e-Khata - ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಇ-ಖಾತೆ | ಸರ್ಕಾರದ ಹೊಸ ಯೋಜನೆ

ಇ-ಖಾತಾ ಕಡ್ಡಾಯ ವ್ಯವಸ್ಥೆಯನ್ನು ಸರಳಗೊಳಿಸಲು ಸರ್ಕಾರ ಮುಂದಾಗದೆ. ಆನ್‌ಲೈನ್‌ನಲ್ಲಿ ಇ-ಖಾತೆಗಾಗಿ ಅರ್ಜಿ ಸಲ್ಲಿಸಿರುವ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಖಾತೆ ವಿತರಣೆ ಮಾಡುವ ನೂತನ ಯೋಜನೆ ಶೀಘ್ರದಲ್ಲಿಯೇ ಶುರುವಾಗಲಿದೆ...

Feb 16, 2025 - 18:42
WhatsApp - 1 WhatsApp - 2 WhatsApp - 3 Join Telegram

e-Khata - ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಇ-ಖಾತೆ | ಸರ್ಕಾರದ ಹೊಸ ಯೋಜನೆ

Kannada Mitra - News Desk.

ಜನರು ಮೋಸ ಹೋಗುವುದನ್ನು ತಡೆಯುವ ಹಿನ್ನಲೆಯಲ್ಲಿ ಅನುಷ್ಠಾನಗೊಳಿಸಲಾದ ‘ಇ-ಖಾತಾ’ (E-Khata) ವ್ಯವಸ್ಥೆಯ ಅವ್ಯವಸ್ಥೆಯಿಂದ ಜನ ಹೈರಾಣಾಗಿದ್ದಾರೆ. ಇ-ಖಾತಾ ಕಡ್ಡಾಯಗೊಳಿಸಿದ ನಂತರ ಹಲವು ಸಮಸ್ಯೆಗಳು ಎದುರಾಗಿದ್ದು, ನೋಂದಣಿ ಪ್ರಕ್ರಿಯೆಗೆ ತೊಡಕಾಗಿದೆ. ನಿತ್ಯವೂ ಜನರು ಸ್ಥಳೀಯ ಸಂಸ್ಥೆ ಹಾಗೂ ನೋಂದಣಿ ಕಚೇರಿಗಳಿಗೆ ಅಲೆದಾಡುವಂತಾಗಿದೆ.

ರಾಜ್ಯ ಸರ್ಕಾರ ಸಮರ್ಪಕವಾಗಿ ಪೂರ್ವಸಿದ್ಧತೆ ಮಾಡದೆ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿರುವುದರಿಂದ ಈ ಹಲವು ಸಮಸ್ಯೆಗಳು ಎದುರಾಗಿದ್ದು; ವಿಶೇಷವಾಗಿ ಬೆಂಗಳೂರಿನ ಜನತೆ ಈ ಖಾತೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಏನಿದು ಈ-ಖಾತಾ

ಈತನಕ ನಗರ ಪ್ರದೇಶಗಳಲ್ಲಿ ಕಾಗದದ ದಾಖಲಾತಿಗಳ ಮೇಲೆ ನೋಂದಣಿ ಆಗುತ್ತಿತ್ತು. ಇದರಿಂದ ಅಕ್ರಮವಾಗಿ ಸ್ವತ್ತುಗಳ ನೋಂದಣಿ, ವಂಚನೆ ನಡೆಯುತ್ತಿತ್ತು. ಅದನ್ನು ತಪ್ಪಿಸಲು ಇ-ಖಾತಾ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ, ನಗರ ಪ್ರದೇಶಗಳ ಆಸ್ತಿಗಳ ನೋಂದಣಿ ಇ-ಖಾತಾ ಇದ್ದರೆ ಮಾತ್ರ ಸಾಧ್ಯ. 

ರಾಜ್ಯದ ನಗರ ಪ್ರದೇಶಗಳ ಆಸ್ತಿ ನೋಂದಣಿಗೆ ಡಿಜಿಟಲ್ ಸ್ವರೂಪದ ಇ-ಖಾತಾ ಕಡ್ಡಾಯಗೊಳಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ’ಯನ್ನು ಕಳೆದ 2024ರ ಫೆಬ್ರುವರಿಯಲ್ಲಿ ವಿಧಾನಮಂಡಲದ ಅನುಮೋದನೆ ಪಡೆದಿತ್ತು. ಅದನ್ನು ಸೆಪ್ಟೆಂಬರ್-ಅಕ್ಟೋಬರ್‌ನಿAದ ಜಾರಿಗೆ ತರಲಾಗಿದೆ.

ಮಾಲೀಕರ ಮನೆ ಬಾಗಿಲಿಗೆ ಖಾತೆ ವಿತರಣೆ 

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಆಸ್ತಿ ಮಾಲೀಕರು ಇ-ಖಾತಾ ಸಿಗದೆ ಪರದಾಡುವಂತಾಗಿದೆ. ಇದಕ್ಕೆ ಪರಿಹಾರ ಎಂಬAತೆ ಮನೆ ಬಾಗಿಲಿದೆ ಬಂದು ಖಾತಾ ವಿತರಿಸುವ ವಿನೂತನ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ.ಆನ್‌ಲೈನ್‌ನಲ್ಲಿ ಇ-ಖಾತೆಗಾಗಿ ಅರ್ಜಿ ಸಲ್ಲಿಸಿರುವ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಖಾತೆ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿನಿತ್ಯ ಸಾವಿರಾರು ಮಂದಿ ನಮಗೆ ಇನ್ನು ಖಾತಾ ಸಿಕ್ಕಿಲ್ಲ ಎಂದು ದೂರು ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖಾತಾಗೆ ಅರ್ಜಿ ಸಲ್ಲಿಸಿರುವವರ ಮನೆ ಬಾಗಿಲಿಗೆ ಖಾತಾ ವಿತರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾಹಿತಿ ನೀಡಿದ್ದಾರೆ. 

ಒಂದೂವರೆ ಲಕ್ಷ ಮಂದಿಗೆ ಮಾತ್ರ ಇ-ಖಾತಾ 

ಕಳೆದ ಆರು ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತೆಗೆ ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೆಲವರಿಗೆ ಮಾತ್ರ ಇ-ಖಾತಾ ಸಿಕ್ಕಿದೆ. ಉಳಿದವರು ಖಾತೆಗಾಗಿ ಪರದಾಡುತ್ತಿದ್ದಾರೆ. ಇಲ್ಲಿ ತನಕ ಇ-ಖಾತೆಗಾಗು 11 ಲಕ್ಷ ಕಟ್ಟಡ ಮಾಲೀಕರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕೇವಲ ಒಂದೂವರೆ ಲಕ್ಷ ಮಂದಿಗೆ ಮಾತ್ರ ಇ-ಖಾತಾ ಸಿಕ್ಕಿದೆ.

ಖಾತೆಗೆ ಅರ್ಜಿ ಸಲ್ಲಿಸಿರುವವರು ಮೂಲ ಮಾಲೀಕರೇ ಅಥವಾ ಅವರ ಹೆಸರಿನಲ್ಲಿ ಬೇರೆ ಯಾರಾದರೂ ಅರ್ಜಿ ಹಾಕಿರುವವರೇ ಎಂಬ ಅನುಮಾನ ಬಿಬಿಎಂಪಿ ಅಧಿಕಾರಿಗಳಿಗೆ ಕಾಡತೊಡಗಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ನಿಮ್ಮ ಬಾಗಿಲಿಗೆ ಬಂದು ಇ-ಖಾತಾ ವಿತರಿಸುವ ಕಾರ್ಯ ಮಾಡಲಿದ್ದಾರೆ.

ಇದರಿಂದ ಮನೆಯ ಮೂಲ ಮಾಲೀಕರು ಯಾರು ಎಂಬುದು ಗೊತ್ತಾಗಲಿದೆ. ಮಾತ್ರವಲ್ಲದೆ, ಕಟ್ಟಡ, ನಿವೇಶನಕ್ಕೆ ಆಸ್ತಿ ತೆರಿಗೆ ಪಾವತಿ ಮಾಡಲಾಗುತ್ತಿದೆಯೇ ಎಂಬ ಮಾಹಿತಿಯೂ ಲಭ್ಯವಾಗಲಿದೆ.

ಇವುಗಳನ್ನೂ ಓದಿ:

WhatsApp - 1 WhatsApp - 2 WhatsApp - 3 Join Telegram

Tags: