KHB Sites Allotment - ಸರ್ಕಾರದಿಂದ ಕೆಎಚ್‌ಬಿ ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ | ಫೆಬ್ರವರಿ 28ರೊಳಗೆ ಅರ್ಜಿ ಹಾಕಿ...
ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸಿರುವ ನಿವೇಶನಗಳ ವಿತರಣೆಗೆ ಆಸಕ್ತರಿಂದರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕು, ತಾವರೆಕೆರೆ ಹೋಬಳಿ ಬ್ಯಾಲಾಳು ಬಡಾವಣೆಯಲ್ಲಿ 828 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದ್ದು; ಈ ನಿವೇಶನಗಳ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ...
WhatsApp - 1 | WhatsApp - 2 | WhatsApp - 3 | Join Telegram |

Kannada Mitra - News Desk.
ಕರ್ನಾಟಕ ಗೃಹ ಮಂಡಳಿ (Karnataka Housing Board - KHB) ಅಭಿವೃದ್ಧಿಪಡಿಸಿರುವ ನಿವೇಶನಗಳ ವಿತರಣೆಗೆ ಆಸಕ್ತರಿಂದರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು ದಕ್ಷಿಣ ತಾಲೂಕು, ತಾವರೆಕೆರೆ ಹೋಬಳಿ ಬ್ಯಾಲಾಳು ಬಡಾವಣೆಯಲ್ಲಿ (KHB Byalalu layout) 828 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದ್ದು; ಈ ನಿವೇಶನಗಳ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
2,800ಕ್ಕೂ ಹೆಚ್ಚು ನಿವೇಶನಗಳ ಈ ಯೋಜನೆಯು 07 ವರ್ಷಗಳ ಹಿಂದೆ ಯೋಜನೆ ಆರಂಭವಾಗಿದ್ದು, ಎರಡು ಬಾರಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಅರ್ಜಿಗಳು ಕಡಿಮೆ ಬಂದಿದ್ದವು. ಇತ್ತೀಚೆಗೆ 1,400 ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಉಳಿದ ನಿವೇಶನಗಳ ಹಂಚಿಕೆಗಾಗಿ ಮತ್ತೆ ಅರ್ಜಿ ಕರೆಯಲಾಗಿದೆ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಾಹುಕಾರ್ ಹಾಲೇಶಪ್ಪ ತಿಳಿಸಿದ್ದಾರೆ.
ನಿವೇಶನಗಳ ವಿಂಗಡನೆ
20X30, 30X40, 30X50, 40X60 ಮತ್ತು 50X80 ನಿವೇಶನಗಳಿದ್ದು; ಕಡಿಮೆ ಆದಾಯದ ಗುಂಪಿಗೆ (ಎಲ್‌ಐಜಿ) 197 ನಿವೇಶನ, ಮಧ್ಯಮ ಆದಾಯದ ಗುಂಪು (ಎಂಐಜಿ) 555 ನಿವೇಶನ ಹಾಗೂ ಹೆಚ್ಚು ಆದಾಯದ ಗುಂಪಿಗೆ (ಎಚ್ ಐಜಿ-1) 67 ನಿವೇಶನಗಳು ಲಭ್ಯ ಇವೆ.
ಸಾಮಾನ್ಯ ವರ್ಗಗಳ ಜೊತೆಗೆ ಎಸ್‌ಸಿ, ಎಸ್ಟಿ, ರಕ್ಷಣಾ ಇಲಾಖೆ, ಮಾಜಿ ಸೈನಿಕ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು, ಹಿರಿಯ ನಾಗರಿಕರು, ಅಂಗವಿಕಲರ ಕೋಟಾದಲ್ಲೂ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ.
ನಿವೇಶನಗಳ ಬೆಲೆ ಎಷ್ಟು?
ಸದರಿ ನಿವೇಶನಗಳನ್ನು ಪ್ರತಿ ಚದರಡಿಗೆ 1,750 ರು. ದರ ನಿಗದಿಪಡಿಸಲಾಗಿದ್ದು; ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಇಡಬ್ಲ್ಯುಎಸ್) 09 ನಿವೇಶನ ಲಭ್ಯವಿದ್ದು ಇವರಿಗೆ ಪ್ರತಿ ಚದರಡಿಗೆ 875 ರು. ದರ ನಿಗದಿಪಡಿಸಲಾಗಿದೆ.
ಸದರಿ ಬಡಾವಣೆಗೆ 24 ಮೀಟರ್ ವಿಸ್ತೀರ್ಣದ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು ರಸ್ತೆಯಿಂದ 8 ಕಿ.ಮೀ ಮತ್ತು ಮಾಗಡಿ ಮುಖ್ಯ ರಸ್ತೆಯಿಂದ 6 ಕಿ.ಮೀ ಅಂತರದಲ್ಲಿದೆ. ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಇದೇ ಫೆಬ್ರವರಿ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕಗೃಮಂ, ಬೆಂಗಳೂರು ನಗರ ಜಿಲ್ಲಾ ಯೋಜನಾ ಕಛೇರಿಯನ್ನು ಸಂಪರ್ಕಿಸಬಹುದು. ಮೊ: 9845600099.
ಸಹಾಯಕ ಕಂದಾಯ ಅಧಿಕಾರಿ, ಹಂಚಿಕೆ ಶಾಖೆ, ಕರ್ನಾಟಕ ಗೃಹ ಮಂಡಳಿ, 4ನೇ ಮಹಡಿ, ಕಾವೇರಿ ಭವನ, ಬೆಂಗಳೂರು ಇವರನ್ನು ಖುದ್ದಾಗಿ ಅಥವಾ 9164839817, 080-22273511 ಮೂಲಕ ಸಂಪರ್ಕಿಸಬಹುದು.
WhatsApp - 1 | WhatsApp - 2 | WhatsApp - 3 | Join Telegram |