Aralu Maralu-ನಿಮ್ಮ ಮನೆಯಲ್ಲಿ ವಯಸ್ಸಾದವರಿದ್ದರೆ ಮಿಸ್ ಮಾಡದೇ ಈ ಲೇಖನ ಓದಿ...

ಜೀವನ ಪೂರ್ತಿ ದುಡಿದು ದಣಿದ ಹಿರಿಯ ಜೀವಗಳಿಗೆ ಪ್ರಕೃತಿ ನೀಡುವ ಪ್ರಕೃತಿದತ್ತ ಬಳಿವಳಿ ಅರಳು-ಮರಳು. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಡಿಮೆನ್ಷಿಯಾ’ ಅನ್ನುತ್ತಾರೆ. ಮನುಷ್ಯನಿಗೆ ಸರಿಯಾಗಿ ಅರವತ್ತು ದಾಟಿದ ನಂತರ ಈ ಮಾಯಾವಿ ಮಂಕು ಅಖಾಡಕ್ಕಿಳಿಯುತ್ತದೆ. ನಿಮ್ಮ ಮನೆಯಲ್ಲಿ ಹಿರಿಯ ಜೀವಗಳಿದ್ದರೆ ಖಂಡಿತ ಮಿಸ್ ಮಾಡದೇ ಈ ಲೇಖನ ಓದಿ...

Feb 26, 2025 - 20:19
WhatsApp - 1 WhatsApp - 2 WhatsApp - 3 Join Telegram

Aralu Maralu-ನಿಮ್ಮ ಮನೆಯಲ್ಲಿ ವಯಸ್ಸಾದವರಿದ್ದರೆ ಮಿಸ್ ಮಾಡದೇ ಈ ಲೇಖನ ಓದಿ...

Kannada Mitra - News Desk.

ಅವು ಜೀವನ ಪೂರ್ತಿ ದುಡಿದು ದಣಿದು ಮಂಡಿಯೂರಿ ಕೂತ ಅಸಹಾಯಕ ಜೀವಗಳು. ಕೈ-ಕಾಲು ಗಟ್ಟಿ ಇರುವಷ್ಟು ದಿನ ಸರೀಕರೆದುರು ಸೈ ಅನ್ನಿಸಿಕೊಳ್ಳಲು ಬನದ ಕರಡಿಯಂತೆ ಬಡಿದಾಡಿದವರು. ಸಾವಿರ ಕನಸು ಕಂಡವರು. ಕನಸುಗಳ ಸಾಕಾರಕ್ಕಾಗಿ ಹಲ್ಲು ಕಚ್ಚಿ ಏಗಿದವರು. ಇಂತಹ ಈ ಜೀವಗಳಿಗೆ ಈಗ ಅದ್ಯಾತರದೋ ಮಂಕು. ಸಡನ್ನಾಗಿ ಯಾವುದು ನನೆಪಾಗುತ್ತಿಲ್ಲ.

ಅದು ಬೇರೇನಲ್ಲ ಅರಳು-ಮರಳು (Aralu Maralu). ದಣಿದ ಜೀವಗಳಿಗೆ ಪ್ರಕೃತಿ ನೀಡುವ ಪ್ರಕೃತಿದತ್ತ ಬಳಿವಳಿ. ಅದನ್ನು ವೈದ್ಯಕೀಯ ಭಾಷೆಯಲ್ಲಿ ‘ಡಿಮೆನ್ಷಿಯಾ’ (Dementia disease) ಅನ್ನುತ್ತಾರೆ. ಮನುಷ್ಯನಿಗೆ ಸರಿಯಾಗಿ ಅರವತ್ತು ದಾಟಿದ ನಂತರ ಈ ಮಾಯಾವಿ ಮಂಕು ಅಖಾಡಕ್ಕಿಳಿಯುತ್ತದೆ.

ತನ್ನ ಹೆಸರೇ ಮರೆತು ಹೋಗುವ ಕಾಯಿಲೆ

ನೋಡಲಿಕ್ಕೆ ಕೇಳಲಿಕ್ಕೆ ಅರಳು ಮರಳು ಒಂದು ಸಾಮಾನ್ಯ ಕಾಯಿಲೆಯಂತೆ ಕಾಣಿಸಬಹುದು. ಮರೆವನ್ನೆಲ್ಲಾ ಕಾಯಿಲೆ ಎಂದು ಕರೆಯಲಾಗುತ್ತದಾ? ಎಂಬ ಪ್ರಶ್ನೆ ಏಳಬಹುದು. ಆದರೆ ಒಬ್ಬ ಮನುಷ್ಯ ತಾನ್ಯಾರು, ತನ್ನ ಹೆಸರೇನು ಎನ್ನುವುದನ್ನೇ ಮರೆತು ಕೂರುತ್ತಾನೆಂದರೆ ಅದಕ್ಕಿಂತ ದೊಡ್ಡ ಸಮಸ್ಯೆ ಬೇಕಾ? ಏಕಾಏಕಿ ತಾನು ಯಾರು ಎನ್ನುವುದೇ ಮರೆತು ಹೋಗಿ ಬಿಡುತ್ತದೆ. ಯಾರಾದರೂ ಹೆಸರು ಕೇಳಿದರೆ, ತಮ್ಮ ಹೆಸರು ಹೇಳಲಿಕ್ಕೇ ಹತ್ತು ಬಾರಿ ಯೋಚಿಸುವಂತಾಗುತ್ತದೆ. ಅರ್ಧ ಗಂಟೆ ಯೋಚಿಸಿದ ಮೇಲೆ ಹೆಸರು ಅಸ್ಪಷ್ಟವಾಗಿ ನೆನಪಾಗುತ್ತದೆ. ನೆನಪಾದ ಹೆಸರಿನ ಬಗ್ಗೆ ಮತ್ತೆ ಅನುಮಾನ ಆರಂಭವಾಗುತ್ತದೆ.

ಅರಳು ಮರುಳಿನಿಂದ ಬಳಲುವವರು ಕೆಲವೊಮ್ಮೆ ತಮ್ಮ ಮನೆಯ ದಾರಿಯನ್ನೇ ಮರೆತು ನಿಂತಲ್ಲೇ ನಿಂತು ಬಿಡುತ್ತಾರೆ. ತಾವೇ ಕಟ್ಟಿಸಿದ ಸ್ವಂತ ಮನೆಯಿಂದ ಎಷ್ಟೋ ಕಿಲೋ ಮೀಟರ್‌ಗಟ್ಟಲೇ ದೂರ ನಡುರಾತ್ರಿಯಲ್ಲಿ ಕೂಡ ಹೋಗಿ ಬಂದಿರುತ್ತಾರೆ. ಡೈನಿಂಗ್ ಹಾಲ್‌ನಲ್ಲಿ ಹೊಟ್ಟೆ ತುಂಬಾ ತಿಂಡಿ ತಿಂದು, ಆಚೆ ಹೋಗಿ ಹಾಲ್‌ನಲ್ಲಿ ಟಿ.ವಿ. ನೋಡುತ್ತಾ ಕುಳಿತರೆ ತಾನು ತಿಂಡಿ ತಿಂದಿದ್ದೇನೆ ಎನ್ನುವುದೇ ಮರೆತು ಹೋಗುತ್ತದೆ. ತಿಂಡಿ ತಿಂದ ಎರಡು ನಿಮಿಷಕ್ಕೆ ಏನು ತಿಂಡಿ ತಿಂದಿದ್ದೀರಾ ಎಂದು ಕೇಳಿದರೆ, ಅವರಿಗೆ ಏನೆಂದು ಹೇಳಲಾಗದಂತಹ ಮಹಾಮರೆವು ಆವರಿಸಿಕೊಂಡು ಬಿಡುತ್ತದೆ.

ಮನೆ ಮಂದಿಗೆಲ್ಲ ಮುಜುಗರ

ಕೆಲವೊಮ್ಮೆ ತಮ್ಮ ವಿಚಿತ್ರ ಚಟುವಟಿಕೆಯಿಂದ ಮನೆಯವರನ್ನು ಮುಜುಗರಕ್ಕೀಡು ಮಾಡುತ್ತಾರೆ. ಮನೆಯವರೆದುರು ಹೀಗಾದರೆ ಹಾಗಲ್ಲ, ಹೀಗೆ ಎಂದು ಹೇಳಬಹುದು. ಅದೇ ಮನೆಗೆ ಬಂದ ಅಪರೂಪದ ಅತಿಥಿಗಳೆದುರು ಹೀಗಾಗಿಬಿಟ್ಟರೆ? ಅಬ್ಬಾ ಭಯಂಕರ ಮುಜುಗರವಾಗುತ್ತದೆ. ಅದಕ್ಕೇ ಅರಳು ಮರುಳಾದವರನ್ನು ಅವರ ಮಕ್ಕಳೋ, ಸೊಸೆಯರೋ ಮನೆಗೆ ಯಾರಾದರೂ ಬಂದರೆ ಅವರೆದುರು ಕಾಣಿಸಿಕೊಳ್ಳಬೇಡಿ ಎಂದು ಕಟ್ಟುನಿಟ್ಟಿನಾಜ್ಞೆ  ಹೊರಡಿಸಿರುತ್ತಾರೆ. ಎಷ್ಟೆಂದರೂ ಇವರಿಗೆ ಅರಳು ಮರುಳಲ್ಲವೇ. ‘ನಿಷೇದಾಜ್ಞೆ’ಗಳು ಎಲ್ಲಿ ನೆನಪಿರುತ್ತವೆ? ಅವರು ಅತಿಥಿಗಳು ಮನೆಗೆ ಬಂದ ಸಮಯಕ್ಕೆ ಸರಿಯಾಗಿಯೇ ಬಿಲದಿಂದ ಹುಳ ಹುಪ್ಪಟಿಗಳು ಬಂದAತೆ ಹೊರ ಬಂದುಬಿಡುತ್ತಾರೆ.

ಹಾಗೆ ಅತಿಥಿಗಳೆದುರು ದಿಢೀರ್ ಎಂದು ಪ್ರತ್ಯಕ್ಷವಾದವರು ಬೇರೆನೂ ಮಾತನಾಡುವುದಿಲ್ಲ. ತಮಗೆ ಈ ಮನೆಯಲ್ಲಿ ಮಕ್ಕಳಿಂದ, ಸೊಸೆಯರಿಂದ ಆಗುವ ಕಿರುಕುಳದ ಬಗ್ಗೆ ಮಾತ್ರ ಸ್ಪುಟವಾಗಿ ಹೇಳಿ ಕಂಬನಿ ಮಿಡಿಯುತ್ತಾರೆ. ನಿಮಗೆ ಆಶ್ಚರ್ಯವಾಗಬಹುದು. ಬರಬೇಡ ಎಂದ ಆಜ್ಞೆ ಮರೆಯುತ್ತದೆ. ಉಂಡದ್ದು ಮರೆಯುತ್ತದೆ. ಮನೆ ದಾರಿ ದಿಕ್ಕು ತಪ್ಪುತ್ತದೆ.

ಕಡೆಗೆ ತಮ್ಮ ಹೆಸರೇ ಮರೆತು ಪ್ಯಾ ಪ್ಯಾ ಅನ್ನುತ್ತಿರುತ್ತಾರೆ. ಆದರೆ ಬೈದದ್ದು, ಅವಮಾನಿಸಿದ್ದು, ಗೇಲಿ ಮಾಡಿದ್ದು ಮಾತ್ರ ಅಚ್ಚಳಿಯದೆ ಯಾಕೆ ನೆನಪಿರುತ್ತದೆ? ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟುತ್ತದೆ. ಹೌದು, ಅರಳು ಮರುಳು ಖಾಯಿಲೆಯ ಬಹುದೊಡ್ಡ ಪ್ರಾರಬ್ಧವಿದು. ಇಂತಹ ಕಾರಣಕ್ಕಾಗಿಯೇ ಮನೆಮಂದಿಗೆಲ್ಲ ಇದು ಮಹಾ ಪೀಡೆಯಾಗಿ ಬಾಧಿಸುತ್ತಿರುತ್ತದೆ.

ಸಹಾನುಭೂತಿಯಿರಲಿ, ಪ್ರೀತಿಯಿರಲಿ...

ಎಲ್ಲವನ್ನೂ ಮರೆಯುವವರು, ಹೀಯಾಳಿಕೆಯ ಪ್ರಸಂಗವನ್ನು ಮಾತ್ರ ಮರೆಯದೇ ಅದನ್ನು ಇತರರಿಗೆ ಹೇಳಿ ಮತ್ತಷ್ಟು ಮುಜುಗರಕ್ಕೀಡು ಮಾಡುವ ಹಿರಿಯ ಜೀವಗಳಿಗೆ ಅಂಗಾಂಗಳ ನಶಿಸುವಿಕೆಯಿಂದ ನೆನಪು ಮರೆಯುತ್ತದೆಯೇ ವಿನಃ ನೋವು ಮರೆಯುವುದಿಲ್ಲ. ಅದೂ ದೇಹಕ್ಕಿಂತ ಮನಸ್ಸಿಗಾದ ನೋವು ಅಚ್ಚಳಿಯದೆ ನೆಲೆಯೂರಿಬಿಟ್ಟಿರುತ್ತದೆ. ಯಾಕೆಂದರೆ ನೀವು ಬೈದದ್ದು, ಗೇಲಿ ಮಾಡಿದ್ದು ಮೆದುಳಿಗೆ ನಾಟಿರುವುದಿಲ್ಲ. ಹೃದಯಕ್ಕೆ ಇರಿದಿರುತ್ತದೆ.ವಯಸ್ಸಾದಂತೆಲ್ಲಾ ನಮ್ಮ ಅಂಗಾAಗಗಳು ಮುದಿ ಬೀಳಬಹುದು. ಆದರೆ ಹೃದಯ ಯಾವತ್ತಿಗೂ ಮುದಿ ಬೀಳುವುದಿಲ್ಲ.

ಎಷ್ಟೆಂದರೂ ಅರವತ್ತರ ನಂತರದ ದಿನಗಳು ದುಡಿದ ಜೀವಕ್ಕೆ ದಣಿವಾರಿಸಿಕೊಳ್ಳಲಿರುವ ಸಮಯ. ಅವರ ಅರಳು ಮರುಳನ್ನು, ದೈಹಿಕ ಬಲಹೀನತೆಯನ್ನು ಗೇಲಿ ಮಾಡುವುದಕ್ಕಿಂತ ಆರೈಕೆ ಮಾಡುವ ಸಹೃದಯತೆ ನಮ್ಮಲ್ಲಿ ಸೃಷ್ಟಿಯಾಗಬೇಕು. ಇವತ್ತು ನಮ್ಮ ತಂದೆ-ತಾಯಿಗಳನ್ನು ನಡೆಸಿಕೊಳ್ಳುವ ಪ್ರತಿ ಕ್ಷಣವನ್ನು ನಮ್ಮ ಮಕ್ಕಳು ಬಿಡುಗಣ್ಣಿನಿಂದ ಗಮನಿಸಿರುತ್ತಾರೆ.

ನಾಳೆ ನಾವೂ ಮುದುಕರಾಗಬೇಕಲ್ಲವೇ? ಆಗ ನಮ್ಮ ಮಕ್ಕಳು ನಾವು ಮಾಡಿದ್ದನ್ನೇ ಚಾಚೂ ತಪ್ಪದೇ ಪಾಲಿಸುತ್ತವೆ. ಹಾಗಾಗಿ ಅರವತ್ತರ ಅರಳು ಮರುಳನ್ನು ಗೇಲಿ ಮಾಡುವುದು ತರವಲ್ಲ. ಅದು ಮನುಷ್ಯ ಸಹಜ ಇಳಿವಯಸ್ಸಿನ ಬಳುವಳಿ ಅಷ್ಟೇ. ಅಲ್ಲಿಯವರೆಗೆ ಬದುಕಿದ್ದರೆ ನಾವು ಅಂತಹದ್ದೊAದು ಪರಿಸ್ಥಿತಿಗೆ ಎದುರಿಸಲೇಬೇಕಲ್ಲ..? ಆದ್ದರಿಂದ ಹಿರಿಯರ ಬಗ್ಗೆ ಗೌರವವಿರಲಿ, ಸಹಾನುಭೂತಿಯಿರಲಿ, ಪ್ರೀತಿಯಿರಲಿ..!

| ಮಾಲತೇಶ ಎಂ.,

WhatsApp - 1 WhatsApp - 2 WhatsApp - 3 Join Telegram

Tags: