ಮೊಬೈಲ್‌ನಲ್ಲಿಯೇ ಹೊಸ ಮತದಾರರ ಚೀಟಿಗೆ ಅರ್ಜಿ ಹಾಕಿ | ಆನ್‌ಲೈನ್ ಮೂಲಕ ಮತದಾರರ ಪಟ್ಟಿಗೆ ಸೇರುವ ಸರಳ ವಿಧಾನ ಇಲ್ಲಿದೆ... New Voter ID Card

ಮತದಾರರ ಚೀಟಿ ಕೂಡ ಅನೇಕ ಕೆಲಸ ಕಾರ್ಯಗಳಿಗೆ ಗುರುತಿನ ಪುರಾವೆಯಾಗಿರುವುದರಿಂದ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸುವುದು, ಹೆಸರು ತೆಗೆಯುವುದು, ವಿಳಾಸ ಬದಲಾವಣೆ ಇತ್ಯಾದಿ ಕೆಲಸಗಳನ್ನು ಆನ್‌ಲೈನ್‌ನಲ್ಲಿ ನೀಬೇ ಮಾಡಿಕೊಳ್ಳಬಹುದಾಗಿದೆ. ಈ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ...

Feb 16, 2025 - 12:57
Feb 16, 2025 - 14:17
WhatsApp - 1 WhatsApp - 2 WhatsApp - 3 Join Telegram

ಮೊಬೈಲ್‌ನಲ್ಲಿಯೇ ಹೊಸ ಮತದಾರರ ಚೀಟಿಗೆ ಅರ್ಜಿ ಹಾಕಿ | ಆನ್‌ಲೈನ್ ಮೂಲಕ ಮತದಾರರ ಪಟ್ಟಿಗೆ ಸೇರುವ ಸರಳ ವಿಧಾನ ಇಲ್ಲಿದೆ... New Voter ID Card

Kannada Mitra - News Desk.

ಪ್ರತೀ ಚುನಾವಣೆಗೂ ಹೊಸ ಹೊಸ ಮತದಾರರ (New Voters) ಸೇರ್ಪಡೆಯಾಗುತ್ತದೆ. 18 ವರ್ಷ ಪೂರೈಸುವ ಯುವಕ, ಯುವತಿಯರು ಹೊಸ ಮತದಾರರ ಪಟ್ಟಿ (New Voter List) ಪಡೆಯಬಹುದಾಗಿದೆ. ಮತದಾರರ ಚೀಟಿ (Voter Card) ಪಡೆಯಲು ಚುನಾವಣೆಗಳೇ ಬರಬೇಕು ಎಂದೇನಿಲ್ಲ; 18 ವರ್ಷ ತುಂಬಿದ ತಕ್ಷಣ ಆನ್‌ಲೈನ್’ನಲ್ಲಿಯೇ ಹೊಸ ಮತದಾರರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮತದಾರರ ಚೀಟಿ ಕೂಡ ಅನೇಕ ಕೆಲಸ ಕಾರ್ಯಗಳಿಗೆ ಗುರುತಿನ ಪುರಾವೆಯಾಗಿರುವುದರಿಂದ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸುವುದು, ಹೆಸರು ತೆಗೆಯುವುದು, ವಿಳಾಸ ಬದಲಾವಣೆ ಇತ್ಯಾದಿ ಕೆಲಸಗಳನ್ನು ಆನ್‌ಲೈನ್‌ನಲ್ಲಿ ನೀವೇ ಮಾಡಿಕೊಳ್ಳಬಹುದಾಗಿದೆ. ಈ ಕುರಿತು ಒಂದಷ್ಟು ಮಾಹಿತಿಗಳು ಇಲ್ಲಿವೆ...

ಮತದಾರರಾಗಲು ಅರ್ಹತೆಗಳೇನು?

ಭಾರತದ ಪ್ರಜೆಯಾಗಿರಬೇಕು ಮತ್ತು ಚುನಾವಣಾ ವರ್ಷ ಅಥವಾ ಮತ ಮತ ಚನಾಯಿಸುವ ಮೊದಲು 18 ವರ್ಷ ಪೂರೈಸಿರಬೇಕು. ಮತದಾರರಾಗಿ ನೊಂದಾಯಿಸಲು ಬಯಸುವ ಕ್ಷೇತ್ರದಲ್ಲಿಯೇ ವಾಸಿಸುತ್ತಿರಬೇಕು. ಮತದಾರರ ಗುರುತಿನ ಚೀಟಿ ಪಡೆಯಲು ಪಾಸ್‌ಪೋರ್ಟ್ ಆಳತೆಯ ಭಾವಚಿತ್ರ, ಆಧಾರ್ ಅಥವಾ ರೇಷನ್ ಕಾರ್ಡ್. ವಿಳಾಸ ಮತ್ತು ಜನ್ಮದಿನಾಂಕದ ಪುರಾವೆಗೆ ಸಂಬಂಧಿಸಿದ ದಾಖಲೆಗಳು ಬೇಕು.

ಮತದಾರರಾಗಿ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಭಾರತದ ಚುನಾವಣಾ ಆಯೋಗದ voters.eci.gov.in ಜಾಲತಾಣಕ್ಕೆ ಭೇಟಿ ನೀಡಿ ಅದರಲ್ಲಿ ಖಾತೆಯನ್ನು ರಚಿಸಿ. ಅಲ್ಲಿ ಬೇರೆ ಬೇರೆ ರೀತಿಯ ಫಾರಂಗಳು ಸಿಗುತ್ತವೆ. ವೆಬ್‌ಸೈಟ್’ನ ಮೆನು ಆಯ್ಕೆಯಲ್ಲಿ ರಿಜಿಸ್ಟ್ರೇಷನ್ ಫಾರ್ ಎಲೆಕ್ಟೋರಲ್ ರೋಲ್ ಎನ್ನುವ ಆಯ್ಕೆಯಲ್ಲಿ ಈ ಕೆಳಕಂಡ ಫಾರಂಗಳು ಸಿಗುತ್ತವೆ:

  • ಫಾರಂ 6 : ಹೊಸ ಮತದಾರರಾಗಿ ನೋಂದಾಯಿಸಲು
  • ಫಾರಂ 6ಎ : ಭಾರತದ ಪೌರತ್ವ ಹೊಂದಿರುವ ಅನಿವಾಸಿ ಭಾರತೀಯರು ಮತದಾರರಾಗಿ ನೋಂದಾಯಿಸಿಕೊಳ್ಳಲು
  • ಫಾರಂ 7 : ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು
  • ಫಾರಂ 8 : ವಿಳಾಸ ಬದಲಿಸಲು

ಹೊಸ ಮತದಾರರ ಚೀಟಿ ಪಡೆಯಲು

ಹೊಸದಾಗಿ ಮತದಾರರ ಗುರುತಿನ ಚೀಟಿ ಮಾಡಲು, ಫಾರಂ 6 ಅನ್ನು ಆಯ್ಕೆ ಮಾಡಿ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು ಅಥವಾ ಆ ಫಾರಂ ಅನ್ನು ಡೌನ್‌ಲೋಡ್ ಮಾಡಿ ಆಫ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಅಲ್ಲಿ ‘ಫಿಲ್ ಫಾರಂ 6’ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಫಾರಂ ಭರ್ತಿ ಮಾಡಲು ಕೇಳುತ್ತದೆ.

ಮೊದಲು ಅಲ್ಲಿ ಚುನಾವಣಾ ಕ್ಷೇತ್ರವನ್ನು ಆಯ್ಕೆ ಮಾಡಿ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಹೆಸರು, ಉಪನಾದು, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (ಗರಿಷ್ಠ 2 ಎಂ.ಬಿ.), ಪೋಷಕರ ಮಾಹಿತಿಯನ್ನು ನೀಡಬೇಕು.

ಮುಂದೆ ಸಂಪರ್ಕ ಮಾಹಿತಿ (ಮೊಬೈಲ್ ಸಂಖ್ಯೆ ಮತ್ತು ಈ ಮೇಲ್ ಐಡಿ), ಆಧಾರ್ ಸಂಖ್ಯೆ, ಜನ್ಮ ದಿನಾಂಕ, ವಿಳಾಸ, ಹೆತ್ತವರ ಹೆಸರು ಮತ್ತು ಅವರ ವೋಟರ್ ಐಡಿ ಸಂಖ್ಯೆ ಈ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ವಿಳಾಸವನ್ನು ಖಚಿತಪಡಿಸಲು, ಯಾವುದಾದರೂ ದಾಖಲಾತಿಯನ್ನು ಆಧಾರವಾಗಿ ಸಲ್ಲಿಸಬೇಕು.

ಎಲ್ಲಾ ಆದ ಮೇಲೆ ನಮ್ಮ ಮೊಬೈಲ್ ಸಂಖ್ಯೆಗೆ ಒಂದು ಒ.ಟಿ.ಪಿ. ಬರುತ್ತದೆ. ಈ ಪ್ರಕ್ರಿಯೆ ಆದ ಬಳಿಕ ಅರ್ಜಿ ಸಲ್ಲಿಕೆಯಾಗುತ್ತದೆ. ನಂತರ ಅಲ್ಲಿ ನಾವು ನಮೂದಿಸಿರುವ ವಿಳಾಸಕ್ಕೆ ಮತದಾರರ ಗುರುತಿನ ಚೀಟಿ ತಲುಪುತ್ತದೆ.

ಆಫ್‌ಲೈನ್ ಅರ್ಜಿಗೂ ಅವಕಾಶ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಕಷ್ಟವಾದರೆ ಹತ್ತಿರದ ಸೈಬರ್ ಕೇಂದ್ರಕ್ಕೆ ತೆರಳಿ ಅಲ್ಲಿಂದ ಫಾರಂ 6 ಅನ್ನು ಪ್ರಿಂಟ್ ಮಾಡಿಸಿ ತಂದು ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಆಧಾರ್, ಶಾಲೆಯ ಸರ್ಟಿಫಿಕೇಟ್ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಪಂಚಾಯತ್‌ಗೆ ನೀಡಿದರೆ ಅವರು ಕೂಡಾ ಮಾಡಿಸಿ ಕೊಡುತ್ತಾರೆ.

ಇದೇ ರೀತಿಯಲ್ಲಿ ಹೆಸರು, ವಿಳಾಸ ಇತ್ಯಾದಿಗಳನ್ನು ಬದಲಿಸಲು ಫಾರಂ 8 ಅನ್ನು ಭರ್ತಿ ಮಾಡಿ. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ಲಗತ್ತಿಸಿ ಚುನಾವಣಾ ಆಯೋಗಕ್ಕೆ ಸಲ್ಲಿಸಬಹುದಾಗಿದೆ.

ಇವುಗಳನ್ನೂ ಓದಿ:

ರೈತರಿಗೆ ಕೋಟಿ ಕೋಟಿ ಆದಾಯದ ಡಾರ್ಪರ್ ಕುರಿ ಸಾಕಣೆ | ವಿದೇಶಿ ತಳಿಯ ಸಂಪೂರ್ಣ ಮಾಹಿತಿ ಇಲ್ಲಿದೆ...

ಮಳೆಬೆಳೆ ಸಮೃದ್ಧಿ ಅನ್ನದಾತರು ಸತೃಪ್ತ | ರೈತರ ಬದುಕು ವಿಶ್ಲೇಷಿಸುವ ಮೈಲಾರ ಕಾರ್ಣಿಕಗಳು 

WhatsApp - 1 WhatsApp - 2 WhatsApp - 3 Join Telegram