UPSC reservation for EWS also : ಆರ್ಥಿಕವಾಗಿ ಹಿಂದುಳಿದವರಿಗೂ ಸಿಗಲಿದೆ ಯುಪಿಎಸ್‌ಸಿ ಮೀಸಲಾತಿ

ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಪರಿಶಿಷ್ಟರಿಗೆ ಇರುವ ಹಾಗೆ ‘ಮೀಸಲಾತಿ’ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ...

Feb 20, 2025 - 11:58
WhatsApp - 1 WhatsApp - 2 WhatsApp - 3 Join Telegram

UPSC reservation for EWS also : ಆರ್ಥಿಕವಾಗಿ ಹಿಂದುಳಿದವರಿಗೂ ಸಿಗಲಿದೆ ಯುಪಿಎಸ್‌ಸಿ ಮೀಸಲಾತಿ

Kannada Mitra - News Desk.

ಕೇಂದ್ರ ಲೋಕಸೇವಾ ಆಯೋಗ (Union Public Service Commission - UPSC) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ (Economically Weaker Section - EWS) ಅಭ್ಯರ್ಥಿಗಳಿಗೂ ಪರಿಶಿಷ್ಟರಿಗೆ ಇರುವ ಹಾಗೆ ‘ಮೀಸಲಾತಿ’ ನೀಡುವಂತೆ ಹೈಕೋರ್ಟ್ ಆದೇಶ ನೀಡಿದೆ.

ಯುಪಿಎಸ್‌ಸಿ ಪರೀಕ್ಷೆಗಾಗಿ ಗರಿಷ್ಠ ವಯೋಮಿತಿಯಲ್ಲಿ 05 ವರ್ಷಗಳ ವಿನಾಯ್ತಿ ಹಾಗೂ ಇತರ ಮೀಸಲು ಅಭ್ಯರ್ಥಿಗಳಿಗೆ ನೀಡಿದಂತೆ ಗರಿಷ್ಠ 9 ಬಾರಿ ಪರೀಕ್ಷೆ ನೀಡಲು ಅವಕಾಶ ಒದಗಿಸಬೇಕು ಎಂದು ಕೇಂದ್ರ ಲೋಕಸೇವಾ ಆಯೋಗಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿದೆ.

ಇತರ ಮೀಸಲು ಅಭ್ಯರ್ಥಿಗಳಿಗೆ ನೀಡಲಾಗಿರುವ ಸೌಲಭ್ಯಗಳನ್ನು ಏಕೆ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಒದಗಿಸಲಾಗುತ್ತಿಲ್ಲ ಎಂಬುದನ್ನು ಪ್ರಶ್ನಿಸಿ ಮಧ್ಯಪ್ರದೇಶದ ಮೈಹಾರ್ ನಗರದ ಆದಿತ್ಯ ನಾರಾಯಣ್ ಪಾಂಡೆ ಎಂಬುವವರು ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸುರೇಶ್‌ಕುಮಾರ್ ಕೈಟ್ ಹಾಗೂ ಸುರೇಶ್ ಜೈನ್ ಅವರಿದ್ದ ಪೀಠವು ಇತ್ತೀಚೆಗೆ ಈ ಮಧ್ಯಂತರ ಆದೇಶ ನೀಡಿದೆ. ಈ ವರ್ಗದ ಅಭ್ಯರ್ಥಿಗಳ ಅಂತಿಮ ಫಲಿತಾಂಶ ಕೋರ್ಟ್ ನೀಡುವ ಆದೇಶಕ್ಕೆ ಒಳಪಟ್ಟಿದೆ ಎಂದೂ ಸ್ಪಷ್ಟಪಡಿಸಿದೆ.

ಕಡೆಗೂ ಜಿಪಂ, ತಾಪಂ ಚುನಾವಣೆಗೆ ಮುಹೂರ್ತ ಫಿಕ್ಸ್ | ಹೈಕೋರ್ಟ್'ನಲ್ಲಿ ಮಹತ್ವದ ವಿಚಾರಣೆ

ಅರ್ಜಿದಾರರ ವಾದವೇನು?

ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳೊಂದಿಗೆ ಹೋಲಿಸಲಾಗದು. ಅವರಂತೆಯೇ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗದು ಎಂದು ಕೋರಿರುವ ಅರ್ಜಿದಾರರು, ಇತರ ಮೀಸಲು ಅಭ್ಯರ್ಥಿಗಳಿಗೆ ಸಮಾನವಾದ ಅವಕಾಶಗಳಿಂದ ವಂಚಿತರನ್ನಾಗಿ ಮಾಡಲಾಗಿದೆ ಎಂದು ದೂರಿದ್ದಾರೆ.

ಎಸ್‌ಸಿ/ಎಸ್‌ಟಿ, ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 05 ವರ್ಷಗಳ ವಿನಾಯ್ತಿ ನೀಡಲಾಗುತ್ತಿದೆ. ಗರಿಷ್ಠ 9 ಬಾರಿ ಪರೀಕ್ಷೆ ಬರೆಯುವ ಅವಕಾಶವಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮೊಬೈಲ್‌ನಲ್ಲಿಯೇ ಹೊಸ ಮತದಾರರ ಚೀಟಿಗೆ ಅರ್ಜಿ ಹಾಕಿ | ಆನ್‌ಲೈನ್ ಮೂಲಕ ಮತದಾರರ ಪಟ್ಟಿಗೆ ಸೇರುವ ಸರಳ ವಿಧಾನ ಇಲ್ಲಿದೆ... 

ಈಗಿರುವ ಅರ್ಹತಾ ಮಾನದಂಡಗಳು

ವಯೋಮಿತಿಗೆ ಸಂಬಂಧಿಸಿದಂತೆ ಆಗಸ್ಟ್ 1ಕ್ಕೆ ಅನ್ವಯವಾಗುವಂತೆ ಕನಿಷ್ಠ 21 ವರ್ಷ 32 ವರ್ಷದೊಳಗಿರಬೇಕು. ಪರಿಶಿಷ್ಟರು, ಅಂಗವಿಕಲರು, ಮಾಜಿ ಯೋಧರಿಗೆ ಗರಿಷ್ಠ 5 ವರ್ಷ, ಹಿಂದುಳಿದವರಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ಸಾಮಾನ್ಯ ಅಭ್ಯರ್ಥಿಗಳು ಗರಿಷ್ಠ 6 ಬಾರಿ, ಹಿಂದುಳಿದ ವರ್ಗದವರು 9 ಬಾರಿ ಪರೀಕ್ಷೆಗೆ ಹಾಜರಾಗಬಹುದು. ಆದರೆ, ಪರಿಶಿಷ್ಟರಿಗೆ ಯಾವುದೇ ಮಿತಿಯಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ ಸಿಗುತ್ತಾ ಮೀಸಲಾತಿ?

ಸದರಿ ಹೈಕೋರ್ಟ್ ಆದೇಶ ಯಥಾವತ್ ಪಾಲನೆಯಾದರೆ ಆರ್ಥಿಕ ಹಿಂದುಳಿದ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ ಇತರರಿಗೆ ನೀಡಲಾಗುವ ಮೀಸಲು ಸೌಲಭ್ಯವೇ ದೊರೆಯಲಿದೆ. ಆದರೆ, ಯುಪಿಎಸ್‌ಸಿ ಪರೀಕ್ಷಾ ಸ್ವರೂಪ ಹಾಗೂ ಇತರ ನಡೆಗಳನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್’ನಲ್ಲಿ ಹೋರಾಟ ಮುಂದುವರಿಸಿದೆ. ಅದರಂತೆ, ಮೀಸಲು ಆದೇಶವನ್ನು ಪ್ರಶ್ನಿಸಿ ಅ ಮೇಲ್ಮನವಿ ಸಲ್ಲಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

e-Khata - ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಇ-ಖಾತೆ | ಸರ್ಕಾರದ ಹೊಸ ಯೋಜನೆ

WhatsApp - 1 WhatsApp - 2 WhatsApp - 3 Join Telegram

Tags: