APAAR ID Card-ವಿದ್ಯಾರ್ಥಿಗಳಿಗೆ ಆಧಾರ್ ಮಾದರಿಯ ‘ಅಪಾರ್ ಕಾರ್ಡ್’ ವಿತರಣೆ | ಏನಿದರ ಪ್ರಯೋಜನ?
ಆಧಾರ್ ಕಾರ್ಡ್’ನಂತೆ ಅಪಾರ್ ಕಾರ್ಡ್ ಕೂಡ ವಿಶಿಷ್ಟವಾದ 12 ಅಂಕಿಯನ್ನು ಹೊಂದಿದ್ದು; ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ಶಾಲಾ-ಕಾಲೇಜುಗಳು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದ ವರೆಗೆ ದಾಖಲಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಈ ಕಾರ್ಡ್ ಅನ್ನು ನೀಡಲಾಗುತ್ತದೆ...
WhatsApp - 1 | WhatsApp - 2 | WhatsApp - 3 | Join Telegram |

Kannada Mitra - News Desk.
ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢ ಮತ್ತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ‘ಆಧಾರ್’ ಸಂಖ್ಯೆಯ ಮಾದರಿಯಲ್ಲಿ 12 ಅಂಕಿಯ ‘ಅಪಾರ್’ ವಿಶಿಷ್ಟ ಗುರುತಿನ ಚೀಟಿ ವಿತರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಈ ಸಂಬಂಧ ವಿದ್ಯಾರ್ಥಿಗಳ ಹೆಸರು ನೋಂದಾಯಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
‘ಅಪಾರ್’ ಗುರುತಿನ ಚೀಟಿಗೆ ವಿದ್ಯಾರ್ಥಿಗಳ ಹೆಸರು ನೋಂದಣಿಗೂ ಮುಂಚೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿದ್ದು; ಮುಖ್ಯ ಶಿಕ್ಷಕರು ಪೋಷಕರ ಸಭೆ ಕರೆದು ಅವರ ಒಪ್ಪಿಗೆ ಪಡೆಯುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.
ಏನಿದು ಅಪಾರ್ ಐಡಿ?
ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ 2020 (National Education Policy - NEP) ಯೋಜನೆ ಅಡಿ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಏಕರೂಪದ ಗುರುತಿನ ಚೀಟಿ ನೀಡಲು ‘ಒಂದು ದೇಶ, ಏಕರೂಪದ ವಿದ್ಯಾರ್ಥಿ ಗುರುತಿನ ಚೀಟಿ’ (One Nation One Student ID Card) ಶಿಫಾರಸು ಮಾಡಲಾಗಿತ್ತು. ಅದರಂತೆ ಎಲ್ಲಾ ವಿದ್ಯಾರ್ಥಿಗಳಿಗೂ ‘ಅಪಾರ್’ ವಿಶಿಷ್ಟ ಗುರುತಿನ ಚೀಟಿ ನೀಡಲಾಗುತ್ತಿದೆ.
ಆಧಾರ್ ಕಾರ್ಡ್’ನಂತೆ ಅಪಾರ್ ಕಾರ್ಡ್ ಕೂಡ ವಿಶಿಷ್ಟವಾದ 12 ಅಂಕಿಯನ್ನು ಹೊಂದಿದ್ದು; ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ಶಾಲಾ-ಕಾಲೇಜುಗಳು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದ ವರೆಗೆ ದಾಖಲಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಈ ಕಾರ್ಡ್ ಅನ್ನು ನೀಡಲಾಗುತ್ತದೆ.
ಅಪಾರ್ ಐಡಿ ನೋಂದಣಿ ಹೇಗೆ?
ಆಯಾ ವಿದ್ಯಾರ್ಥಿಗಳ ಪೋಷಕರ ಆಧಾರ್, ಮತದಾನದ ಚೀಟಿ, ಚಾಲನಾ ಪರವಾನಗಿ ನಂಬರ್ ಲಿಂಕ್ ಮಾಡಿ ವಿದ್ಯಾರ್ಥಿಗಳ ಐಡಿ ಸೃಷ್ಟಿಸಲಾಗುತ್ತದೆ. ಸದ್ಯ ವಿದ್ಯಾರ್ಥಿಗಳ ಹೆಸರು ನೋಂದಾಯಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಮುಖ್ಯ ಶಿಕ್ಷಕರು ಪೋಷಕರ ಸಭೆ ಕರೆದು ಅವರ ಒಪ್ಪಿಗೆ ಪಡೆಯುವಂತೆ ಸೂಚಿಸಿದೆ.
ಈಗಾಗಲೇ ರಾಜ್ಯ ಪಠ್ಯಕ್ರಮದ ಶಾಲೆಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ಎಸ್‌ಟಿಎಸ್ (Student Tracking System) ಗುರುತಿನ ಚೀಟಿ ಮತ್ತು ಕೇಂದ್ರ ಸರಕಾರದ ಪಿಇಎನ್ ನಂಬರ್ (Permanent Education Number) ಚಾಲ್ತಿಯಲ್ಲಿ ಇದೆ.
ಇವುಗಳನ್ನೂ ಓದಿ:
- ಕಡೆಗೂ ಜಿಪಂ, ತಾಪಂ ಚುನಾವಣೆಗೆ ಮುಹೂರ್ತ ಫಿಕ್ಸ್ | ಹೈಕೋರ್ಟ್'ನಲ್ಲಿ ಮಹತ್ವದ ವಿಚಾರಣೆ
- ರೈತರಿಗೆ ಕೋಟಿ ಕೋಟಿ ಆದಾಯದ ಡಾರ್ಪರ್ ಕುರಿ ಸಾಕಣೆ | ವಿದೇಶಿ ತಳಿಯ ಸಂಪೂರ್ಣ ಮಾಹಿತಿ ಇಲ್ಲಿದೆ...
- ಮಳೆಬೆಳೆ ಸಮೃದ್ಧಿ ಅನ್ನದಾತರು ಸತೃಪ್ತ | ರೈತರ ಬದುಕು ವಿಶ್ಲೇಷಿಸುವ ಮೈಲಾರ ಕಾರ್ಣಿಕಗಳು
- ಮೊಬೈಲ್ನಲ್ಲಿಯೇ ಹೊಸ ಮತದಾರರ ಚೀಟಿಗೆ ಅರ್ಜಿ ಹಾಕಿ | ಆನ್ಲೈನ್ ಮೂಲಕ ಮತದಾರರ ಪಟ್ಟಿಗೆ ಸೇರುವ ಸರಳ ವಿಧಾನ ಇಲ್ಲಿದೆ...
- e-Khata - ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಇ-ಖಾತೆ | ಸರ್ಕಾರದ ಹೊಸ ಯೋಜನೆ
WhatsApp - 1 | WhatsApp - 2 | WhatsApp - 3 | Join Telegram |