ಕಾನೂನು ಶಿಕ್ಷಣಕ್ಕೆ ಕಠಿಣ ನಿಯಮಗಳು ಜಾರಿ | ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿಗಳು Strict rule for legal education BCI New Guidelines

ದೇಶದಲ್ಲಿ ಕಾನೂನು ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕಾನೂನು ಶಿಕ್ಷಣ ಸಂಸ್ಥೆಗಳು ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಎಲ್‌ಎಲ್‌ಬಿ ಸೇರಿ ಕಾನೂನು ವ್ಯಾಸಂಗಕ್ಕೆ ಬಿಸಿಐ ಹೊಸ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದೆ... Bar Council of India (BCI), BCI, Legal Education, Legal Education Institutions, Law Student, Rigorous Rule for Legal Education, LLB Degree, Legal education in India, Law education in India,

Sep 27, 2024 - 12:28
Sep 27, 2024 - 12:41
WhatsApp - 1 WhatsApp - 2 WhatsApp - 3 Join Telegram

ಕಾನೂನು ಶಿಕ್ಷಣಕ್ಕೆ ಕಠಿಣ ನಿಯಮಗಳು ಜಾರಿ | ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿಗಳು Strict rule for legal education BCI New Guidelines

Kannada Mitra - News Desk.

ದೇಶದಲ್ಲಿ ಕಾನೂನು ಶಿಕ್ಷಣ ವ್ಯವಸ್ಥೆಯನ್ನು ನಿಯಂತ್ರಿಸುವ ಬಾರ್ ಕೌನ್ಸಿಲ್ ಆಫ್ ಇಂಡಿಯಾ (Bar Council of India - BCI) ಕಾನೂನು ಶಿಕ್ಷಣ ಸಂಸ್ಥೆಗಳು (Law Education Institutions) ಹಾಗೂ ಕಾನೂನು ವಿದ್ಯಾರ್ಥಿಗಳಿಗೆ (Law Students) ಕಠಿಣ ಕ್ರಮಕ್ಕೆ ಮುಂದಾಗಿದೆ. ಎಲ್‌ಎಲ್‌ಬಿ (LLB) ಸೇರಿ ಕಾನೂನು ವ್ಯಾಸಂಗಕ್ಕೆ ಬಿಸಿಐ ಹೊಸ ಕಠಿಣ ಮಾರ್ಗಸೂಚಿಗಳನ್ನು (BCI New guidelines) ಹೊರಡಿಸಿದ್ದು; ಈ ಮಾರ್ಗಸೂಚಿಗಳ ಅನ್ವಯ ಇನ್ಮುಂದೆ ಅಪರಾಧ ಹಿನ್ನಲೆ ಹೊಂದಿರುವವರಿಗೆ ಕಾನೂನು ಪದವಿ (Law Degree) ಪಡೆಯಲು ಅವಕಾಶವಿಲ್ಲ.

ಕಾನೂನು ಪದವಿ ಜತೆಗೆ ಇತರ ಪದವಿ ಪಡೆಯುವಂತಿಲ್ಲ, ವ್ಯಾಸಂಗದ ವೇಳೆ ಇತರ ಉದ್ಯೋಗದಲ್ಲಿ ಇರುವಂತಿಲ್ಲ, ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಹಾಗೂ ತರಗತಿಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು, ಮಾರ್ಗಸೂಚಿ ಪಾಲಿಸದಿದ್ದರೆ ಶಿಕ್ಷಣ ಸಂಸ್ಥೆ ಮಾನ್ಯತೆ ರದ್ದು ಎಂಬಂತಹ ಕಠಿಣ ನಿಯಮಗಳನ್ನು (ಬಿಸಿಐ) ಜಾರಿಗೊಳಿಸಿದೆ. 

ಕ್ರಿಮಿನಲ್ ಹಿನ್ನೆಲೆಯವರಿಗೆ ಕಾನೂನು ಪದವಿ ಬಂದ್

ಕಾನೂನು ಪದವಿ ಅಥವಾ ಇತರ ಯಾವುದೇ ಕಾನೂನು ಸಂಬಂಧಿತ ಶೈಕ್ಷಣಿಕ ಕೋರ್ಸ್'ಗಳನ್ನು ವ್ಯಾಸಂಗ ಮಾಡುತ್ತಿರುವವರು ತಮ್ಮ ವಿರುದ್ಧ ಯಾವುದೇ ಅಪರಾಧ ಪ್ರಕರಣ, ಶಿಕ್ಷೆಗೆ ಒಳಗಾಗಿರುವ ಬಗ್ಗೆ ಪದವಿ ಅಂತಿಮ ಅಂಕಪಟ್ಟಿ ಅಥವಾ ಪ್ರಮಾಣಪತ್ರ ವಿತರಣೆಗೂ ಮುನ್ನ ಆಯಾ ಶಿಕ್ಷಣ ಸಂಸ್ಥೆಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ. ಈ ಮಾಹಿತಿ ನೀಡದವರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಸಿಐ ಎಚ್ಚರಿಕೆ ನೀಡಿದೆ.

ವಿದ್ಯಾರ್ಥಿಗಳು ನೀಡಿದ ಅಪರಾಧಿಕ ಹಿನ್ನೆಲೆ ಮಾಹಿತಿಯನ್ನು ಆಯಾ ಕಾಲೇಜುಗಳು ಬಿಸಿಐಗೆ ನೀಡಬೇಕು. ಈ ಬಗ್ಗೆ ಬಿಸಿಐ ನಿರ್ಧಾರ ಕೈಗೊಳ್ಳುವ ವರೆಗೆ ಪದವಿ ಪ್ರದಾನ ಮಾಡುವಂತಿಲ್ಲ ಅಥವಾ ಅಂಕಪಟ್ಟಿಗಳನ್ನು ವಿತರಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವಿದ್ಯಾರ್ಥಿಗಳು ನೀಡುವ ದೃಢೀಕರಣ ಮಾತ್ರವಲ್ಲದೆ, ಅವರ ಅಪರಾಧಿಕ ಹಿನ್ನೆಲೆಯನ್ನು ಕೂಡ ಪರಿಶೀಲನೆ ಮಾಡುವುದು ಶಿಕ್ಷಣ ಸಂಸ್ಥೆಯ ಹೊಣೆಗಾರಿಕೆ ಆಗಿದೆ. ಸಂಸ್ಥೆಗೆ ದಾಖಲಾಗುವ ಪ್ರತಿಯೊಬ್ಬರ ಅಪರಾಧಿಕ ಹಿನ್ನೆಲೆಯನ್ನು ಸಂಸ್ಥೆಯು ತಪಾಸಣೆ ಮಾಡಬೇಕು. ಬಳಿಕ ಬಿಸಿಐಗೆ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಈ ಲಕ್ಷಣಗಳು ಇದ್ದರೆ ಮಾತ್ರ ಅದು ಶುದ್ಧ ಬಂಡೂರು ಕುರಿ Pure Bandur Sheep Characteristics

ಒಟ್ಟಿಗೆ ಎರಡೆರಡು ಪದವಿ, ಕೋರ್ಸ್ ಮಾಡುವಂತಿಲ್ಲ

ಕಾನೂನು ಪದವಿ ಅಥವಾ ಕಾನೂನು ಸಂಬಂಧಿಸಿದ ಇತರ ಕೋರ್ಸ್'ಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಒಂದೇ ಅವಧಿಯಲ್ಲಿ ಬೇರೆ ಪದವಿ ಅಥವಾ ಕೋರ್ಸ್'ಗಳನ್ನು ಅಧ್ಯಯನ ಮಾಡುವಂತಿಲ್ಲ. ಕಾನೂನು ಶಿಕ್ಷಣ ನಿಯಮಾವಳಿಗಳಲ್ಲಿ ಇದಕ್ಕೆ ಅವಕಾಶವಿಲ್ಲ. ಎಲ್‌ಎಲ್‌ಬಿ ಅವಧಿಯಲ್ಲಿ ಬೇರಾವುದೇ ಪದವಿ ಪಡೆಯುತ್ತಿಲ್ಲ, ಕೋರ್ಸ್ಗಳನ್ನು ಮಾಡುತ್ತಿಲ್ಲ ಎಂದು ಕಾನೂನು ವಿದ್ಯಾರ್ಥಿಗಳು ಮುಚ್ಚಳಿಕೆ ನೀಡಬೇಕು.

ಈ ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಪದವಿ ಪ್ರದಾನಕ್ಕೆ ಅವಕಾಶವಿರುವುದಿಲ್ಲ. ಆದರೆ ಭಾಷೆ, ಕಂಪ್ಯೂಟರ್ ಅಪ್ಲಿಕೇಷನ್‌ಗೆ ಸಂಬAಧಿಸಿದ ಅರೆಕಾಲಿಕ ಅಥವಾ ಪ್ರಮಾಣಪತ್ರ ಕೋರ್ಸ್, ನಿಯಮಗಳಲ್ಲಿ ಅವಕಾಶ ನೀಡಲಾಗಿರುವ ದೂರಶಿಕ್ಷಣ ಕೋರ್ಸ್'ಗಳನ್ನು ಕಲಿಯಬಹುದು ಎಂದು ತಿಳಿಸಲಾಗಿದೆ.

ಬೇರೆ ಉದ್ಯೋಗ ಮಾಡುವಂತಿಲ್ಲ

ಇನ್ನು ಕಾನೂನು ಪದವಿ ಪಡೆಯುವ ಸಂದರ್ಭದಲ್ಲಿ ಬೇರಾವುದೇ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಂತಿಲ್ಲ ಹಾಗೂ ತರಬೇತಿಯನ್ನು ಪಡೆಯುವಂತಿಲ್ಲ. ಆದರೆ, ನಿಯಮಾನುಸಾರ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಂಡಿದ್ದು, ಹಾಜರಾತಿ ನಿಬಂಧನೆಗಳನ್ನು ಪಾಲಿಸುವಂತಿದ್ದರೆ ಆಕ್ಷೇಪವಿಲ್ಲ ಎಂದು ತಿಳಿಸಿದೆ. ಉದ್ಯೋಗದ ಬಗ್ಗೆ ಮಾಹಿತಿ ನೀಡದಿದ್ದರೆ, ತನ್ನ ಉದ್ಯೋಗದಾತರಿಂದ ಸೂಕ್ತ ನಿರಾಕ್ಷೇಪಣೆ ಪ್ರಮಾಣ ಪತ್ರವನ್ನು (ಎನ್‌ಸಿ) ಸಲ್ಲಿಸದಿದ್ದರೆ, ಯಾವುದೇ ರಾಜ್ಯದ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಳ್ಳುವಂತಿಲ್ಲ ಎಂದು ಬಿಸಿಐ ಹೇಳಿದೆ.

ಶಿಕ್ಷಣ ಸಂಸ್ಥೆಗಳಿಗೂ ಎಚ್ಚರಿಕೆ

ಕಾನೂನು ಶಿಕ್ಷಣ ಸಂಸ್ಥೆಗಳಿಗೂ ಕೂಡ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಷ್ಟೇ ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೊಸ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಶಿಸ್ತುಕ್ರಮದ ಜತೆಗೆ, ಸಂಸ್ಥೆಯ ಮಾನ್ಯತೆಯನ್ನು ರದ್ದುಗೊಳಿಸಲಾಗುವುದು ಅಥವಾ ಅನುಮೋದನೆಯನ್ನು ಹಿಂಪಡೆಯಲಾಗುವುದು ಎಂದು ಬಿಸಿಐ ಎಚ್ಚರಿಕೆ ನೀಡಿದೆ. ಇಷ್ಟೇ ಅಲ್ಲದೆ, ಶೈಕ್ಷಣಿಕ ಹಾಗೂ ಕಾನೂನಾತ್ಮಕವಾಗಿ ಭಾರಿ ದಂಡವನ್ನು ತೆರಬೇಕಾಗುತ್ತದೆ ಎಂದು ತಿಳಿಸಿದೆ.

ವಿದ್ಯಾರ್ಥಿಗಳ ಹಾಜರಾತಿಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ಎಲ್ಲ ಕಾನೂನು ಶಿಕ್ಷಣ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಪಾಲಿಸಬೇಕೆಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ತಿಳಿಸಿದೆ. ಇದರೊಂದಿಗೆ ತರಗತಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು. ಜತೆಗೆ, ಸಂಸ್ಥೆಯ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ನಿಗಾ ಇರಬೇಕು. ಯಾವುದೇ ಪರಿಶೀಲನೆ ಅಥವಾ ಇತರ ಉದ್ದೇಶಗಳಿಗಾಗಿ ಈ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಒಂದು ವರ್ಷದ ವರೆಗೆ ಕಾದಿಡಬೇಕೆಂದು ತಿಳಿಸಲಾಗಿದೆ.

WhatsApp - 1 WhatsApp - 2 WhatsApp - 3 Join Telegram