ಇಂದಿನ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ಬೇಕಾ? ಸೆಕ್ಸ್ ಎಜುಕೇಷನ್ ಸಾಧಕ ಬಾಧಕಗಳು students need sex education
ನಮ್ಮಲ್ಲಿ ಬಾಲಕ-ಬಾಲಿಕೆಯರಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಕುತೂಹಲವಿರುವುದು ಸುಳ್ಳಲ್ಲ. ಹಾಗೆಯೇ ಗಾಬರಿ, ಕಳವಳ ಕೂಡ ಇಲ್ಲದಿಲ್ಲ. ತಮ್ಮ ಮಕ್ಕಳು ದಾರಿ ತಪ್ಪದಂತೆ ಸಾಕಷ್ಟು ಮುಂಜಾಗ್ರತೆ ವಹಿಸುವ ತಂದೆ-ತಾಯಂದಿರು ತಮ್ಮ ಮಕ್ಕಳ ಭವಿಷ್ಯದ ಪ್ರತಿಯೊಂದು ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತಾರೆ. ಆದರೆ ಅನೇಕ ಮಕ್ಕಳು ತಂದೆ-ತಾಯಿಗಳನ್ನು ಯಾಮಾರಿಸಿ, ತಮಗಿಷ್ಟ ಬಂದ ದಾರಿಯಲ್ಲೇ ಸಾಗುತ್ತಾರೆ. ಹೀಗಾಗಿಯೇ ಮಕ್ಕಳು ಅನೇಕ ಚಟಗಳಿಗೆ ಬಲಿಯಾಗುತ್ತಾರೆ...
WhatsApp - 1 | WhatsApp - 2 | WhatsApp - 3 | Join Telegram |
Kannada Mitra - News Desk.
ಲೈಂಗಿಕ ಶಿಕ್ಷಣದ (Sex Education) ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತ ಬಂದಿವೆ. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ರಾಜ್ಯ ಸರ್ಕಾರ ಇದನ್ನು ಪ್ರೌಢ ಶಾಲೆಯ ಒಂಬತ್ತು ಮತ್ತು ಹತ್ತನೇ ತರಗತಿ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕಡ್ಡಾಯಗೊಳಿಸಲು ತಯಾರಿ ನಡೆಸಿತ್ತು. ಈ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ತುಸು ಗಂಭೀರ ಸ್ವರೂಪದಲ್ಲಿಯೇ ಹರಿದಾಡಿದ್ದವು.
ಈ ಬಗ್ಗೆ ವ್ಯಾಪಕ ಟೀಕೆ ಕೇಳಿ ಬಂದದ್ದರಿಂದ ಅದು ಅಷ್ಟಕ್ಕೇ ಸ್ಥಗಿತವಾಗಿತ್ತು. ಲೈಂಗಿಕತೆ ವಿಚಾರದಲ್ಲಿ ಜಗತ್ತು ಎಷ್ಟೇ ಮುಂದುವರೆದರೂ ಇಂದಿಗೂ ಈ ವಿಚಾರದಲ್ಲಿ ಮಡಿವಂತಿಕೆ ಉಳಿಸಿಕೊಂಡಿರುವ ನಮಗೆ ಇಂಥಾ ಶಿಕ್ಷಣ ಬೇಕಾ? ಎಂಬ ಚರ್ಚೆ ಮತ್ತೆ ನಡೆಯುತ್ತಲೇ ಇದೆ.
ಇದನ್ನೂ ಓದಿ: ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ | ಇನ್ಮುಂದೆ ಹೊರಗಿದ್ದರೂ ಮೊಬೈಲ್‌ಗೆ ಮನೆಯ ಹೈಸೀಡ್ ಫೈಬರ್ ಇಂಟರ್‌ನೆಟ್ ಬಳಸಬಹುದು...
ಕಲಿಯದೆ, ಕಲಿಸದೇ ಒಲಿಯುವ ವಿದ್ಯೆ
ಅಸಲು ಕಲಿಯದೆ, ಕಲಿಸದೇ ವಯಸ್ಸಿಗೆ ಅನುಗುಣವಾಗಿ ತನ್ನಿಂತಾನೇ ಸಿದ್ದಿಸುವ ಈ ವಿದ್ಯೆಗೆ ಪಠ್ಯಕ್ರಮ ಬೇರೆ ಬೇಕಾ? ಎಂಬ ಪ್ರಶ್ನೆ ಭುಗಿಲೆದ್ದಿದೆ. ನಿಜಕ್ಕಾದರೆ ಭಾರತ ಹಿಂದುಳಿದ ದೇಶವೇ ಹೌದಾದರೂ ಅದರ ಉನ್ನತ ಪರಂಪರೆ ಮತ್ತು ಭವ್ಯವಾದ ಸಂಸ್ಕೃತಿ ಮಾತ್ರ ಅತ್ಯಂತ ಉಜ್ವಲವಾದದ್ದು.
ಹೀಗಾಗಿಯೇ ನಮ್ಮ ಆಚಾರ-ವಿಚಾರಗಳು, ರೂಢಿ-ಸಂಪ್ರದಾಯಗಳು, ಪಾಶ್ಚಿಮಾತ್ಯ ದೇಶಗಳಿಗಿಂತ ಭಿನ್ನವಾಗಿವೆ. ಹೆಣ್ಣಿಗೆ ಅತ್ಯಂತ ಪೂಜನೀಯ ಸ್ಥಾನ ನೀಡಿರುವ ಭಾರತೀಯರು ‘ಯತ್ರ ನಾರಿ ಪೂಜ್ಯತೆ ರಮಂತೆ ತತ್ರ ದೇವತಃ’ ಅಂದರೆ ಹೆಣ್ಣು ಎಲ್ಲಿ ಪೂಜಿಸಲ್ಪಡುತ್ತಾಳೋ, ಅಲ್ಲಿ ದೇವತೆಗಳು ವಾಸ ಮಾಡುತ್ತಾರೆಂಬ ನಂಬಿಕೆ ಹೊಂದಿದ್ದಾರೆ.
ಹೆಣ್ಣು ಮಾತೃ ಸ್ವರೂಪಿಣಿ ಮಾತ್ರವಲ್ಲದೇ ಜಗತ ಜನನಿ ಎಂಬ ನಂಬಿಕೆ ಹೊಂದಿರುವ ನಾವು ಹೆಣ್ಣಿಗೆ ಅವಮಾನವಾಗುವುದನ್ನು ಖಂಡಿತಾ ಸಹಿಸುವುದಿಲ್ಲ. ಆದ್ದರಿಂದ ಲೈಂಗಿಕತೆಯ ಬಗ್ಗೆ ನಮ್ಮದೇ ಆದ ಮಡಿವಂತಿಕೆಯನ್ನು ನಾವು ಕಾಪಾಡಿಕೊಂಡು ಬಂದಿದ್ದೇವೆ. ಆದರೆ ಪಾಶ್ಚಿಮಾತ್ಯರು ಹೆಣ್ಣಿನ ಬಗ್ಗೆ ಹೊಂದಿರುವ ದೃಷ್ಟಿಕೋನ ಬೇರೆಯೇ ಆಗಿರುವುದರಿಂದ ಹೆಣ್ಣಿನ ಬಗ್ಗೆ ನಮ್ಮ ಹಾಗೂ ಅವರ ನಿಲುವುಗಳಿಗೆ ಅಜಗಜಾಂತರ ವ್ಯತ್ಯಾಸಗಳಿರುತ್ತವೆ.
ನಮ್ಮಲ್ಲಿ ಬಾಲಕ-ಬಾಲಿಕೆಯರಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಕುತೂಹಲವಿರುವುದು ಸುಳ್ಳಲ್ಲ. ಹಾಗೆಯೇ ಗಾಬರಿ, ಕಳವಳ ಕೂಡ ಇಲ್ಲದಿಲ್ಲ. ತಮ್ಮ ಮಕ್ಕಳು ದಾರಿ ತಪ್ಪದಂತೆ ಸಾಕಷ್ಟು ಮುಂಜಾಗ್ರತೆ ವಹಿಸುವ ತಂದೆ-ತಾಯಂದಿರು ತಮ್ಮ ಮಕ್ಕಳ ಭವಿಷ್ಯದ ಪ್ರತಿಯೊಂದು ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುತ್ತಾರೆ. ಆದರೆ ಅನೇಕ ಮಕ್ಕಳು ತಂದೆ-ತಾಯಿಗಳನ್ನು ಯಾಮಾರಿಸಿ, ತಮಗಿಷ್ಟ ಬಂದ ದಾರಿಯಲ್ಲೇ ಸಾಗುತ್ತಾರೆ. ಹೀಗಾಗಿಯೇ ಮಕ್ಕಳು ಅನೇಕ ಚಟಗಳಿಗೆ ಬಲಿಯಾಗುತ್ತಾರೆ.
ಇದನ್ನೂ ಓದಿ: ನೀವೂ ವಿದೇಶಕ್ಕೆ ಹೋಗಬೇಕಾ? ಹಾಗಾದರೆ ಪಾಸ್‌ಪೋರ್ಟ್'ಗೆ ಅರ್ಜಿ ಹಾಕೋದೆಲ್ಲಿ? ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ...
ಮುಕ್ತ ಲೈಂಗಿಕತೆಗಿಲ್ಲ ಅವಕಾಶ
ಅನೇಕ ಪಾಶ್ಚಿಮಾತ್ಯ ರಾಷ್ಟçಗಳಲ್ಲಿ ಓಪನ್ ಸೆಕ್ಸ್ (Open Sex) ಅರ್ಥಾತ್ ಮುಕ್ತ ಲೈಂಗಿಕತೆ ರೂಢಿಯಲ್ಲಿದ್ದರೆ, ಭಾರತ ಈ ವಿಷಯದಲ್ಲಿ ಬಹಳಷ್ಟು ಹಿಂದಿದೆ. ಹಿಂದಿನ ಕಾಲದಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುತ್ತಿರಲಿಲ್ಲ. ಹೆಚ್ಚೆಂದರೆ ಎಸ್‌ಎಸ್‌ಎಲ್‌ಸಿ ಮುಗಿಸಿದರೆ ಅದೇ ಪುಣ್ಯ ಅನ್ನುವಂತಿತ್ತು. ಗಂಡು ನೋಡಿ, ಮೂರು ಗಂಟು ಹಾಕಿಸಿ ತಮ್ಮ ಪಾಲಿನ ಕರ್ತವ್ಯ ಮುಗಿಯಿತು ಎಂದು ಭಾವಿಸಿ ನೆಮ್ಮದಿಯಿಂದ ಇರುತ್ತಿದ್ದರು.
ಕೆಲವು ತಂದೆ-ತಾಯಂದಿರು ಸಂಜೆಯಾದರೆ ಸಾಕು ಹೆಣ್ಣು ಮಕ್ಕಳನ್ನು ಹೊಸಿಲಿ ನಿಂದಾಚೆ ದಾಟಲು ಬಿಡುತ್ತಿ ರಲಿಲ್ಲ. ಕಾಲ ಕ್ರಮೇಣ ಇವೆಲ್ಲಾ ಬದಲಾಗಿವೆಯಾದರೂ ‘ಲೈಂಗಿಕತೆ ಬಗ್ಗೆ’ ಪೋಷಕರು ಹೊಂದಿರುವ ಧೋರಣೆ ಈಗಲೂ ಕಠಿಣವಾಗಿಯೇ ಇದೆ. ಹೀಗಾಗಿ ಲೈಂಗಿಕ ಶಿಕ್ಷಣವನ್ನು ಇಂತಹ ಮಡಿವಂತ ಪಾಲಕರು ಸುತಾರಾಂ ಒಪ್ಪಲು ಸಿದ್ದರಿಲ್ಲ!
ಸಾಮಾನ್ಯ ಶಿಕ್ಷಣದ ಜೊತೆಗೆ ಲೈಂಗಿಕ ಶಿಕ್ಷಣ
ಆದರೆ ಕೆಲವು ಮನಃಶಾಸ್ತçಜ್ಞರ ಪ್ರಕಾರ ಮಕ್ಕಳಿಗೆ ಸಾಮಾನ್ಯ ಶಿಕ್ಷಣದ ಜೊತೆ ಜೊತೆಗೆ ಲೈಂಗಿಕ ಶಿಕ್ಷಣವೂ ಅಗತ್ಯವಾಗಿರುತ್ತದೆ. ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳು ಋತುಮತಿಯಾಗುವ ಸಂದರ್ಭದಲ್ಲಿ ಸ್ರವಿಸುವ ಸ್ವಾಭಾವಿಕ ಕ್ರಿಯೆಯಾಗಿರುವುದರಿಂದ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ.
ಈ ರೀತಿ ಲೈಂಗಿಕ ವಿಷಯಗಳ ಬಗ್ಗೆ ಬಾಲಕ-ಬಾಲಕಿಯರಿಗೆ ಅವರದೇ ಆದ ಸಂದೇಹಗಳಿರುತ್ತವೆ. ಅವುಗಳನ್ನು ಬೇರೊಬ್ಬ ರೊಡನೆ ಹಂಚಿಕೊಳ್ಳಲು ಅಂಜಿಕೆ ಅಥವಾ ನಾಚಿಕೆ. ಹೀಗಾಗಿ ಲೈಂಗಿಕ ವಿಚಾರಗಳ ಬಗ್ಗೆ ಬಹುತೇಕ ಮಕ್ಕಳು ಬಹಿರಂಗವಾಗಿ ಚರ್ಚಿಸುವುದಿಲ್ಲ. ಅದಕ್ಕೆ ಆಸ್ಪದವೂ ಇರುವುದಿಲ್ಲ. ಆದ್ದರಿಂದ ಸೂಕ್ತ ಲೈಂಗಿಕ ಶಿಕ್ಷಣದ ಮೂಲಕ ಮಕ್ಕಳಲ್ಲಿ ಇರಬಹುದಾದಂತಹ ಆತಂಕ, ಗಾಬರಿ ಮತ್ತು ಗೊಂದಲಗಳನ್ನು ನಿವಾರಿಸಬಹುದು ಎನ್ನುವುದು ಅನೇಕರ ವಾದ!
ಇದನ್ನೂ ಓದಿ: ಕಾನೂನು ಶಿಕ್ಷಣಕ್ಕೆ ಕಠಿಣ ನಿಯಮಗಳು ಜಾರಿ | ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿಗಳು
ಮೊಬೈಲ್‌ನಲ್ಲಿ ಮುಚ್ಚುಮರೆಯಿಲ್ಲದ ವೀಕ್ಷಣೆ
ಸಾಮಾನ್ಯವಾಗಿ ವಿದ್ಯಾರ್ಥಿಗಳ ಮನಸ್ಸು ತುಂಬಾ ಸೂಕ್ಷ್ಮ ಹಾಗೂ ಸಂವೇದನಾಶೀಲವಾಗಿರುತ್ತದೆ. ಇಂದಿನ ಮಾಹಿತಿ ಯುಗದಲ್ಲಿ ವಿದ್ಯಾರ್ಥಿಗಳು, ತಾವು ಆಪೇಕ್ಷೆ ಪಡುವಂತಹ ಯಾವುದೇ ಮಾಹಿತಿ ಅಥವಾ ಚಿತ್ರಗಳನ್ನು ಕ್ಷಣಾರ್ಧದಲ್ಲಿ ಇಂಟರ್‌ನೆಟ್ ಮೂಲಕ ನೋಡಬಹುದಾಗಿದೆ.
ಅನೇಕ ವಿದ್ಯಾರ್ಥಿಗಳು ಇಂಟರ್‌ನೆಟ್‌ನಲ್ಲಿ ನೀಲಿ ಚಿತ್ರಗಳನ್ನು ಯಥೇಚ್ಚವಾಗಿ ನೋಡುವ ಹವ್ಯಾಸ ಬೆಳಸಿಕೊಂಡಿರುತ್ತಾರೆ. ಮೊಬೈಲ್‌ಗಳಲ್ಲಿ ಇಂದು ಹದಿಹರೆಯದ ಯುವಕರ ಜೊತೆ, ಮಧ್ಯ ವಯಸ್ಕರು, ಅರವತ್ತು ವರ್ಷಕ್ಕೆ ಮೇಲ್ಪಟ್ಟವರು ಕೂಡ ಯಾವುದೇ ಸಂಕೋಚವಿಲ್ಲದೆ ಅಂದರೆ ಹೆದರಿಕೆ ಇಲ್ಲದೇ ಅಶ್ಲೀಲ ಚಿತ್ರಗಳನ್ನು ಗಂಟೆಗಟ್ಟಲೆ ಕುಳಿತು ನೋಡುತ್ತಾರೆ.
ಇಂದಿನ ಮಕ್ಕಳು ಅಥವಾ ಯುವಕರು ತಮಗೇನು ಬೇಕೋ ಅದನ್ನು ಪಡೆಯಲು ಸಾಧ್ಯವಿರುವಾಗ ‘ಲೈಂಗಿಕತೆ’ ಎಂಬುದನ್ನು ಗುಬ್ಬಚ್ಚಿ ಗೂಡಿನಲ್ಲಿ ಬಚ್ಚಿಡಲು ಸಾಧ್ಯವೇ? ಹೀಗಾಗಿ ಅವರಿಗೆ ಪಠ್ಯಕ್ರಮದಲ್ಲೇ ಹಂತ ಹಂತವಾಗಿ ಲೈಂಗಿಕ ಶಿಕ್ಷಣವನ್ನು ನೀಡುವ ಮೂಲಕ ಮುಂದೆ ಒದಗಬಹುದಾದ ಆವಾಂತರಗಳನ್ನು ತಪ್ಪಿಸಬಹುದು ಎಂದು ಕೆಲವರು ಪ್ರತಿಪಾದಿಸುತ್ತಾರೆ.
ಗೌರವಸ್ಥ ಕುಟುಂಬಗಳು ಅಥವಾ ಪೋಷಕರು ‘ಲೈಂಗಿಕ ಶಿಕ್ಷಣ’ದ ಬಗ್ಗೆ ತಮ್ಮವೇ ಆದ ಶಂಕೆಗಳನ್ನು ವ್ಯಕ್ತಪಡಿಸುತ್ತಾರೆ. ‘ನಮ್ಮ ಮಕ್ಕಳು ಕೆಡಲು ಈಗಾಗಲೇ ನೂರಾರು ದಾರಿಗಳಿವೆ. ಅದು ಸಾಲದು ಎಂಬಂತೆ ಲೈಂಗಿಕ ಶಿಕ್ಷಣವನ್ನು ಶಾಲೆಗಳಲ್ಲಿ ನೀಡಲು ಪ್ರಾರಂಭಿಸಿದರೆ, ನಮ್ಮ ಮಕ್ಕಳನ್ನು ದೇವರೇ ಕಾಪಾಡಬೇಕು!’ ಎಂದು ಅಲವತ್ತುಗೊಳ್ಳುವ ತಂದೆ-ತಾಯಂದಿರ ಮಾನಸಿಕ ತುಮುಲವನ್ನು ಸಾರಾಸಗಟಾಗಿ ತಳ್ಳಿಹಾಕಲಾಗದು.
ಇದನ್ನೂ ಓದಿ: ಈ ಲಕ್ಷಣಗಳು ಇದ್ದರೆ ಮಾತ್ರ ಅದು ಶುದ್ಧ ಬಂಡೂರು ಕುರಿ Pure Bandur Sheep Characteristics
‘ಲೈಂಗಿಕ ಶಿಕ್ಷಣ’ ಮುಖ್ಯವೋ? ‘ನೈತಿಕ ಶಿಕ್ಷಣ’ ಮುಖ್ಯವೋ?
ಸರ್ಕಾರಿ ಅಧಿಕಾರಿಗಳು ಇದರ ಬಗ್ಗೆ ಸ್ಪಷ್ಟನೆ ನೀಡಿ ‘ಲೈಂಗಿಕ ಶಿಕ್ಷಣ’ವೆಂದರೆ ಬರೀ ಲೈಂಗಿಕತೆಯಲ್ಲ; ಲೈಂಗಿಕ ಅಂಗಗಳ ರಚನೆ, ಮುಟ್ಟು, ಗರ್ಭಸ್ರಾವ, ತಾಯ್ತನ, ಮಕ್ಕಳ ಪಾಲನೆ ಮುಂತಾದ ಶರೀರ ರಚನಾ ಶಾಸ್ತ್ರದ ವಿಷಯಗಳು ಇದರಲ್ಲಿ ಸೇರ್ಪಡೆಗೊಂಡಿವೆ ಎಂದು ಹೇಳುತ್ತಾರೆ. ಆದರೆ ಲೈಂಗಿಕ ಶಿಕ್ಷಣದ ಬಗ್ಗೆ ಸ್ಪಷ್ಟ ರೂಪು ರೇಷೆಗಳಾಗಲಿ, ಇತಿಮಿತಿಗಳಾಗಲಿ ಪ್ರಕಟಗೊಂಡಿಲ್ಲ.
ನಮ್ಮ ದೇಶದಲ್ಲಿ ಈಗೀಗ ಹೆಣ್ಣಿನ ಮೇಲಿನ ದೌರ್ಜನ್ಯಗಳು ಅಸಾಧ್ಯವಾದ ಮಟ್ಟದಲ್ಲಿ ಬಿಗಡಾಯಿಸಿಕೊಂಡಿವೆ. ದೇಶದ ಒಂದಲ್ಲಾ ಒಂದು ಕಡೆಗೆ ಪ್ರತಿ ನಿಮಿಷಕ್ಕೆ ಒಂದರಂತೆ ಹೆಣ್ಣಿನ ಮೇಲೆ ಅತ್ಯಾಚಾರ ನಡೆಯುತ್ತದೆ. ಇಂತಹ ಸ್ಥಿತಿಯಲ್ಲಿ ನಮಗೆ ‘ಲೈಂಗಿಕ ಶಿಕ್ಷಣ’ ಮುಖ್ಯವೋ? ಅಥವಾ ‘ನೈತಿಕ ಶಿಕ್ಷಣ’ ಮುಖ್ಯವೋ? ಎಂಬುದನ್ನು ಎಚ್ಚರಿಕೆಯಿಂದ ನಿರ್ಧರಿಸಿಕೊಳ್ಳಬೇಕಿದೆ.
WhatsApp - 1 | WhatsApp - 2 | WhatsApp - 3 | Join Telegram |