ಇದು ಜಗತ್ತಿನಲ್ಲಿ ಅತಿ ಹೆಚ್ಚು ಬಲಿ ಪಡೆಯುತ್ತಿರುವ ರೋಗ World Heart Day Cardiovascular Diseases
ಪ್ರತಿವರ್ಷ ಒಂದೊಂದು ಥೀಮ್’ನಡಿ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ‘ನಿಮ್ಮ ಹೃದಯಕ್ಕೆ ನೀವೇ ಜವಾಬ್ದಾರರು’ ಎಂಬುದು ಈ ವರ್ಷದ ಧ್ಯೆಯವಾಕ್ಯ. ಅಂದರೆ, ಪ್ರತಿಯೊಬ್ಬರೂ ತಮ್ಮ ಹೃದಯವನ್ನು ತಾವೇ ಕಾಳಜಿ ಮಾಡಬೇಕು. ಹೃದಯ ಸಂಬಂಧಿ ಕಾಯಿಲೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹೇಗೆ? ಎಂಬುದನ್ನು ಈ ಧ್ಯೆಯವಾಕ್ಯ ವಿವರಿಸುತ್ತದೆ...
WhatsApp - 1 | WhatsApp - 2 | WhatsApp - 3 | Join Telegram |
Kannada Mitra - News Desk.
ದಿನೇ ದಿನೆ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹದಿಹರೆಯದವರು, ಮಧ್ಯ ವಯಸ್ಕರು, ವಯೋವೃದ್ಧರ ವರೆಗೆ ಹೃದ್ರೋಗಗಳು ಸಂಭವಿಸುತ್ತಿವೆ. ಅದೆಷ್ಟೋ ಪ್ರಕರಣಗಳಲ್ಲಿ ಹೃದಯ ಕಂಪಿಸಿದಷ್ಟೇ ನೆನಪಿರುತ್ತದೆ. ಆಮೇಲೆ ಜೀವ ಉಳಿದರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒತ್ತಡಯುಕ್ತ ಅನಾರೋಗ್ಯಕರ ಜೀವನಶೈಲಿ ಮನುಷ್ಯನ ಆಯಷ್ಯನ್ನೇ ನುಂಗಿ ಹಾಕುತ್ತಿದೆ. ಮನುಷ್ಯ ಬದುಕಲು ಅವಶ್ಯವಾದ ಹೃದಯದ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನವನ್ನು (World Heart Day) ಆಚರಿಸಲಾಗುತ್ತದೆ.
ಇದನ್ನೂ ಓದಿ: ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ | ಇನ್ಮುಂದೆ ಹೊರಗಿದ್ದರೂ ಮೊಬೈಲ್‌ಗೆ ಮನೆಯ ಹೈಸೀಡ್ ಫೈಬರ್ ಇಂಟರ್‌ನೆಟ್ ಬಳಸಬಹುದು...
ವಿಶ್ವ ಹೃದಯ ದಿನಾಚರಣೆ
1999ರಲ್ಲಿ ‘ವರ್ಲ್ಡ್ ಹಾರ್ಟ್ ಫೆಡರೇಶನ್’ (World Heart Federation - WHF), ‘ವಿಶ್ವ ಆರೋಗ್ಯ ಸಂಸ್ಥೆ’ (World Health Organization - WHO) ಸಹಯೋಗದೊಂದಿಗೆ ಮೊದಲ ಬಾರಿಗೆ ವಿಶ್ವ ಹೃದಯ ದಿನ ಆಚರಿಸಿತು. 1997ರಿಂದ 2011ರ ವರೆಗೆ ‘ವರ್ಲ್ಡ್ ಹಾರ್ಟ್ ಫೆಡರೇಶನ್’ ಅಧ್ಯಕ್ಷರಾಗಿದ್ದ ಆಂಟೋನಿ ಬೇಯಸ್ ಅವರು ಈ ದಿನದ ಆಚರಣೆಯ ಪ್ರಸ್ತಾಪವಿಟ್ಟಿದ್ದರು.
ಆ ಸಮಯದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿರುವುದನ್ನು ಮನಗಂಡ ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಪ್ರತಿವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನವನ್ನು ಆಚರಿಸಬೇಕು ಎಂದು ನಿರ್ಧರಿಸಿತು. ಸೆಪ್ಟೆಂಬರ್ 24, 2000ರಲ್ಲಿ ಮೊದಲ ಬಾರಿ ವಿಶ್ವ ಹೃದಯ ದಿನವನ್ನು ಆಚರಿಸಲಾಗಿತ್ತು.
ಇದನ್ನೂ ಓದಿ: ನೀವೂ ವಿದೇಶಕ್ಕೆ ಹೋಗಬೇಕಾ? ಹಾಗಾದರೆ ಪಾಸ್‌ಪೋರ್ಟ್'ಗೆ ಅರ್ಜಿ ಹಾಕೋದೆಲ್ಲಿ? ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ...
ವರ್ಲ್ಡ್ ಹಾರ್ಟ್ ಫೆಡರೇಶನ್ ಕುರಿತು
ಸ್ವಿಟ್ಸರ್ಲೆಂಡ್‌ನ ಜಿನೀವಾದಲ್ಲಿ ವರ್ಲ್ಡ್ ಹಾರ್ಟ್ ಫೆಡರೇಶನ್ ಕೇಂದ್ರ ಕಚೇರಿಯಿದೆ. 1972ರಲ್ಲಿ ಇಂಟರ್ ನ್ಯಾಷನಲ್ ಸೊಸೈಟಿ ಆಫ್ ಕಾರ್ಡಿಯಾಲಜಿಯನ್ನಾಗಿ ಸ್ಥಾಪಿಸಲಾಯಿತು. ಇದು 1978ರಲ್ಲಿ ಇಂಟರ್ ನ್ಯಾಷನಲ್‌ನಲ್ ಕಾರ್ಡಿಯಾಲಜಿ ಫೆಡರೇಶನ್ ನೊಂದಿಗೆ ವಿಲೀನಗೊಂಡಿತು.
ಅಂತಿಮವಾಗಿ 1998ರಲ್ಲಿ ವರ್ಲ್ಡ್ ಹಾರ್ಟ್ ಫೆಡರೇಶನ್ ಆಗಿ ವಿಕಸನಗೊಂಡಿತು. ಇದು 200ಕ್ಕೂ ಹೆಚ್ಚು ವೈಜ್ಞಾನಿಕ ಸಂಸ್ಥೆಗಳು ಮತ್ತು 100ಕ್ಕೂ ಹೆಚ್ಚು ದೇಶಗಳ ನಾಗರಿಕ ಸಮಾಜ ಮತ್ತು ರೋಗಿಗಳ ಸಂಸ್ಥೆಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಕಾನೂನು ಶಿಕ್ಷಣಕ್ಕೆ ಕಠಿಣ ನಿಯಮಗಳು ಜಾರಿ | ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿಗಳು
ಈ ವರ್ಷದ ವಿಶ್ವ ಹೃದಯ ದಿನದ ಧ್ಯೆಯವಾಕ್ಯ
ಪ್ರತಿವರ್ಷ ಒಂದೊಂದು ಥೀಮ್’ನಡಿ ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ. ‘ನಿಮ್ಮ ಹೃದಯಕ್ಕೆ ನೀವೇ ಜವಾಬ್ದಾರರು’ ಎಂಬುದು ಈ ವರ್ಷದ ಧ್ಯೆಯವಾಕ್ಯ. ಅಂದರೆ, ಪ್ರತಿಯೊಬ್ಬರೂ ತಮ್ಮ ಹೃದಯವನ್ನು ತಾವೇ ಕಾಳಜಿ ಮಾಡಬೇಕು. ಹೃದಯ ಸಂಬಂಧಿ ಕಾಯಿಲೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಹೇಗೆ? ಎಂಬುದನ್ನು ಈ ಧ್ಯೆಯವಾಕ್ಯ ವಿವರಿಸುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಅನಾರೋಗ್ಯಕರ ಆಹಾರ ಪದ್ದತಿ, ದೈಹಿಕ ನಿಷ್ಕ್ರಿಯತೆ, ಅತಿಯಾದ ಒತ್ತಡ, ತಂಬಾಕು ಸೇವನೆ, ಮದ್ಯಸೇವನೆಯು ಹೃದಯ ಸಂಬAಧಿ ಕಾಯಿಲೆಗಳಿಗೆ ಕಾರಣವಾಗುತ್ತಿವೆ. ಇಂತಹ ಅನಾರೋಗ್ಯಕರ ಜೀವನಶೈಲಿ ಹೊಂದಿರುವವರು ರಕ್ತದೊತ್ತಡ, ಹೃದಯಾಘಾತ, ಪಾಶ್ಚವಾಯು, ಸ್ಥುಲಕಾಯದಿಂದ ಬಳಲುತ್ತಾರೆ.
ಇದನ್ನೂ ಓದಿ: ಇಂದಿನ ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ಬೇಕಾ? ಸೆಕ್ಸ್ ಎಜುಕೇಷನ್ ಸಾಧಕ ಬಾಧಕಗಳು students need sex education
ಅತಿ ಹೆಚ್ಚು ಬಲಿ ಪಡೆಯುತ್ತಿರುವ ರೋಗ
ಡಬ್ಲ್ಯುಎಚ್‌ಒನ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಪ್ರತಿನಿತ್ಯ 10,000ಕ್ಕೂ ಅಧಿಕ ಮಂದಿ ಹೃದಯ ಸಂಬAಧಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಅಧಿಕ ಉಪ್ಪು ಸೇವನೆ ರಕ್ತದೊತ್ತಡವನ್ನು ಹೆಚ್ಚಿಸಿ, ಹೃದಯಾಘಾತ ಮತ್ತು ಪಾರ್ಶ್ವವಾಯು ರೋಗ ಉಲ್ಬಣಗೊಳಿಸುತ್ತದೆ. ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಬಲಿ ಪಡೆಯುತ್ತಿರುವ ರೋಗ ಇದಾಗಿದೆ!
ವಿಶೇಷವೆಂದರೆ ಹೃದಯ ಸಂಬಂಧಿ ಕಾಯಿಲೆಗೆ ಬಲಿಯಾಗುತ್ತಿರುವವರಲ್ಲಿ ಪುರುಷರೇ ಹೆಚ್ಚು. ಪಶ್ಚಿಮ ಮತ್ತು ಪೂರ್ವ ಯೂರೋಪ್‌ಗೆ ಹೋಲಿಸಿದರೆ ಮಧ್ಯ ಏಷ್ಯಾದಲ್ಲಿ ಹೃದಯ ಸಂಬAಧಿ ಕಾಯಿಲೆಗೆ ಮೃತಪಡುವವರ ಸಂಖ್ಯೆ ಐದು ಪಟ್ಟು ಹೆಚ್ಚಿದೆ.
ರಾಷ್ಟ್ರೀಯ ಆರೋಗ್ಯ ನೀತಿ
2013ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಗುರಿಗಳನ್ನು ಅಭಿವೃದ್ಧಿಪಡಿಸಿತು. ಅದರಲ್ಲಿ ಹೃದಯ ಸಂಬAಧಿ ಕಾಯಿಲೆಗಳೂ ಸೇರಿದ್ದವು. 2025ರ ವೇಳೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಮೃತಪಡುವವರ ಪ್ರಮಾಣವನ್ನು ಶೇ.25ರಷ್ಟು ಕಡಿಮೆ ಮಾಡುವ ಗುರಿ ಹೊಂದಿದೆ.
ಉಪ್ಪು ಸೇವನೆ ಕಡಿಮೆ ಮಾಡುವುದರಿಂದ 2030ರ ವೇಳೆಗೆ ಸುಮಾರು 9 ಲಕ್ಷ ಜೀವಗಳನ್ನು ಉಳಿಸಬಹುದು ಎಂದು ಡಬ್ಲ್ಯುಎಚ್‌ಒ ಹೇಳಿದೆ. ಕೆಲಸದ ಸ್ಥಳದಲ್ಲಿಯೂ ಉದ್ಯೋಗಿಗಳು ಒತ್ತಡದಿಂದ ಕಾರ್ಯ ನಿರ್ವಹಿಸಬೇಕಿರುತ್ತದೆ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಹೃದಯ ಸಂಬಂಧಿ ಕಾಯಿಲೆಗಳ ತಡೆಗೆ ಕಂಪನಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಂತಾರಾಷ್ಟ್ರೀಯ ಎಸ್‌ಒಎಸ್ ಮಾರ್ಗಸೂಚಿ ಹೊರಡಿಸಿದೆ.
ಇದನ್ನೂ ಓದಿ: ಈ ಲಕ್ಷಣಗಳು ಇದ್ದರೆ ಮಾತ್ರ ಅದು ಶುದ್ಧ ಬಂಡೂರು ಕುರಿ Pure Bandur Sheep Characteristics
WhatsApp - 1 | WhatsApp - 2 | WhatsApp - 3 | Join Telegram |