಿಗೆ ಅವಕಾಶ RRB Technician 14298 post Recruitment 2024

ಭಾರತೀಯ ರೈಲ್ವೆ ಇಲಾಖೆಯು ಈ ವರ್ಷ ನೇಮಕ ಮಾಡಿಕೊಳ್ಳಲಿರುವ ಟೆಕ್ನಿಷಿಯನ್ ಹುದ್ದೆಗಳ ಸಂಖ್ಯೆಯನ್ನು 9,144 ರಿಂದ 14,298ಕ್ಕೆ ಹೆಚ್ಚಿಸಿ ಅರ್ಜಿ ಸಲ್ಲಿಸುವ ಕಾಲಾವಕಾಶವನ್ನು ವಿಸ್ತರಿಸಿದೆ...

Sep 30, 2024 - 14:15
WhatsApp - 1 WhatsApp - 2 WhatsApp - 3 Join Telegram

14,298 ರೈಲ್ವೆ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ, ಐಟಿಐ, ಪದವೀಧರರಿಗೆ ಅವಕಾಶ RRB Technician 14298 post Recruitment 2024

Kannada Mitra - News Desk.

ಭಾರತೀಯ ರೈಲ್ವೆ ಇಲಾಖೆಯು (Indian Railways) ಈ ವರ್ಷ ನೇಮಕ ಮಾಡಿಕೊಳ್ಳಲಿರುವ ಟೆಕ್ನಿಷಿಯನ್ (Technician Posts) ಹುದ್ದೆಗಳ ಸಂಖ್ಯೆಯನ್ನು 9,144 ರಿಂದ 14,298ಕ್ಕೆ ಹೆಚ್ಚಿಸಿ ಅರ್ಜಿ ಸಲ್ಲಿಸುವ ಕಾಲಾವಕಾಶವನ್ನು ವಿಸ್ತರಿಸಿದೆ.

ಕಳೆದ ಮಾರ್ಚ್ 10ರಂದು ಅಧಿಸೂಚನೆ ಪ್ರಕಟಿಸಿದ್ದ ರೈಲ್ವೆ ನೇಮಕ ಮಂಡಳಿಯು (Railway Recruitment Board -RRB) 9,144 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 10ರಿಂದ ಏಪ್ರಿಲ್ 8ರ ತನಕ ಅವಕಾಶ ನೀಡಿತ್ತು.

ಕರ್ನಾಟಕ ಅಭ್ಯರ್ಥಿಗಳಿಗೆ 479 ಹುದ್ದೆಗಳು ಮೀಸಲು

ಈ ಕುರಿತು ಪ್ರಕಟಣೆ ಹೊರಡಿಸಿರುವ ಆರ್‌ಆರ್‌ಬಿ, ಈ ಹಿಂದೆ ನಿಗದಿಪಡಿಸಿದ ಹುದ್ದೆಗಳಿಗೆ 5,154 ಹುದ್ದೆಗಳನ್ನು ಸೇರ್ಪಡೆ ಮಾಡಲಾಗಿದೆ. ಅಭ್ಯರ್ಥಿಗಳು ಅಕ್ಟೋಬರ್ 2ರಿಂದ 16ರ ತನಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

ಒಟ್ಟು ಹುದ್ದೆಗಳಲ್ಲಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ 479 ಹುದ್ದೆಗಳನ್ನು ಮೀಸಲಿಡಲಾಗಿದೆ. ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ) ಮೂಲಕವೇ ಆಯ್ಕೆ ನಡೆಯಲಿದ್ದು, ಪರೀಕ್ಷಾ ದಿನವನ್ನು ಇನ್ನೂ ನಿಗದಿಪಡಿಸಿಲ್ಲ. 

ಇದನ್ನೂ ಓದಿ: ದಾಖಲೆಯ ಬೆಲೆ ಕಂಡ ಚಿನ್ನ ಬೆಳ್ಳಿ | ಲಕ್ಷ ರೂಪಾಯಿ ಗಡಿ ದಾಟಲಿರುವ ಉಭಯ ಲೋಹಗಳು 

ಅರ್ಹತೆಗಳು ಏನಿರಬೇಕು?

ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ಹುದ್ದೆಗಳು ಹಾಗೂ ಟೆಕ್ನಿಷಿಯನ್ ಗ್ರೇಡ್ 3 ಹುದ್ದೆಗಳ ನೇಮಕಾತಿ ನಡೆಯಲಿದ್ದು; ಈ ಎರಡೂ ವಿಭಾಗದ ಹುದ್ದೆಗಳಿಗೆ ಬೇರೆ ಬೇರೆ ರೀಯಿಯ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಹುದ್ದೆಗಳ ಗ್ರೇಡ್ ಅನ್ವಯ ವಿದ್ಯಾರ್ಹತೆಯ ವಿವರ ಈ ಕೆಳಗಿನಂತಿದೆ: 

ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ವಿಭಾಗದ ಹುದ್ದೆಗಳಿಗೆ ಬಿಎಸ್ಸಿ ಪೂರ್ಣಗೊಳಿಸಿರಬೇಕು. ಅಂದರೆ, ಅಭ್ಯರ್ಥಿಗಳು ಫಿಸಿಕ್ಸ್ ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಇನ್‌ಫಾರ್ಮೆಶನ್ ಟೆಕ್ನಾಲಜಿ, ಇನ್ಸ್ಟ್ರುಮೆಂಟೇಶನ್ ಇವುಗಳಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ನಿಗದಿತ ವಿದ್ಯಾರ್ಹತೆ ಹೊಂದಿರಬೇಕು ಅಥವಾ ಮೂರು ಎಂಜಿನಿಯರಿಂಗ್ ಡಿಪ್ಲೊಮಾ ಅಥವಾ ಎಂಜಿನಿಯರಿಂಗ್ ಪದವಿ ತೇರ್ಗಡೆಯಾಗಿದ್ದರೂ ಅರ್ಜಿ ಸಲ್ಲಿಸಬಹುದು.

ಇನ್ನು ಟೆಕ್ನಿಷಿಯನ್ ಗ್ರೇಡ್ 3 ವಿಭಾಗದಲ್ಲಿ ವಿವಿಧ ಟ್ರೇಡ್‌ಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವುಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪೂರ್ಣಗೊಳಿಸಿರಬೇಕು. ಟ್ರೇಡ್ ಅಪ್ರೆಂಟಿಸ್‌ಷಿಪ್ ಪಡೆದವರೂ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ.

ಇದನ್ನೂ ಓದಿ: ಇದು ಜಗತ್ತಿನಲ್ಲಿ ಅತಿ ಹೆಚ್ಚು ಬಲಿ ಪಡೆಯುತ್ತಿರುವ ರೋಗ   World Heart Day Cardiovascular Diseases 

ಅರ್ಜಿ ಸಲ್ಲಿಕೆಗೆ ವಯೋಮಿತಿ ಎಷ್ಟಿರಬೇಕು?

ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ ಹುದ್ದೆಗೆ 18ರಿಂದ 36 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳಿಗೆ 18ರಿಂದ 33 ವರ್ಷದ ಒಳಗಿನವರು ಪ್ರಯತ್ನಿಸಬಹುದು.

ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ವರ್ಗದವರಿಗೆ 3 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ.

ಅರ್ಜಿ ಶುಲ್ಕವೆಷ್ಟು?

ಎಸ್‌ಸಿ/ಎಸ್‌ಟಿ, ಮಾಜಿ ಸೈನಿಕರು, ಮಹಿಳೆಯರು, ಅಲ್ಪಸಂಖ್ಯಾತ ಅಭ್ಯರ್ಥಿಗಳು, ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳಿಗೆ 250 ರೂಪಾಯಿ ನಿಗದಿಪಡಿಸಲಾಗಿದ್ದು; ಇದರಲ್ಲಿ ಪೂರ್ತಿ ರೀಫಂಡ್ ಮಾಡಲಾಗುತ್ತದೆ.

ಇನ್ನುಳಿದ ವರ್ಗಗಳ ಅಭ್ಯರ್ಥಿಗಳಿಗೆ 500 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕಿದ್ದು; ಇದರಲ್ಲಿ 400 ರೂಪಾಯಿ ರೀಫಂಡ್ ಮಾಡಲಾಗುತ್ತದೆ. ಆದರೆ, ನೇಮಕಾತಿಗಾಗಿ ರೈಲ್ವೆ ನೇಮಕ ಮಂಡಳಿ ನಡೆಸುವ ಸಿಬಿಟಿ (ಕಂಪ್ಯೂಟರ್ ಆಧರಿತ ಪರೀಕ್ಷೆ) ಬರೆದರೆ ಮಾತ್ರ ಶುಲ್ಕ ವಾಪಸ್ ಪಡೆಯಬಹುದಾಗಿದೆ.

ಇದನ್ನೂ ಓದಿ: ಕಾನೂನು ಶಿಕ್ಷಣಕ್ಕೆ ಕಠಿಣ ನಿಯಮಗಳು ಜಾರಿ | ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿಗಳು 

ಆರಂಭಿಕ ವೇತನವೆಷ್ಟು?

ಭಾರತೀಯ ರೈಲ್ವೆ ಇಲಾಖೆಯ ಟೆಕ್ನಿಷಿಯನ್ ಹುದ್ದೆಗಳಿಗೆ ನೇಮಕವಾಗು ಅರ್ಹ ಅಭ್ಯರ್ಥಿಗಳಿಗೆ ಗ್ರೇಡ್-1 ಹುದ್ದೆಗಳಿಗೆ 29,200 ರೂಪಾಯಿ ಹಾಗೂ ಗ್ರೇಡ್ 3 ಹುದ್ದೆಗಿಗೆ 19,900ಮಾಸಿಕ ವೇತನ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಭಾರತೀಯ ರೈಲ್ವೆ ಇಲಾಖೆಯ ಟೆಕ್ನಿಷಿಯನ್ ಹುದ್ದೆಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧರಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಟೆಕ್ನಿಷಿಯನ್ ಗ್ರೇಡ್-1 ಮತ್ತು ಗ್ರೇಡ್-3 ಈ ಎರಡೂ ವಿಭಾಗಗಳಿಗೂ ಪ್ರತ್ಯೇಕ ಸಿಬಿಟಿ ನಡೆಯಲಿದೆ. 

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
    02-10-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ :
    16-10-2024

ಈ ಹುದ್ದೆಗಳ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿ ಪಡೆಯಲು [email protected] ಇಮೇಲ್ ಮೂಲಕ ಸಂವಹನ ನಡೆಸಬಹುದಾಗಿದೆ.

ಅಧಿಸೂಚನೆ : Download

ಇದನ್ನೂ ಓದಿ: ನೀವೂ ವಿದೇಶಕ್ಕೆ ಹೋಗಬೇಕಾ? ಹಾಗಾದರೆ ಪಾಸ್‌ಪೋರ್ಟ್'ಗೆ ಅರ್ಜಿ ಹಾಕೋದೆಲ್ಲಿ? ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ... 

WhatsApp - 1 WhatsApp - 2 WhatsApp - 3 Join Telegram