Cow Milk Goat Milk - ಹಸು ಹಾಲು-ಮೇಕೆ ಹಾಲು:  ಇದರಲ್ಲಿ ಯಾವುದು ಆರೋಗ್ಯಕಾರಿ? ವೈದ್ಯಲೋಕ ಏನು ಹೇಳುತ್ತದೆ?

ಹಸುವಿನ ಹಾಲು ಅಮೃತ ಎಂಬ ನಂಬಿಕೆ ಇದೆ. ಆದರೆ ಆಯುರ್ವೇದ ಗ್ರಂಥಗಳು ಹಸುವಿನ ಹಾಲು ಅಮೃತ, ಆದರೆ ಕರುವಿಗೆ ಹೊರತು ಮನುಷ್ಯರಿಗಲ್ಲ ಎನ್ನುತ್ತವೆ. ವೈದ್ಯಲೋಕದ ವಿಜ್ಞಾನ ಹಸುವಿನ ಹಾಲಿಗಿಂತ ಆಡಿನ ಹಾಲು ಬಲು ಶ್ರೇಷ್ಠವಾದುದು ಎಂದು ಹೇಳಿವೆ...

Feb 19, 2025 - 18:28
WhatsApp - 1 WhatsApp - 2 WhatsApp - 3 Join Telegram

Cow Milk Goat Milk - ಹಸು ಹಾಲು-ಮೇಕೆ ಹಾಲು:  ಇದರಲ್ಲಿ ಯಾವುದು ಆರೋಗ್ಯಕಾರಿ? ವೈದ್ಯಲೋಕ ಏನು ಹೇಳುತ್ತದೆ?

Kannada Mitra - News Desk.

ಹಸುವಿನ ಹಾಲು (Cow Milk) ಅಮೃತ ಎಂಬ ನಂಬಿಕೆ ಇದೆ. ಆದರೆ ಆಯುರ್ವೇದ ಗ್ರಂಥಗಳು ಹಸುವಿನ ಹಾಲು ಅಮೃತ, ಆದರೆ ಕರುವಿಗೆ ಹೊರತು ಮನುಷ್ಯರಿಗಲ್ಲ ಎನ್ನುತ್ತವೆ. ವೈದ್ಯಲೋಕದ ವಿಜ್ಞಾನ ಹಸುವಿನ ಹಾಲಿಗಿಂತ ಆಡಿನ ಹಾಲು (Goat Milk) ಬಲು ಶ್ರೇಷ್ಠವಾದುದು ಎಂದು ಹೇಳಿವೆ. ಮಹಾತ್ಮಗಾಂಧಿ ಕೂಡ ಅದನ್ನೇ ಬಳಸುತ್ತಿದ್ದರು.

ಹಸುವಿನ ಹಾಲು ಅನೇಕರ ಪಾಲಿಗೆ ಒಗ್ಗದ ಆಹಾರವಾಗುತ್ತಿದೆ. ಕಾರಣ ಅದರಲ್ಲಿರುವ ಸಕ್ಕರೆಯ ಲ್ಯಾಕ್ಟೋಸ್ ಅಂಶ ಜೀರ್ಣವಾಗುವುದಿಲ್ಲ. ಆದರೆ ಅಡಿನ ಹಾಲಿನ ಲ್ಯಾಕ್ಟೋಸ್ ಬಹು ಸುಲಭವಾಗಿ ಜೀರ್ಣವಾಗುತ್ತದೆ. ಭಾರತದ ಪುರಾತನ ಶಿಶುರಕ್ಷಣಾ ಗ್ರಂಥ ಕಾಶಪ್ಯ ಸಂಹಿತೆ ಪ್ರಕಾರ ಮಗುವಿಗೆ ತಾಯಿಯ ಹಾಲು ದೊರಕದಿದ್ದರೆ ದಾಯಿಯ ಹಾಲು, ಅದೂ ಲಭಿಸದಿದ್ದರೆ ಆಡಿನ ಹಾಲನ್ನು ಸೂಚಿಸಲಾಗಿದೆ.

ಆಡಿನ ಹಾಲು ಪಥ್ಯತಮ 

ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಗ್ರಾಮಸ್ವರಾಜ್ಯ ಕಲ್ಪನೆಯಲ್ಲಿ ಆಡಿನ ಹಾಲು ಬಹು ಪ್ರಮುಖ ಪಾತ್ರ ವಹಿಸಿದೆ. ಯೇಸುಕ್ರಿಸ್ತ ಕೂಡ ಆಡಿನೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದನೆಂದು ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್ ಹೇಳುತ್ತದೆ. ಹೊಟ್ಟೆಯ ತೊಂದರೆ, ಕೆಮ್ಮು, ದಮ್ಮು, ಕ್ಷಯ, ಮತ್ತು ಕ್ಯಾನ್ಸರ್‌ನಂತಹ ವ್ಯಾಧಿಗಳಿಗೆ ಆಡಿನ ಹಾಲು ಪಥ್ಯತಮ ಎನ್ನುವರು.

ಹಾಲುಣಿಸುವ ಮಾತೆಯರಿಗೆ ಹಾಲು ಹೆಚ್ಚಿಸಲು ಆಡಿನ ಹಾಲಿನ ಸೇವನೆ ಅತಿ ಉತ್ತಮ. ಭೇದಿ, ರಕ್ತಸ್ರಾವ, ದುರ್ಬಲ ಅಗ್ನಿಯವರಿಗೆ, ಕೃಶರಿಗೆ ಆಡಿನ ಹಾಲು ಯೋಗ್ಯ. ಅತಿಮೂತ್ರ ಸಂಗ್ರಾಹಿ ಮದ್ದು ಸೋಮನಾಥ ರಸ, ಮೆದುಳಿನ ಪ್ರಕ್ರಿಯೆ ಹೆಚ್ಚಿಸಲು ಬಳಸುವ ಸಾರಸ್ವತಘೃತ, ನೋವು ಪರಿಹಾರಿ ಪಿಂಡತೈಲ, ಮುಖಕಾಂತಿ ವರ್ಧಕ, ಕುಂಕುಮಾದಿ ತೈಲಗಳಲ್ಲಿ ಆಡಿನ ಹಾಲು ಅತ್ಯಗತ್ಯ.

ಪೋಷಕಾಂಶಗಳ ಆಗರ

ಪ್ರತಿ 100 ಗ್ರಾಂ ಆಡಿನ ಹಾಲಿನಲ್ಲಿರುವ ತಲಾ ಗಾಂ ಲೆಕ್ಕದಲ್ಲಿ ಇರುವ ಪೋಷಕಾಂಶಗಳನ್ನು ಹೀಗೆ ಪಟ್ಟಿ ಮಾಡಬಹುದು: ನೀರಂಶ-ಶೇ.84, ಸಸಾರಜನಕ-ಶೇ.3.1, ಕೊಬ್ಬು-ಶೇ.3.9, ಶರ್ಕರ ಪಿಷ್ಟ-ಶೇ.4.8, ಸಕ್ಕರೆ ಅಥವಾ ಲ್ಯಾಕ್ಟೋಸ್-ಶೇ.4.4, ಕ್ಯಾಲ್ಷಿಯಂ-ಶೇ.100 ಹಾಗೂ ಕಿಲೋ ಕ್ಯಾಲರಿ-60.

ಆಡಿನ ಹಾಲು ಎಲ್ಲ ವಯಸ್ಸಿನವರಿಗೂ ಆರೋಗ್ಯಕ್ಕೆ ಸಹಕಾರಿ. ಅದರಲ್ಲಿರುವ ಸುಣ್ಣದ ಅಂಶ ಮೂಳೆಗಳಿಗೆ ಸಂಬAಧಿಸಿದ ಅಸ್ಪಿಯೋಪೊರೊಸಿಸ್ ಸಮಸ್ಯೆಯ ವಿರುದ್ಧ ಸೆಣಸಲು ಶಕ್ತವಾಗಿದೆ. ಜೊತೆಗಿರುವ ಕೊಬ್ಬು ದೇಹದ ತೂಕವನ್ನು ನಿಯಂತ್ರಿಸುತ್ತದೆ. ರಕ್ತದ ಒತ್ತಡ ನಿಯಮಿತಗೊಳಿಸಬಲ್ಲ ಪೊಟಾಷಿಯಂ ಸಹ ಇದೆ. ಇದರಿಂದ ತಯಾರಿಸುವ ಮೊಸರು ರಕ್ತದೊತ್ತಡ ನಿಯಂತ್ರಣದಲ್ಲಿಯೂ ಸಮರ್ಥವಾಗಿದೆ. 

ಹಲವು ರೋಗಗಳಿಗೆ ದಿವೌಷಧಿ

ಆಡಿನ ಹಾಲು ಕರುಳಿನಲ್ಲಿ ಆಮ್ಲಿಯತೆ ಉಂಟು ಮಾಡುವುದಿಲ್ಲ. ರಕ್ತಕ್ಕೆ ಬೇಗನೆ ಸೇರುತ್ತದೆ. ವಾಂತಿ, ಉದರಶೂಲೆ, ಅತಿಸಾರ, ಮಲಬದ್ಧತೆ, ಊಟವಾದ ಬಳಿಕೆ ಉಂಟಾಗುವ ಜಠರದ ಸಮಸ್ಯೆಗಳು, ಗ್ಯಾಸ್ಟ್ರಿಕ್‌, ವಾಯುಬಾಧೆ ಮುಂತಾದ ಅನೇಕ ತೊಂದರೆಗಳು ಆಡಿನ ಹಾಲಿನ ನಿತ್ಯ ಬಳಕೆಯಿಂದ ದೂರವಾಗುತ್ತವೆ. ಎಳೆಯ ಮಕ್ಕಳಿಗೆ ಅನಿವಾರ್ಯವಾದಾಗ ಹಸುವಿನ ಹಾಲಿಗಿಂತ ಆಡಿನ ಹಾಲು ಕುಡಿಸುವುದು ಉತ್ತಮ ಎನ್ನಲಾಗಿದೆ. ಅದು ಊಟದಷ್ಟೇ ಪೂರ್ಣ ಆಹಾರ ಎನಿಸುತ್ತದೆ.

ಆಡಿನ ಹಾಲು ಸೇವನೆಯಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಮತ್ತು ಬಿಳಿ ಕಣಗಳನ್ನು ವೃದ್ಧಿಸುತ್ತದೆ. ಉಸಿರಾಟದ ಸಮಸ್ಯೆ ಇರುವವರಿಗೂ ಅದು ಉತ್ತಮ ಪಥ್ಯಾಹಾರ. ಕರುಳಿನಲ್ಲಿರುವ ಆತಂಕಕಾರಿ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಿ ಪ್ರಯೋಜನಕರವಾದ ಸೂಕ್ಷ್ಮಾಣುಗಳನ್ನು ಹೆಚ್ಚಿಸುವ ಕೊಬ್ಬಿನಾಮ್ಲಗಳು ಅದರಿಂದ ಲಭಿಸುತ್ತದೆ.

ದೈನಂದಿನ ಅಗತ್ಯಕ್ಕೆ ಬೇಕಾದಷ್ಟು ಆಯೋಡಿನ್ ಆಡಿನ ಹಾಲಿನಲ್ಲಿರುವುದರಿಂದ ಥೈರಾಯ್ಡ್ ಗ್ರಂಥಿಯನ್ನು ಸುಸ್ಥಿತಿಯಲ್ಲಿಡುತ್ತದೆ. ಬಿ ವರ್ಗದ 5 ಜೀವಸತ್ವಗಳು ಸೇರಿ 8 ಜೀವಸತ್ವಗಳು ಕೂಡಿವೆ. ಡಿ ಜೀವಸತ್ವವೂ ಇದ್ದು, ಅದು ಚರ್ಮದ ಕಾಂತಿ ಹೆಚ್ಚಿಸಲು ನೆರವಾಗುತ್ತದೆ. ಪಿತ್ತಕೋಶದ ಕಲ್ಲು, ಅಪಸ್ಮಾರ, ಫೈಬ್ರೋಸಿಸ್ ಇದನ್ನೆಲ್ಲ ನಿವಾರಿಸಲು ಆಡಿನ ಹಾಲು ಸಮರ್ಥವಾಗಿದೆ. ಹಾರ್ಮೋನುಗಳ ಬೆಳವಣಿಗೆಗೂ ಅದು ಸಹಕಾರಿಯಾಗುತ್ತದೆ. 

ಹಸು ಹಾಲಿಗಿಂತ ಆಡಿನ ಹಾಲು ಪರಿಪೂರ್ಣ

ಮಾರುಕಟ್ಟೆಯಲ್ಲಿ ಸಿಗುವ ಹಸುವಿನ ಪ್ಯಾಕೆಟ್ ಹಾಲಿನಿಂದ ಕೆನೆಯನ್ನು ಬೇರ್ಪಡಿಸಿದ್ದು ಪೋಷಕವಲ್ಲದ ಹಾಲನ್ನು ನಾವು ಬಳಸುತ್ತೇವೆ. ಆಡಿನ ಹಾಲಿನಲ್ಲಿ ಕೊಬ್ಬು ಸೂಕ್ಷ್ಮವಾದ ಗುಳಿಗೆಗಳ ರೂಪದಲ್ಲಿ ಬೆರೆತಿರುವುದರಿಂದ ಆದರಿಂದ ಕೊಬ್ಬನ್ನು ಬೇರ್ಪಡಿಸಲು ಸಾಧ್ಯವಿಲ್ಲ. ರೋಗ ನಿರೋಧಕ ಶಕ್ತಿಯನ್ನು ಅಧಿಕಗೊಳಿಸುವ ಆಡಿನ ಹಾಲು ಕೊಂಚ ಒಗ್ಗದ ವಾಸನೆಯಿದ್ದರೂ ಆಡು ಎಲ್ಲ ಗಿಡಗಳನ್ನು ತಿನ್ನುವ ಕಾರಣ ಅದೊಂದು ವನ ಔಷಧಿ ಎಂಬುದು ದೃಢಪಟ್ಟಿದೆ.

ಹಸು ಹಾಲಿಗಿಂತ ಆಡಿನ ಹಾಲು ಪರಿಪೂರ್ಣ ಎಂಬುದು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ. ಇದು ಹೆಚ್ಚಿನ ಪೊಷಕಾಂಶಗಳನ್ನು ಹೊಂದಿದ್ದು, ಆರೋಗ್ಯ ವರ್ಧಕವಾಗಿದೆ. ಪ್ರತಿದಿನ ಆಡಿನ ಹಾಲನ್ನು ಸೇವಿಸುವುದರಿಂದ ಶರೀರ ಹೆಚ್ಚು ಬಲಯುತವಾಗುತ್ತದೆ. ಇದರಲ್ಲಿ ರೋಗ ಪ್ರತಿರೋಧಕ ಅಂಶಗಳು ಹೇರಳವಾಗಿರುವುದರಿಂದ ಕಾಯಿಲೆಗಳನ್ನು ದೂರು ಮಾಡುತ್ತವೆ.

ಸುಲಭವಾಗಿ ಜೀರ್ಣವಾಗುತ್ತದೆ. ಸ್ವಾಭಾವಿಕವಾಗಿ ಏಕರೂಪ ಸ್ಥಿರತೆ. ಕಡಿಮೆ ಅಲರ್ಜಿ. ಲ್ಯಾಕ್ಟೋಸ್ ಅಸಹಿಷ್ಣುತೆ. ಹೇರಳ ಪೌಷ್ಠಿಕಾಂಶಗಳು ಈ ಹಾಲಿನಿಂದ ದೊರೆಯುತ್ತದೆ. ಹೀಗಾಗಿ ಆಡು ಹಾಲು, ಹಸು ಹಾಲಿಗಿಂತ ಪರಿಪೂರ್ಣ ಎಂಬುದು ಸಾಬೀತಾಗಿದೆ.

| ಮಾಲತೇಶ್ ಎಂ.,

WhatsApp - 1 WhatsApp - 2 WhatsApp - 3 Join Telegram