Borewell Drilling Ban-ಇನ್ಮುಂದೆ ಹೊಸ ಬೋರ್‌ವೆಲ್ ಕೊರೆಯುವಂತಿಲ್ಲ | ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ರಾಜ್ಯಾದ್ಯಂತ ರಣ ಬಿಸಿಲು ಜನರನ್ನು ಹೈರಾಣು ಮಾಡುತ್ತಿದೆ. ಸದ್ಯಕ್ಕೆ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಸಮಾಧಾನಕರವಾಗಿದ್ದು; ಇದೇ ರೀತಿ ಬಿಸಿಲಿನ ತಾಪಮಾನ ಮುಂದುವರೆದರೆ ನೀರಿನ ಹಾಹಾಕಾರ ಶುರುವಾಗಲಿದೆ. ಏತನ್ಮಧ್ಯೆ ಅಂತರ್ಜಲ ದಿನದಿಂದ ದಿನಕ್ಕೆ ಪಾತಾಳ ಕಾಣುತ್ತಿದ್ದು; ಬೋರ್‌ವೆಲ್ ಕೊರೆಯುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ...
WhatsApp - 1 | WhatsApp - 2 | WhatsApp - 3 | Join Telegram |

Kannada Mitra - News Desk.
ರಾಜ್ಯಾದ್ಯಂತ ರಣ ಬಿಸಿಲು ಜನರನ್ನು ಹೈರಾಣು ಮಾಡುತ್ತಿದೆ. ಸದ್ಯಕ್ಕೆ ರಾಜ್ಯದ ಜಲಾಶಯಗಳ ನೀರಿನ ಮಟ್ಟ ಸಮಾಧಾನಕರವಾಗಿದ್ದು; ಇದೇ ರೀತಿ ಬಿಸಿಲಿನ ತಾಪಮಾನ ಮುಂದುವರೆದರೆ ನೀರಿನ ಹಾಹಾಕಾರ ಶುರುವಾಗಲಿದೆ. ಏತನ್ಮಧ್ಯೆ ಅಂತರ್ಜಲ ದಿನದಿಂದ ದಿನಕ್ಕೆ ಪಾತಾಳ ಕಾಣುತ್ತಿದ್ದು; ಬೋರ್‌ವೆಲ್ ಕೊರೆಯುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ಮುಂದೆ ವರ್ಷಪೂರ್ತಿ ಕೊಳವೆ ಬಾವಿ ಕೊರೆಯುವಂತಿಲ್ಲ. ನಿಯಮ ಉಲ್ಲಂಘಿಸಿ ಬೋರ್‌ವೆಲ್ ಕೊರೆದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಬೆಂಗಳೂರು ಜಲಮಂಡಳಿ ನೀಡಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಅಂತರ್ಜಲ ಮಟ್ಟ ತೀವ್ರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜಲಮಂಡಳಿ ಈ ನಿರ್ಧಾರ ಕೈಗೊಂಡಿದೆ.
ರೆಡ್ ಅಲರ್ಟ್ ಎಚ್ಚರಿಕೆ
ಈ ಹಿಂದೆ ಬೇಸಿಗೆಯ ಮೂರು ತಿಂಗಳಲ್ಲಿ ಮಾತ್ರ ಕೊಳವೆಬಾವಿ ಕೊರೆಯುವುದನ್ನು ನಿಷೇಧಿಸುತ್ತಿದ್ದ ಜಲಮಂಡಳಿ ಈ ಬಾರಿ ಮಳೆಗಾಲ ಸೇರಿದಂತೆ ಎಲ್ಲ ಕಾಲದಲ್ಲೂ ವರ್ಷಪೂರ್ತಿ ಕೊಳವೆಬಾವಿ ಕೊರೆಯದಂತೆ ನಿಷೇಧ ಹೇರಿದೆ. ಜಲಮಂಡಳಿ ನಿಷೇಧ ಉಲ್ಲಂಘಿಸಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಇತ್ತೀಚೆಗೆ ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿಗಳು ಅಂತರ್ಜಲ ಮಟ್ಟ ಪರೀಕ್ಷೆ ನಡೆಸಿ ನಗರದ 80 ವಾರ್ಡ್'ಗಳಲ್ಲಿ ಅಂತರ್ಜಲ ತೀವ್ರವಾಗಿ ಕುಸಿದಿರುವ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿ ರೆಡ್ ಅಲರ್ಟ್ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಲಮಂಡಳಿ ಕೊಳವೆಬಾವಿ ಕೊರೆಯುವುದನ್ನು ನಿಷೇಧಿಸಿದೆ.
ನಿರಾಕ್ಷೇಪಣಾ ಪ್ರಮಾಣಪತ್ರ ವಿತರಣೆ ಬಂದ್
ಈ ಹಿಂದೆ ಕೊಳವೆಬಾವಿ ಕೊರೆಯಲು ನಾಗರಿಕರು ಇಡೀ ವರ್ಷ ಅರ್ಜಿಗಳನ್ನು ಸಲ್ಲಿಸುತ್ತಿದ್ದರು. ಜಲಮಂಡಳಿಯು ಬೋರ್‌ವೆಲ್ ಕೊರೆಯಲು ಅನುಮತಿ ನೀಡಿ ನಿರಾಕ್ಷೇಪಣಾ ಪ್ರಮಾಣಪತ್ರ ನೀಡುತ್ತಿತ್ತು. ಈ ವರ್ಷದಿಂದ ಪ್ರಮಾಣಪತ್ರವನ್ನು ನೀಡುವುದನ್ನು ಜಲಮಂಡಳಿ ಬಂದ್ ಮಾಡಿದೆ. ಫೆಬ್ರವರಿ ಕೊನೆ ವಾರದಿಂದಲೇ ಸಾರ್ವಜನಿಕರಿಂದ ನಿರಾಕ್ಷೇಪಣಾ ಪ್ರಮಾಣಪತ್ರಕ್ಕಾಗಿ ಅರ್ಜಿ ಪಡೆಯುವುದನ್ನು ನಿಲ್ಲಿಸಿದೆ.
ಕಳೆದ ವರ್ಷ ಜಲಮಂಡಳಿ ನಗರದಲ್ಲಿ 1.2 ಲಕ್ಷ ಕೊಳವೆಬಾವಿ ಕೊರೆಯಲು ಅನುಮತಿ ನೀಡಿತ್ತು. ಪ್ರತಿ ತಿಂಗಳು 200 ರಿಂದ 300 ಅರ್ಜಿಗಳು ಕೊಳವೆಬಾವಿಗೆ ಅನುಮತಿ ನೀಡಿ ಎಂದು ಸಲ್ಲಿಕೆಯಾಗಿತ್ತು. ಬೇಸಿಗೆ ವೇಳೆಯಲ್ಲಿ ಕಡಿಮೆ ಎಂದರೂ ಸಾವಿರ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಕಳೆದ ವರ್ಷ ಬೇಸಿಗೆಯಲ್ಲಿ 2,835 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 1,273 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿತ್ತು. ಈ ವರ್ಷ ಇಲ್ಲಿವರೆಗೆ ಜಲಮಂಡಳಿಗೆ 600 ಅರ್ಜಿಗಳು ಸಲ್ಲಿಕೆಯಾಗಿವೆ.
ತುರ್ತು ಇದ್ದರೆ ಮಾತ್ರ ಅನುಮತಿ
ಅಂದ ಹಾಗೇ, ಕಳೆದ 2024ರಲ್ಲಿ ಜಲಮಂಡಳಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಿತ್ತು. ಹೀಗಿದ್ದರೂ ಕಾವೇರಿ 5ನೇ ಹಂತದ ಯೋಜನೆ ಸಂಪೂರ್ಣವಾಗಿ ಜಾರಿಗೊಳ್ಳದ ಹಿನ್ನೆಲೆಯಲ್ಲಿ ಹೊರ ವಲಯಗಳಲ್ಲಿ ಕೊಳವೆಬಾವಿ ಕೊರೆಯಲು ಅನುಮತಿ ನೀಡಲಾಗುತ್ತಿತ್ತು. ಆದರೆ ಈ ವರ್ಷ 5 ಹಂತ ಸಂಪೂರ್ಣವಾಗಿ ಜಾರಿಗೊಂಡಿದ್ದು ಇಡೀ ನಗರಕ್ಕೆ ಪೂರೈಕೆ ಮಾಡುವಷ್ಟು ಕಾವೇರಿ ನೀರು ಲಭ್ಯ ಇರುವುದರಿಂದ ಕೊಳವೆಬಾವಿಗೆ ಅನುಮತಿ ನೀಡುತ್ತಿಲ್ಲ.
ಪಾಲಿಕೆ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ತುರ್ತು ಸಂದರ್ಭ ಇದ್ದಲ್ಲಿ ಸಂಬAಧಿಸಿದ ಸ್ಥಳೀಯ ಪ್ರಾಧಿಕಾರದ ಮೂಲಕ ಕೊಳವೆಬಾವಿ ಕೊರೆಯಲು ಅನುಮತಿಗೆ ಅರ್ಜಿ ಸಲ್ಲಿಸಿದರೆ ಜಲಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಿ ಕೊಳವೆ ಬಾವಿ ಕೊರೆಯಲು ಅನುಮತಿ ದೊರೆಯಲಿದೆ ಎನ್ನುತ್ತಾರೆ ಜಲಮಂಡಳಿ ಅಧ್ಯಕ್ಷರು.
WhatsApp - 1 | WhatsApp - 2 | WhatsApp - 3 | Join Telegram |