Micro Finance-ಫೈನಾನ್ಸ್ ಕಿರುಕುಳಕ್ಕೆ ಸರ್ಕಾರದ ಅಂಕುಶ | ಸುಗ್ರೀವಾಜ್ಞೆ ಜಾರಿಗೆ 3 ಕಾಯ್ದೆ ತಿದ್ದುಪಡಿ

ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿವಿಧ ಮೂರು ವಿಧೇಯಕಗಳು ಅನುಷ್ಠಾನಗೊಂಡರೆ ಮೈಕ್ರೋ ಫೈನಾನ್ಸ್ ಹಾಗೂ ಲೇವಾದೇವಿದಾರರ ಕಿರುಕುಳಕ್ಕೆ ಸಂಪೂರ್ಣ ಅಂಕುಶ ಬೀಳಲಿದೆ...

Feb 22, 2025 - 16:22
Feb 22, 2025 - 16:25
WhatsApp - 1 WhatsApp - 2 WhatsApp - 3 Join Telegram

Micro Finance-ಫೈನಾನ್ಸ್ ಕಿರುಕುಳಕ್ಕೆ ಸರ್ಕಾರದ ಅಂಕುಶ | ಸುಗ್ರೀವಾಜ್ಞೆ ಜಾರಿಗೆ 3 ಕಾಯ್ದೆ ತಿದ್ದುಪಡಿ

Kannada Mitra - News Desk.

ರಾಜ್ಯದಲ್ಲಿ ಸಾಲಗಾರರಿಗೆ ಕಿರುಕುಳ ನೀಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆಗೆ-2025’ ಪೂರಕವಾಗಿ ಸಹಕಾರ ಇಲಾಖೆಯ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರಲು ಸಚಿವ ಸಂಪುಟ ತೀರ್ಮಾನಿಸಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಸುಗ್ರೀವಾಜ್ಞೆ ಕಾಯಿದೆಯಲ್ಲಿ ಪ್ರಸ್ತಾಪಿಸಿರುವ ಕಠಿಣ ಕಾನೂನುಗಳನ್ನು ಸಂಬAಧಪಟ್ಟ ಕಾಯ್ದೆಗಳಲ್ಲಿ ಅಳವಡಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದೆ. ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿವಿಧ ಮೂರು ವಿಧೇಯಕಗಳು ಅನುಷ್ಠಾನಗೊಂಡರೆ ಮೈಕ್ರೋ ಫೈನಾನ್ಸ್ ಹಾಗೂ ಲೇವಾದೇವಿದಾರರ ಕಿರುಕುಳಕ್ಕೆ ಸಂಪೂರ್ಣ ಅಂಕುಶ ಬೀಳಲಿದೆ. 

ಯಾವ್ಯಾವ ವಿಧೇಯಕಗಳು ಜಾರಿಯಾಲಿವೆ?

  1. ಕರ್ನಾಟಕ ಅಧಿಕ ಬಡ್ಡಿ ನಿಷೇಧ ತಿದ್ದುಪಡಿ ವಿಧೇಯಕ -2025 
  2. ಕರ್ನಾಟಕ ಗಿರಿವಿದಾರರ ತಿದ್ದುಪಡಿ ವಿಧೇಯಕ -2025
  3. ಕರ್ನಾಟಕ ಲೇವಾದೇವಿದಾರರ ತಿದ್ದುಪಡಿ ವಿಧೇಯಕ -2025

ಈ ಮೂರು ತಿದ್ದುಪಡಿ ವಿಧೇಯಕಗಳ ಜಾರಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಬಜೆಟ್ ಅಧಿವೇಶನದಲ್ಲೇ ಈ ಮೂರು ತಿದ್ದುಪಡಿ ವಿಧೇಯಕ ಮಂಡಿಸಿ ಅಂಗೀಕಾರ ಪಡೆಯಲು ನಿರ್ಧರಿಸಲಾಗಿದೆ.

1. ಅಧಿಕ ಬಡ್ಡಿ ವಸೂಲಿಗೆ 10 ವರ್ಷ ಶಿಕ್ಷೆ

‘ಅಧಿಕ ಬಡ್ಡಿ ನಿಷೇಧ ಅಧಿನಿಯಮ-2004’ಕ್ಕೆ ತಿದ್ದುಪಡಿ ಮಾಡುವ ಕುರಿತು ‘ಕರ್ನಾಟಕ ಅಧಿಕ ಬಡ್ಡಿ ತಿದ್ದುಪಡಿ ವಿಧೇಯಕ -2025’ ಪ್ರಸ್ತಾಪಿಸಿದ್ದು, ಇದರಲ್ಲಿ ಅಧಿಕ ಬಡ್ಡಿ ವಿಧಿಸುವ ಅಪರಾಧಿಗಳಿಗೆ 10 ವರ್ಷ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸುವ ಮೂಲಕ ಬಡ್ಡಿ, ಚಕ್ರ ತಿಚಿ ದಂಡದ ಬಡ್ಡಿ ಸಂಗ್ರಹಿಸುವವರಿಗೆ ಕಡಿವಾಣ ಹಾಕಲು ತೀರ್ಮಾನಿಸಲಾಗಿದೆ.

ಸಹಕಾರ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ನೋಂದಾಯಿತ ಲೇವಾದೇವಿದಾರರು, ಸಹಕಾರಿ ಸೊಸೈಟಿಗಳು ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ಸಹಕಾರ ಸಂಘಗಳ ನಿಬಂಧಕರು ಕಾಯ್ದೆಯಡಿ 10 ವರ್ಷ ಶಿಕ್ಷೆ ಮತ್ತು 5 ಲಕ್ಷ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಈಗ ಇದ್ದ 1 ವರ್ಷ ಜೈಲು ಶಿಕ್ಷೆ ಬದಲಿಗೆ 10 ವರ್ಷ ಶಿಕ್ಷೆಯಿಂದ ಅಧಿಕ ಬಡ್ಡಿ ವಸೂಲಿ ತಡೆಯಬಹುದು ಎಂಬ ಕಾರಣಕ್ಕೆ ಈ ತೀರ್ಮಾನ ಮಾಡಲಾಗಿದೆ ಎನ್ನಲಾಗುತ್ತಿದೆ. 

2. ಗಿರವಿ ಉಲ್ಲಂಘನೆಗೆ ಕಠಿಣ ಶಿಕ್ಷೆ

ಇನ್ನು ‘ಕರ್ನಾಟಕ ಗಿರಿವಿದಾರರ ಅಧಿನಿಯಮ -1961’ಕ್ಕೆ ತಿದ್ದುಪಡಿ ಮಾಡುವ ಕುರಿತು ಪ್ರಸ್ತಾಪಿತ ‘ಕರ್ನಾಟಕ ಗಿರಿವಿದಾರರ ತಿದ್ದುಪಡಿ ವಿಧೇಯಕ -2025’ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬಡವರು, ದುರ್ಬಲರು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಕುರಿತಂತೆ ಕರ್ನಾಟಕದ ಗಿರವಿದಾರರ ಅಧಿನಿಯಮಕ್ಕೆ ತಿದ್ದುಪಡಿ ಮಾಡಿದ್ದು, ನಿಯಮ ಬಾಹಿರವಾಗಿ ಅಡಮಾನಗಳನ್ನು ಪಡೆಯಬಾರದು. ಸಾಲ ನೀಡುವಾಗ ಮುಂಗಡ ಬಡ್ಡಿ ಪಡೆಯಬಾರದು. ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಬಡ್ಡಿ ವಸೂಲಿ ಅಥವಾ ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಕಿರಕುಳ, ಒತ್ತಡ ತಂತ್ರ, ಹಿಂಸೆ ನೀಡುವ ಮೂಲಕ ವಸೂಲಾತಿಗೆ ಮುಂದಾದ ಕ್ರಮಕ್ಕೆ ಕಠಿಣ ಶಿಕ್ಷೆ ಪ್ರಸ್ತಾಪಿಸಲಾಗಿದೆ ಎನ್ನಲಾಗಿದೆ.

3. ಲೇವಾದೇವಿದಾರರ ಅಧಿನಿಯಮಕ್ಕೆ ತಿದ್ದುಪಡಿ

ಅದೇ ರೀತಿ ‘ಕರ್ನಾಟಕ ಲೇವಾದೇವಿದಾರರ ಅಧಿನಿಯಮ -1961’ಕ್ಕೆ ತಿದ್ದುಪಡಿ ಮಾಡುವ ಕುರಿತು ‘ಕರ್ನಾಟಕ ಲೇವಾದೇವಿದಾರರ ತಿದ್ದುಪಡಿ ವಿಧೇಯಕ 2025’ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಅನುಮತಿ ಪಡೆಯದೇ ಲೇವಾದೇವಿ ವ್ಯವಹಾರ ನಡೆಸುವಂತಿಲ್ಲ. ಈ ಬಗ್ಗೆ ನಿಯಮಗಳನ್ನು ಉಲ್ಲಂಘನೆ ಮಾಡದಿರಲು ಹಾಲಿ ವಿಧೇಯಕ್ಕೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.

WhatsApp - 1 WhatsApp - 2 WhatsApp - 3 Join Telegram