Heat wave - ರಾಜ್ಯದಲ್ಲಿ ಬೇಸಿಗೆಗೆ ಮೊದಲೇ ಎಲ್ಲೆಡೆ ರಣಬಿಸಿಲು | ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿ.ಸೆ ದಾಟಿದೆ. ಬೇಸಿಗೆ ಆರಂಭಕ್ಕೆ ಬೆಂಕಿ ಬಿಸಿಲು ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ...

Feb 18, 2025 - 17:29
WhatsApp - 1 WhatsApp - 2 WhatsApp - 3 Join Telegram

Heat wave - ರಾಜ್ಯದಲ್ಲಿ ಬೇಸಿಗೆಗೆ ಮೊದಲೇ ಎಲ್ಲೆಡೆ ರಣಬಿಸಿಲು | ಹವಾಮಾನ ಇಲಾಖೆ ಮುನ್ನೆಚ್ಚರಿಕೆ

Kannada Mitra - News Desk.

ಬೇಸಿಗೆ ಆರಂಭಕ್ಕೂ ಮುನ್ನವೇ ರಣಬಿಸಿಲು ಸುರಿಯತೊಡಗಿದೆ. ಸಾಮಾನ್ಯವಾಗಿ ಮಾರ್ಚ್’ನಿಂದ ಬೇಸಿಗೆ ಆರಂಭವಾಗುತ್ತದೆ. ಮಹಾ ಶಿವರಾತ್ರಿಯ ನಂತರ ರಣರಣ ಬಿಸಿಲಿರುವುದು ಸಹಜ. ಆದರೆ, ಈ ವರ್ಷ ಫೆಬ್ರವರಿ ಆರಂಭದಲ್ಲಿಯೇ ರಾಜ್ಯದಲ್ಲಿ ಬಿಸಿಲಿನ ಝಳ ಮೈ ಸುಡತೊಡಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 32 ಡಿ.ಸೆ ದಾಟಿದೆ. ಬೇಸಿಗೆ ಆರಂಭಕ್ಕೆ ಬೆಂಕಿ ಬಿಸಿಲು ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ.

ವಾಡಿಕೆಗಿಂತ ಹೆಚ್ಚು ತಾಪಮಾನ

ದಕ್ಷಿಣ ಒಳನಾಡಿನ ಒಂದೆರಡು ಕಡೆ ಕನಿಷ್ಠ ಉಷ್ಣಾಂಶ ವಾಡಿಕೆ ಪ್ರಮಾಣಕ್ಕಿಂತ 2 ರಿಂದ 4 ಡಿ.ಸೆ. ವರೆಗೆ ಕಡಿಮೆ ದಾಖಲಾಗಿದೆ. ದಕ್ಷಿಣ ಒಳನಾಡು, ಕರಾವಳಿಯ ಕೆಲ ಭಾಗದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ 1 ರಿಂದ 3 ಡಿ.ಸೆ. ವರೆಗೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಲಬುರಗಿಯಲ್ಲಿ 37.6 ಡಿ.ಸೆ. ಅತಿಹೆಚ್ಚಿನ ಗರಿಷ್ಠ ಉಷ್ಣಾಂಶ ದಾಖಲಾದರೆ, ಚಾಮರಾಜನಗರದಲ್ಲಿ 13.4 ಡಿ.ಸೆ. ಅತಿ ಕಡಿಮೆ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಫೆಬ್ರವರಿ 17ರಂದು ರಾಜ್ಯದ ವಿವಿಧ ಭಾಗಗಗಳಲ್ಲಿ ದಾಖಲಾದ ತಾಪಮಾನ ಈ ಕೆಳಗಿನಂತಿದೆ:

  • ಬೆಂಗಳೂರು 32.8 ಡಿ.ಸೆ.
  • ಬಾಗಲಕೋಟೆ 34.3 ಡಿ.ಸೆ.
  • ಗದಗ 35.1 ಡಿ.ಸೆ.
  • ದಾವಣಗೆರೆ 36.2 ಡಿ.ಸೆ.
  • ಕಲಬುರಗಿಯಲ್ಲಿ 37.6 ಡಿ.ಸೆ.

ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ

ತಾಪಮಾನ ಹೆಚ್ಚಳದಿಂದ ಜನರಲ್ಲಿ ಚರ್ಮರೋಗ, ಮೈಗ್ರೇನ್, ಅತಿಸಾರ, ವಾಂತಿ-ಭೇದಿ, ಡ್ರೈ ಐ, ತಲೆಸುತ್ತು, ಅಪಸ್ಮಾರದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಶಿಶುಗಳು, ಮಕ್ಕಳು, ವಯೋವೃದ್ಧರು, ಗರ್ಭಿಣಿ ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. 

ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಿರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಲು ಶುರು ಮಾಡುತ್ತದೆ. ಈ ಕಾರಣಕ್ಕಾಗಿ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿ ಇರುವುದು ಒಳ್ಳೆಯದು ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಇವುಗಳನ್ನೂ ಓದಿ:

WhatsApp - 1 WhatsApp - 2 WhatsApp - 3 Join Telegram