GREAT Scholarships 2025 - ಪದವೀಧರ ವಿದ್ಯಾರ್ಥಿಗಳಿಗೆ 8 ಲಕ್ಷ ರೂ. ವಿದ್ಯಾರ್ಥಿವೇತನ | ವಿದೇಶಿ ವ್ಯಾಸಂಗಕ್ಕೆ ಆರ್ಥಿಕ ನೆರವು
ನೀವು ಪದವೀಧರರಾಗಿದ್ದು; ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಕನಸು ಹೊಂದಿದ್ದರೆ ‘ಬ್ರಿಟಿಷ್ ಕೌನ್ಸಿಲ್’ ನಿಮ್ಮ ಕನಸಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಲಿದೆ. ಹೌದು, ಸದರಿ ಬ್ರಿಟಿಷ್ ಕೌನ್ಸಿಲ್ ‘ಗ್ರೇಟ್ ಸ್ಕಾಲರ್‌ಶಿಪ್ 2025’ನ್ನು ಘೋಷಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ...
WhatsApp - 1 | WhatsApp - 2 | WhatsApp - 3 | Join Telegram |

Kannada Mitra - News Desk.
ನೀವು ಪದವೀಧರರಾಗಿದ್ದು; ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಕನಸು ಹೊಂದಿದ್ದರೆ ‘ಬ್ರಿಟಿಷ್ ಕೌನ್ಸಿಲ್’ ನಿಮ್ಮ ಕನಸಿಗೆ ಸಂಪೂರ್ಣ ಬೆಂಬಲವಾಗಿ ನಿಲ್ಲಲಿದೆ. ಹೌದು, ಸದರಿ ಬ್ರಿಟಿಷ್ ಕೌನ್ಸಿಲ್ ‘ಗ್ರೇಟ್ ಸ್ಕಾಲರ್‌ಶಿಪ್ 2025’ನ್ನು (GREAT Scholarships 2025) ಘೋಷಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
2025-26ನೇ ಶೈಕ್ಷಣಿಕ ವರ್ಷದಲ್ಲಿ ವಿದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ (Post Graduate Course) ಅಧ್ಯಯನಕ್ಕೆ ದಾಖಲಾತಿ ಪಡೆಯುವ ಭಾರತೀಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
8,97,940 ರೂ. ಸಹಾಯಧನ
ಯುಕೆ ಸರ್ಕಾರದ ಬ್ರಿಟನ್ ಅಭಿಯಾನದ ಭಾಗವಾಗಿ ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಸ್ನಾತಕೋತ್ತರ ಕೋರ್ಸ್'ಗೆ ಕನಿಷ್ಠವೆಂದರೂ 8,97,940 (10,000 ಯೂರೋ) ಟ್ಯೂಷನ್ ಫೀಸ್ ದೊರೆಯಲಿದೆ.
ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು, ಇಂಗ್ಲಿಷ್ ಜ್ಞಾನ ಹೊಂದಿರುವವರು ಈ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಶೈಕ್ಷಣಿಕ ಹಾಗೂ ವೈಯಕ್ತಿಕ ಅಗತ್ಯತೆಗಳನ್ನು ಪೂರೈಸಲು ತೊಡಗಿಸಿಕೊಳ್ಳಬೇಕು.
ವಿವಿಧ ವಿದ್ಯಾರ್ಥಿವೇತನಗಳು
ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ 26 ವಿದ್ಯಾರ್ಥಿವೇತನಗಳಿಗೆ ಅವಕಾಶ ನೀಡಲಾಗಿದ್ದು, ಮೂರು ವರ್ಗಗಳಲ್ಲಿ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಕೋರ್ ಸಬ್‌ಜೆಕ್ಟ್ ಕೇಂದ್ರೀಕೃತವಾಗಿಯೇ ವಿವಿಧ ವಿಭಾಗಗಳಲ್ಲಿ ಅಧ್ಯಯನ ಮಾಡುವವರಿಗೆ 21 ವಿದ್ಯಾರ್ಥಿವೇತನಗಳು ಮೀಸಲಿವೆ. ನ್ಯಾಯ ಹಾಗೂ ಕಾನೂನಿನಲ್ಲೇ ಸ್ನಾತಕೋತ್ತರ ಮಾಡಬೇಕೆಂದಿರುವವರಿಗೆ 2 ಸ್ಕಾಲರ್‌ಶಿಪ್’ಗಳಿವೆ. ಸ್ಟೆಮ್ ಕ್ಷೇತ್ರದಲ್ಲಿ ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಧನೆ ಮಾಡಬೇಕೆಂದಿರುವವರಿಗೆ 3 ಶಿಷ್ಯವೇತನಗಳಿವೆ.
ಯಾವೆಲ್ಲ ಕಾಲೇಜುಗಳು?
ಆಸ್ಟನ್ ಯೂನಿವರ್ಸಿಟಿ, ಎಡ್ಜ್ ಹಿಲ್ ಯೂನಿವರ್ಸಿಟಿ, ಲೀಡ್ಸ್ ಆರ್ಟ್ಸ್ ಯೂನಿವರ್ಸಿಟಿ, ರಾಯಲ್ ಕಾಲೇಜ್ ಆಫ್ ಆರ್ಟ್ಸ್, ಯೂನಿವರ್ಸಿಟಿ ಆಫ್ ಮ್ಯಾನ್‌ಚೆಸ್ಟರ್, ಟ್ರಿನಿಟಿ ಲಬಾನ್, ಯೂನಿವರ್ಸಿಟಿ ಕಾಲೇಜ್ ಲಂಡನ್ ಯೂನಿವರ್ಸಿಟಿ ಆಫ್ ಬಾತ್ ಸೇರಿದಂತೆ ಒಟ್ಟು 26 ವಿದೇಶಿ ಕಾಲೇಜುಗಳಲ್ಲಿ ಅಧ್ಯಯನ ಮಾಡಲು ಈ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಯೂನಿವರ್ಸಿಟಿ ಆಫ್ ಪ್ರೈಮೌತ್, ಕ್ಲೀನ್ಸ್ ಯೂನಿವರ್ಸಿಟಿ ಬೆಲ್‌ಫಾಸ್ಟ್'ನಲ್ಲಿ ಒಂದು ವರ್ಷದ ಕಾನೂನು ಸ್ನಾತಕೋತ್ತರ ಪದವಿ ಪಡೆಯುವವರಿಗೆ ಸಹಾಯವಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕ್ರಾನ್‌ಫೀಲ್ಡ್ ಯೂನಿವರ್ಸಿಟಿ, ಯೂನಿವರ್ಸಿಟಿ ಆಫ್ ಡರ್ಬಿ, ಯೂನಿವರ್ಸಿಟಿ ಆಫ್ ಎಡಿನ್‌ಬುರೋದಲ್ಲಿ ಸ್ನಾತಕೋತ್ತರ ಪಡೆಯುವ ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಈ ವಿದ್ಯಾರ್ಥಿವೇತನಕ್ಕೆ ಹೊಂದಿಕೆಯಾಗುವ ಮೇಲ್ಕಾಣಿಸಿದ 26 ವಿವಿಗಳಲ್ಲಿ ಆಸಕ್ತಿಯಿರುವ ಯಾವುದಾದರೂ ವಿವಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಸಂಸ್ಥೆಗಳಿಗೆ ಅನುಗುಣವಾಗಿ ಬೇರೆಯಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ: www.britishcouncil.in
ಇವುಗಳನ್ನೂ ಓದಿ:
- ರೈತರಿಗೆ ಕೋಟಿ ಕೋಟಿ ಆದಾಯದ ಡಾರ್ಪರ್ ಕುರಿ ಸಾಕಣೆ | ವಿದೇಶಿ ತಳಿಯ ಸಂಪೂರ್ಣ ಮಾಹಿತಿ ಇಲ್ಲಿದೆ...
- ಮಳೆಬೆಳೆ ಸಮೃದ್ಧಿ ಅನ್ನದಾತರು ಸತೃಪ್ತ | ರೈತರ ಬದುಕು ವಿಶ್ಲೇಷಿಸುವ ಮೈಲಾರ ಕಾರ್ಣಿಕಗಳು
- ಮೊಬೈಲ್ನಲ್ಲಿಯೇ ಹೊಸ ಮತದಾರರ ಚೀಟಿಗೆ ಅರ್ಜಿ ಹಾಕಿ | ಆನ್ಲೈನ್ ಮೂಲಕ ಮತದಾರರ ಪಟ್ಟಿಗೆ ಸೇರುವ ಸರಳ ವಿಧಾನ ಇಲ್ಲಿದೆ...
- e-Khata - ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಇ-ಖಾತೆ | ಸರ್ಕಾರದ ಹೊಸ ಯೋಜನೆ
WhatsApp - 1 | WhatsApp - 2 | WhatsApp - 3 | Join Telegram |